ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿ ತೊಡೆ ಮೇಲಿದ್ದ ಟ್ಯಾಟೂ ಕ್ಲಿಕ್ಕಿಸಿದ ಮ್ಯಾನೇಜರ್

|
Google Oneindia Kannada News

ಬೆಂಗಳೂರು, ನ. 21 : ಈತನಿಗೂ ಟ್ಯಾಟೋ ಹಾಕಿಸಿಕೊಳ್ಳುವ ಆಸೆಯಂತೆ, ಹಾಗಾಗಿ ಯುವತಿಯ ತೊಡೆಯ ಮೇಲೆ ಸುಂದರವಾಗಿ ಕಂಡ ಟ್ಯಾಟೂ ಚಿತ್ರವನ್ನು ತನ್ನ ಮೊಬೈಲ್ ನಲ್ಲಿ ಕ್ಲಿಕ್ಕಿಸಿದನಂತೆ!

ಕಾಫಿ ಶಾಪ್ ನಲ್ಲಿ ಯುವತಿ ಫೋಟೋ ತೆಗೆದ ಎಡಿಜಿಪಿ ರವೀಂದ್ರನಾಥ್ ಪ್ರಕರಣ ಮತ್ತೆ ಮರುಕಳಿಸಿದೆ. ಆದರೆ ಈ ಬಾರಿ ಫೋಟೋ ಕ್ಲಿಕ್ಕಿಸಿದ್ದು ಕೆಎಫ್ ಸಿಯ ಮ್ಯಾನೇಜರ್. ಯುವತಿಯ ತೊಡೆ ಮೇಲಿದ್ದ ಟ್ಯಾಟೂ ಕ್ಲಿಕ್ಕಿಸಿದ ಆರೋಪದ ಮೇಲೆ ಹುಳಿಮಾವು ಕೆಎಫ್ ಸಿ ಮ್ಯಾನೇಜರ್ ವಿಕಾಸ್(28) ಎಂಬಾತನನ್ನು ಬಂಧಿಸಲಾಗಿದೆ.[ಕೆಫೆಯಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸಿದ ಎಡಿಜಿಪಿ]

Bengaluru

ನ. 2ರಂದು ಅಸ್ಸಾಂ ಮೂಲದ ಯುವತಿಯೊಬ್ಬಳು ತನ್ನ ಸ್ನೇಹಿತರ ಜತೆ ಮೀನಾಕ್ಷಿ ಮಾಲ್ ನಲ್ಲಿರುವ ಕೆಎಫ್ ಸಿ ರೆಸ್ಟೋರೆಂಟ್ ಗೆ ತೆರಳಿದ್ದರು. ಅವರಿಬ್ಬರು ತಿಂಡಿ ತಿನ್ನುತ್ತಿರುವಾಗ ಮ್ಯಾನೇಜರ್ ವಿಕಾಸ್ ತನ್ನ ಮೊಬೈಲ್ ನಲ್ಲಿ ಯುವತಿಯ ಚಿತ್ರ ಸೆರೆಹಿಡಿದಿದ್ದಾನೆ. ತಕ್ಷಣ ಇದನ್ನು ಪ್ರಶ್ನಿಸಿದ ಯುವತಿ, ಮೊಬೈಲ್ ತೋರಿಸುವಂತೆ ಕೇಳಿದ್ದಾಳೆ.

ಈ ವೇಳೆ ಎಲ್ಲ ಗ್ರಾಹಕರು ಮತ್ತು ರೆಸ್ಟೋರೆಂಟ್ ನ ಇತರ ಸಿಬ್ಬಂದಿ ಒಟ್ಟಾಗಿದ್ದಾರೆ. ಮೊಬೈಲ್ ಪರಿಶೀಲಿಸಿದಾಗ ಯುವತಿ ಮತ್ತು ಆಕೆಯ ತೊಡೆಯ ಮೇಲೆ ಹಾಕಿಕೊಂಡ ಟ್ಯಾಟೂ ತೆಗೆದಿದ್ದು ಕಂಡುಬಂದಿದೆ.[ಸೆರೆಹಿಡಿದ ಚಿತ್ರಗಳು ಪತ್ತೆ]

ತೊಡೆ ಮೇಲೆ ಹಾಕಿಕೊಂಡ ಟ್ಯಾಟೂ ಸುಂದರವಾಗಿ ಕಾಣುತ್ತಿತ್ತು. ನಾನು ಅಂಥದ್ದೇ ಟ್ಯಾಟೂ ಹಾಕಿಸಿಕೊಳ್ಳಬೇಕೆಂದು ಫೋಟೋ ತೆಗೆದೆ ಎಂದು ವಿಕಾಸ್ ಹೇಳಿದ್ದ. ನಂತರ ಘಟನೆಗೆ ಸಂಬಂಧಿಸಿ ನವೆಂಬರ್ 18 ರಂದು ಯುವತಿ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಕೋಡಿಚಿಕ್ಕನಹಳ್ಳಿಯಲ್ಲಿ ವಾಸವಿದ್ದ ಆರೋಪಿಯನ್ನು ಬಂಧಿಸಿ, ಮೊಬೈಲ್ ನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಘಟನೆ ದಿನವೇ ವಿಕಾಸ್ ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಪ್ರಕರಣ ನಡೆದ ಸಂದರ್ಭ ಕೆಎಫ್ ಸಿ ಅಪರೇಷನಲ್ ಮ್ಯಾನೇಜರ್ ಮತ್ತು ಸಿಬ್ಬಂದಿ ದೂರು ನೀಡದಂತೆ ಯುವತಿಯ ಮನವೊಲಿಸಲು ಪ್ರಯತ್ನಿಸಿದ್ದರು. ಯುವತಿ ಪಾಲಕರನ್ನು ಸಂಪರ್ಕಿಸುವುದಾಗಿ ಹೇಳಿದ್ದರಿಂದ ದೂರು ನೀಡಲು ತಡವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
The Hulimavu police have arrested Vikas [28] manager of KFC restaurant located in a mall on Bannerghatta road for allegedly clicking photographs of a girl on his cellphone. The incident is said to have taken place inside the KFC restaurant in Meenakshi Mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X