ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ: ಮುಂಬೈನತ್ತ ಬಂಡಾಯ ಶಾಸಕರು?

|
Google Oneindia Kannada News

Recommended Video

ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರು | Oneindia Kannada

ಬೆಂಗಳೂರು, ಸೆಪ್ಟೆಂಬರ್ 18: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಕಾಂಗ್ರೆಸ್ ನ ಅತೃಪ್ತ ಶಾಸಕರು ಮುಂಬೈನ ರೆಸಾರ್ಟ್ ವೊಂದಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಆರಂಭವಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಕೆಲವು ಮೂಲಗಳ ಪ್ರಕಾರ ಮಹಾರಾಷ್ಟ್ರದ ಬಿಜೆಪಿ ಸರ್ಕಾರವೇ ಬಂಡಾಯ ಶಾಸಕರಿಗೆ ಆತಿಥ್ಯ ನೀಡಲಿದೆ!

ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!ಬಿಜೆಪಿಯಿಂದ ಡಿಸಿಎಂ ಆಫರ್, ಜಾರಕಿಹೊಳಿ ಸಿಡಿಸಿದ ಹೊಸ ಬಾಂಬ್!

ಸದ್ಯಕ್ಕೆ ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಂಡಾಯ ನಾಯಕರು ಚರ್ಚೆ ನಡೆಸಿದ್ದು, ಹತ್ತಕ್ಕೂ ಹೆಚ್ಚು ಬಂಡಾಯ ಶಾಸಕರು ಖಾಸಗಿ ವಿಮಾನದ ಮೂಲಕ ಮಹಾರಾಷ್ಟ್ರಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Resort politics in Karnataka: Rebel MLAs may travel to Mumbai resort today

ರಮೇಶ್ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿರುವ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೊದಲು 18 ಕ್ಕೂ ಹೆಚ್ಚು ಶಾಸಕರು ಬಂಡಾಯ ಬಣದಲ್ಲಿದ್ದಾರೆ ಎನ್ನಲಾಗಿತ್ತು.

ಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳುಸಿದ್ದರಾಮಯ್ಯ ಎದುರು ರಮೇಶ್ ಜಾರಕಿಹೊಳಿ ಇರಿಸಿದ ಮೂರು ಬೇಡಿಕೆಗಳು

ಬಂಡಾಯ ಶಾಸಕರು ವಾಟ್ಸಾಪ್ ಕಾಲ್ ಮೂಲಕವೇ ಸಂವಹನ ನಡೆಸುತ್ತಿದ್ದು, ಕಾಲ್ ರೆಕಾರ್ಡ್ ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ಉಪಾಯ ಕೈಗೊಂಡಿದ್ದಾರೆ ಎನ್ನಲಾಗಿದೆ.

English summary
Resort politics may start in Karnataka again! According to some sources, more than 10 MLA's who are with rebel minister Ramesh Jarkiholi are travelling to Mumbai to a resort by private flight today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X