ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಸುರಂಗ ಮಾರ್ಗದ ಆಸುಪಾಸಿರುವ ಬೋರ್‌ವೆಲ್‌ಗಳಿಗೆ ಬೀಗ

|
Google Oneindia Kannada News

ಬೆಂಗಳೂರು, ಏ.16: ನಮ್ಮ ಮೆಟ್ರೋ ಎರಡನೇ ಹಂತದ ನಾಗವಾರ-ಗೊಟ್ಟೆಗೆರೆ ಮಾರ್ಗದಲ್ಲಿ ಬರುವ ಸುರಂಗ ಮಾರ್ಗ ಮೆಟ್ರೋ ನಿಲ್ದಾಣದ ಆಸುಪಾಸಿನಲ್ಲಿರುವ ಬೋರ್‌ವೆಲ್‌ಗಳಿಗೆ ಬೀಗ ಹಾಕಲಾಗುತ್ತಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಹೀಗಾಗಿ ಡೈರಿ ವೃತ್ತದಿಂದ ನಾಗವಾರ ಮಾರ್ಗದ ಸುತ್ತಲಿನ ನಿವಾಸಿಗೆ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇದೆ. ಡೈರಿ ವೃತ್ತದಿಂದ ನಾಗವಾರ ಮೆಟ್ರೋ ನಿಲ್ದಾಣಕ್ಕೆ ಒಟ್ಟು 14 ಕಿ.ಮೀ ವ್ಯಾಪ್ತಿಯಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ತೆರೆದ ಬಾವಿ ಸೇರಿದಂತೆ ಬೋರ್‌ವೆಲ್‌ಗಳನ್ನು ಬಂದ್ ಮಾಡಲಾಗುತ್ತಿದೆ.

ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು ನಮ್ಮ ಮೆಟ್ರೋ 2ನೇ ಹಂತ: ಚಿಕ್ಕ ಸುರಂಗ ನಿಲ್ದಾಣಗಳು

ಸುರಂಗದಲ್ಲಿ ಒಟ್ಟು 12 ನಿಲ್ದಾಣಗಳು ಬರಲಿವೆ. ಡೈರಿ ವೃತ್ತ, ಮೈಕೋ ಲೇಔಟ್, ಲಾಂಗ್‌ಫರ್ಡ್ ಟೌನ್, ವೆಲ್ಲಾರ ಜಂಕ್ಷನ್, ಎಂಜಿ ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್‌, ಪಾಟರಿ ಟೌನ್, ವೆಂಕಟೇಶಪುರ, ಅರೇಬಿಕ್ ಕಾಲೇಜು ಹಾಗೂ ನಾಗವಾರದಲ್ಲಿ ಸುರಂಗ ಮಾರ್ಗ ವಿರುತ್ತದೆ.

Residents may be hit as BMRCL to seal borewells for tunnelling

ಈ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಮುಚ್ಚುವುದರಿಂದ ಸಾವಿರಾರು ಮಂದಿಗೆ ನೀರಿನ ತೊಂದರೆ ಉಂಟಾಗಲಿದೆ. ಅಷ್ಟೇ ಅಲ್ಲದೆ ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು ಕೂಡ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೋರ್‌ವೆಲ್ ಹಾಗೂ ತೆರೆದ ಬಾವಿಗಳಲ್ಲಿ ನೀರಿನ ಒತ್ತಡ ಉಂಟಾದರೆ ನೊರೆ ಬರುವ ಸಾಧ್ಯತೆಗಳಿದ್ದು, ಸುರಂಗ ಮಾರ್ಗ ನಿರ್ಮಾಣಕ್ಕೆ ಅಡಚಣೆ ಉಂಟಗಲಿದೆ. ಮೆಟ್ರೋ ಟನಲ್‌ಗಳನ್ನು ಭೂಮಿಯ 12-18 ಮೀಟರ್ ಆಳದಲ್ಲಿ ಕೊರೆಯಲಾಗುತ್ತದೆ.

ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್

ಬೋರ್‌ವೆಲ್‌ಗಳನ್ನು ಹೊಂದಿದ್ದ ಮಾಲೀಕರಿಗೆ ಬಿಎಂಆರ್‌ಸಿಎಲ್ ಪರಿಹಾರ ನೀಡಲಿದೆ. ವಸಂತನಗರದಲ್ಲಿ ಮೆಟ್ರೋ ಸುರಂಗ ಮಾರ್ಗ ಬೇಗ, ಮಾರ್ಗ ಬದಲಾವಣೆಗೆ ಕೋರಿ ಚೇಂಜ್ ಡಾಟ್ ಆರ್ಗನೈಸೇಷನ್ ಇದುವರೆಗೆ 43 ಸಾವಿರ ಸಹಿಯನ್ನು ಸಂಗ್ರಹಿಸಿದೆ.

English summary
Residents relying on borewells and open wells along Namma Metro’s Dairy Circle and Nagawara underground section may soon have to brace for water shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X