ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು: ಒಣ ತ್ಯಾಜ್ಯ ಕೇಂದ್ರವನ್ನು ತೆರೆಯಲು ವಿಫಲವಾದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಬೆಳ್ಳಂದೂರು ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟು ಟೆಕ್ಕಿಗಳು, ಐಟಿ ಕಂಪನಿಗಳು ಇವೆ. ಕಳೆದ ಎರಡು ವರ್ಷಗಳಿಂದ ಒಣ ತ್ಯಾಜ್ಯ ಸಂಗ್ರಹ ಕೇಂದ್ರವನ್ನು ಸ್ಥಾಪನೆ ಮಾಡಿ ಎಂದು ಬಿಬಿಎಂಪಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಒಣ ತ್ಯಾಜ್ಯ ತೆರೆಯಲು ಬೇಕಾದ ವಸ್ತುಗಳನ್ನೆಲ್ಲ ಸ್ಥಳೀಯರು ಕರೀದಿ ಮಾಡಿದರೂ ಬಿಬಿಎಂಪಿ ತ್ಯಾಜ್ಯ ಕೇಂದ್ರ ತೆರೆಯಲು ಮುಂದೆ ಬಂದಿಲ್ಲ. ತ್ಯಾಜ್ಯ ವಿಲೇವಾರಿ ಅದರಲ್ಲೂ ಪ್ಲಾಸ್ಟಿಕ್ ವಸ್ತುಗಳ ವಿಲೇವಾರಿ ಸಮಸ್ಯೆಯ ಅತಿಯಾಗಿ ಕಾಡುತ್ತಿದೆ. 2011ರ ಜನಗಣತಿ ಪ್ರಕಾರ 80 ಸಾವಿರ ಮಂದಿ ವಾಸಿಸುತ್ತಿದ್ದಾರೆ

ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನ ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನ

.ಆ 80 ಸಾವಿರ ಮಂದಿ ಬಿಸಾಡುವ ತ್ಯಾಜ್ಯವನ್ನು ಕೆರೆಯ ಬಳಿ ತಂದು ಎಸೆಯಲಾಗತ್ತಿದೆ ಹೊರತು ಅದಕ್ಕೊಂದು ಕೇಂದ್ರ ನಿರ್ಮಿಸಲು ಬಿಬಿಎಂಪಿ ಸೋತಿದೆ ಎಂದು ಕಸಮುಕ್ತ ಎನ್‌ಜಿಓದ ಸೀಮಾ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

Residents pleas to fix waste centres go unheard

ನಗರದಲ್ಲಿರುವ ಅತಿ ದೊಡ್ಡ ವಾರ್ಡ್ ಇದಾಗಿದೆ. 26 ಸ್ಕ್ವೇರ್ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಕೊಡತಿ ಗೇಟ್ ಬಳಿ ಮೂರು ವರ್ಷಗಳ ಒಣ ತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು.ಸಮರ್ಪಕ ನಿರ್ವಹಣೆ ಕೊರತೆ ಅಷ್ಟೇ ಅಲ್ಲದೆ ಅದರು ಕಸವನ್ನು ಸುರಿಯುವ ತೊಟ್ಟಿಯಾಗಿ ಮಾರ್ಪಾಡಾಗಿತ್ತು. ಇದೀಗ ಒಣ ತ್ಯಾಜ್ಯ ನಿರ್ವಹಣೆಗೆ ಕೇಂದ್ರವಿ್ಲಲದ ಕಾರಣ ಒಣ ಹಾಗೂ ಹಸಿ ತ್ಯಾಜ್ಯ ಎಲ್ಲವೂ ಒಟ್ಟಿಗೆ ಸೇರಿ ಕೆರೆಗೆ ಹೋಗಿ ನೀರು ಕಲುಷಿತಗೊಳ್ಳುತ್ತಿದೆ ಎಂದರು.

ಇನ್ನು ದೊಡ್ಡ ಕನ್ನೆಳ್ಳಿ ಬಳಿ ಒಂದು ಒಣ ತ್ಯಾಜ್ಯ ಕೇಂದ್ರವನ್ನು ಸ್ಥಾಪಿಸಲಾಗಿತ್ತು ಅದು ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು ಇದೀಗ ಬಳಕೆ ಮಾಡುವ ಸ್ಥಿತಿಯಲ್ಲಿಲ್ಲ. ಅಲ್ಲಿ ಕೆಲಸ ನಿರ್ವಹಿಸುತ್ತಿರುವ 17 ಮಂದಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ ಎಂದು ಕಸಮುಕ್ತ ಬೆಂಗಳೂರು ಎನ್‌ಜಿಓದ ಸೀಮಾ ಶರ್ಮಾ ದೂರಿದರು.

English summary
For two years now, residents of Bellandur in southeast Bengaluru, which is home to many techies and IT companies, have been asking the BBMP to fix two dilapidated dry waste collection centres in their ward. But their requests have drawn a blank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X