ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಡ್ತಿ ಮೀಸಲಾತಿಗೆ ಹಿಂಜರಿಕೆ: ಸರ್ಕಾರದ ವಿರುದ್ಧ ಹೋರಾಟ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಬಡ್ತಿ ಮೀಸಲಾತಿ ಮಸೂದೆ ಅನುಷ್ಠಾನಗೊಳಿಸುವಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸಮ್ಮಿಶ್ರ ಸರಕಾರದ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಎಚ್ಚರಿಕೆ ನೀಡಿದರು.

ಬಡ್ತಿ ಮೀಸಲು ಮಸೂದೆ ಅನುಷ್ಠಾನಗೊಳಿಸದ ಸಮ್ಮಿಶ್ರ ಸರ್ಕಾರದ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಈಗಾಗಲೇ ಹಿಂಬಡ್ತಿ ಪಡೆದಿರುವ ನೌಕರರು ಮಾನಸಿಕವಾಗಿ ನೊಂದಿದ್ದಾರೆ.

ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ರದ್ದು: ಕರ್ನಾಟಕಕ್ಕೆ ಸುಪ್ರೀಂ ಆದೇಶ

ಮೂವರು ನೌಕರರು ಈ ಅಪಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಹಿಂಬಡ್ತಿ ಹೊಂದಿರುವ ನೌಕರರು ಕೆಲಸಕ್ಕೆ ಹೋಗಲು ಮುಜುಗರಪಟ್ಟು ಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹಾಕಲು ಸೆ.19 ರಂದು ಬೆಂಗಳೂರಿನ ಟೌನ್‌ ಹಾಲ್‌ ಸಭಾಂಗಣದಲ್ಲಿ ಹೋರಾಟಗಾರರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು ಎಂದರು.

Reservation in promotion: State level SC-ST employees rally on September 19 in Bengaluru

ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎಚ್‌ .ಡಿ.ರೇವಣ್ಣ ಹಾಗೂ ಅಹಿಂಸ ಸಂಘಟನೆ ಒತ್ತಡಕ್ಕೆ ಮಣಿದು ಬಡ್ತಿ ಮೀಸಲಾತಿ ಕಾಯಿದೆ ಜಾರಿಗೊಳಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಸದನದ ನಿಂದನೆ ಆಗುತ್ತದೆ ಎಂಬುದರ ಅರಿವಿದ್ದರೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ್ತಿ ಮೀಸಲಾತಿ: ಮತ್ತೆ 3 ತಿಂಗಳ ಸಮಯ ಕೇಳಿದ ಸರ್ಕಾರ ಬಡ್ತಿ ಮೀಸಲಾತಿ: ಮತ್ತೆ 3 ತಿಂಗಳ ಸಮಯ ಕೇಳಿದ ಸರ್ಕಾರ

ಮುಖ್ಯಮಂತ್ರಿಗಳ ದಲಿತ ವಿರೋಧಿ ವರ್ತನೆಯನ್ನು ದಲಿತ ಮಂತ್ರಿಗಳು ಸಹಿಸಿಕೊಂಡೇ ಸಚಿವ ಸಂಪುಟದಲ್ಲಿ ಮುಂದುವರಿದಿದ್ದಾರೆ. ಕಾಯಿದೆಯ ಅನುಷ್ಠಾನ ಕೇವಲ ಇಂದಿನ ಎಸ್ಸಿ ಎಸ್ಟಿ ನೌಕರರ, ಅಧಿಕಾರಿಗಳ ಬದುಕಿನ ಪ್ರಶ್ನೆಯಷ್ಟೆ ಆಗಿರದೆ ದಲಿತ ಜನಾಂಗದ ಮುಂದಿನ ಎಲ್ಲಾ ಪೀಳಿಗೆಗಳ ಅಸ್ತಿತ್ವದ ಪ್ರಶ್ನೆಯಾಗಿದೆ. ಕೋರ್ಟ್‌ ವಿಚಾರಣೆಗಳೆಂಬ ಕುಂಟು ನೆಪಗಳನ್ನು ಹೇಳಿ ಅನುಷ್ಠಾನದ ಮುಂದೂಡಿಕೆ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು.

English summary
Dalit organizations federation president Dr.M. Venkataswamy has said that urging implementation of SC/ST bill in the state, federation will hold a state level rally on September 19 in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X