ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಕೇ ಬೇಕು ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಬೇಕು

|
Google Oneindia Kannada News

ಬೆಂಗಳೂರು, ಡಿಸೆಂಬರ್ 23 : ಕನ್ನಡಿಗರಿಗೆ ಕಡ್ಡಾಯ ಉದ್ಯೋಗವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಮೂವತ್ತು ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದರು. ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಕಾರ್ಯಕರ್ತರು ನಂತರ ರೈಲ್ವೆ ನಿಲ್ದಾಣದಿಂದಲೇ ಮೆರವಣಿಗೆ ಹೊರಟರು. ಕನ್ನಡಿಗರಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಘೋಷಣೆ ಕೂಗುತ್ತಾ ಧ್ವನಿವರ್ದಕಗಳನ್ನು ಹಾಕಿಕೊಂಡು ಕನ್ನಡದ ಧ್ವಜವನ್ನು ಕೈಯಲ್ಲಿ ಹಿಡಿದು ಬಸ್, ಬೈಕ್ ಗಳ ಮೂಲಕ ಮೆರವಣಿಗೆ ನಡೆಸಿದರು.

In Pics : ಉದ್ಯೋಗದ ಹಕ್ಕಿಗಾಗಿ ಉಕ್ಕೇರಿದ ಕನ್ನಡಿಗರ ಹೋರಾಟ

ಕರವೇ ಬೃಹತ್ ಪ್ರತಿಭಟನಾ ಮೆರವಣಿಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಹೊರಟಿರುವ ಕಾರಣ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ಕೊಡಬೇಕು ಎನ್ನುವ ಡಾ. ಸರೋಜಿನಿ ಮಹಿಷಿ ವರದಿಯಿದ್ದರೂ ಅದು ಸಮರ್ಥವಾಗಿ ಜಾರಿಯಾಗಿಲ್ಲ. ಸ್ಥಳೀಯರಿಗೆ ಉದ್ಯೋಗದ ಕುರಿತು ಸಮರ್ಥವಾದ ನೀತಿಯೊಂದು ಜಾರಿಯಾಗದ ಫಲವಾಗಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜಾಗತೀಕರಣ ನಂತರ ನಮ್ಮ ರಾಜ್ಯದ ಪ್ರಮುಖ ಊರುಗಳು ದೊಡ್ಡ ಮಟ್ಟದಲ್ಲಿ ಹುಟ್ಟಿರುವ ಬಹುತೇಕ ಖಾಸಗಿ ಉದ್ಯೋಗಗಳು ಪರರಾಜ್ಯದವರ ಪಾಲಾಗಿದೆ.

ಚುನಾವಣೆಗೂ ಮುನ್ನ ಮಹಿಷಿ ವರದಿ ಜಾರಿಗೆ ನಾರಾಯಣ ಗೌಡ ಆಗ್ರಹಚುನಾವಣೆಗೂ ಮುನ್ನ ಮಹಿಷಿ ವರದಿ ಜಾರಿಗೆ ನಾರಾಯಣ ಗೌಡ ಆಗ್ರಹ

ಇನ್ನೊಂದೆಡೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಕೇಂದ್ರ ಸರ್ಕಾರದ ಹುದ್ದೆಗಳು ಕೇಂದ್ರದ ಇಂಗ್ಲಿಷ್- ಹಿಂದಿ ಮಾತ್ರ ಭಾಷಾ ನೀತಿ ಕಾರಣದಿಂದ ಕನ್ನಡಿಗರ ಕೈ ತಪ್ಪಿ ಹೋಗುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನಾಲ್ಕು ತಿಂಗಳೊಳಗಾಗಿ ಸರೋಜಿನಿ ಮಹಿಷಿ ಜಾರಿಯಾಗುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಿದ್ದಾರೆ. ವರದಿ ಜಾರಿಯಾಗುವ ವರೆಗೂ ಮೂವತ್ತು ಜಿಲ್ಲೆಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯಲಿದೆ.

ಕರ್ನಾಟಕದಲ್ಲೂ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕೊಡಿ

ಕರ್ನಾಟಕದಲ್ಲೂ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕೊಡಿ

ಮಹಾರಾಷ್ಟ್ರ, ಓಡಿಶಾ ಮತ್ತು ಗುಜರಾತ್ನಂತರ ರಾಜ್ಯಗಳಲ್ಲೂ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಲಾಗುತ್ತದೆ. ಮೀಡಲಾತಿ ಕೊಡುವಂತಹ ಕಾನೂನುಗಳನ್ನು ಮಾಡಿಕೊಂಡಿವೆ. ಆ ಮೂಲಕ ಅಲ್ಲಿನ ಮಣ್ಣಿನ ಮಕ್ಕಳ ಉದ್ಯೋಗ, ಬದುಕಿನ ಹಕ್ಕನ್ನು ಎತ್ತಿ ಹಿಡಿಯುವ ಕೆಲಸ ಮಾಡಿವೆ. ಕನ್ನಡಿಗರ ಪ್ರತಿನಿಧಿಯಾಗಿರುವ ಕರ್ನಾಟಕ ಸರ್ಕಾಋ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡಿಗ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡಿಗ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕು

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕಾಗಿ ಆಯ್ಕೆ ಮಾಡಬೇಕು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಕೇಂದ್ರ ಸರ್ಕಾರಿ ಇಲಾಖಾ ಕಚೇರಿಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳಲ್ಲೂ ಕನಿಷ್ಟ 10ನೇ ತರಗತಿವರೆಗೆ ಒಂದು ಭಾಷೆಯಾಗಿ ಓದಿ, ಉತ್ತೀರ್ಣರಾಗಿರುವ ಕರ್ನಾಟಕದ ಅಭ್ಯರ್ಥಿಗಳನ್ನೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಬೇಕು.

ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು

ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು

ರಾಜ್ಯ ಮತ್ತು ಕೇದ್ರ ಸರ್ಕಾರದ ಎಲ್ಲ ರೀತಿಯ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲೂ ಉತ್ತರಿಸಲು ಅವಕಾಶವಿರಬೇಕು. ಸಂದರ್ಶನಗಳು ಕನ್ನಡದಲ್ಲಿಯೂ ನಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಉದ್ದಿಮೆಗಳಲ್ಲಿ ಗುತ್ತಿಗೆ ಅಥವಾ ದಿನಗೂಲಿ ಆದಾರದ ಮೇಲಲೆ ನೇಮಕ ಮಾಡುವಾಗ ಕಡ್ಡಾಯವಾಗಿ ಕರ್ನಾಟಕದವರಿಗೆ ಉದ್ಯೋಗ ನೀಡಬೇಕು. ಹೊರಗುತ್ತಿಗೆ ಸಂಸ್ಥೆಗಳಿಗೂ ಇದೇ ಷರತ್ತು ವಿಧಿಸಬೇಕು.

ಹೊರನಾಡಿನಲ್ಲಿ ಕನ್ನಡದಲ್ಲಿ ಓದಿದವರಿಗೂ ಉದ್ಯೋಗ ಅವಕಾಶ ಬೇಕು

ಹೊರನಾಡಿನಲ್ಲಿ ಕನ್ನಡದಲ್ಲಿ ಓದಿದವರಿಗೂ ಉದ್ಯೋಗ ಅವಕಾಶ ಬೇಕು

ಹೊರನಾಡಿನಲ್ಲಿ ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳು ಅಥವಾ ಕನ್ನಡವನ್ನು ಒಂದು ಭಾಷೆಯನ್ನಾಗಿ ಹತ್ತನೇ ತರಗತಿವರೆಗೆ ಕಲಿತು, ಉತ್ತೀರ್ಣರಾದವರನ್ನು ಸ್ಥಳೀಯರು ಎಂದು ಪರಿಗಣಿಸಿ ಒಳನಾಡಿನ ಕನ್ನಡಿಗರಿಗೆ ಸಿಗುವ ಸೌಲಭ್ಯ ನೀಡಬೇಕು.

ಕರ್ನಾಟಕದವರು ಸ್ಥಳೀಯರು ಎಂದು ಪರಿಗಣಿಸಲು 20 ವರ್ಷಗಳು ಬೇಕು

ಕರ್ನಾಟಕದವರು ಸ್ಥಳೀಯರು ಎಂದು ಪರಿಗಣಿಸಲು 20 ವರ್ಷಗಳು ಬೇಕು

ಸ್ಥಳೀಯರು ಅಥವಾ ಕರ್ನಾಟಕದವರು ಎಂದು ಪರಿಗಣಿಸಲು 20 ವರ್ಷ ರಾಜ್ಯದಲ್ಲಿ ವಾಸವಾಗಿರಬೇಕಲ್ಲದೆ, ಕನ್ನಡ ಭಾಷಾ ಜ್ಞಾನವಿರಬೇಕು. ಕನ್ನಡದಲ್ಲಿ 10ನೇ ತರಗತಿವರೆಗೆ ಓದಿದ ಶಾಲಾ ಸರ್ಟಿಫಿಕೇಟ್ ಹೊಂದಿರಬೇಕು.

English summary
Hundreds of Karnataka Rakshana Vedike workers led by president TA Narayana gowda taken out a huge rally urging state government to implement Dr. Sarojini Mahishi report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X