ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿನಗೂಲಿ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಮನವಿ

|
Google Oneindia Kannada News

ಬೆಂಗಳೂರು, ಮೇ 6: ಕರ್ನಾಟಕದ ಎಲ್ಲ ಸರ್ಕಾರಿ ದಿನಗೂಲಿ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಕೋಳಿ ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ದಿ ಅಧಿನಿಯಮ 2012ಕ್ಕೆ ರಚಿಸಲಾದ ಸೇವಾ ನಿಯಮಾವಳಿ ಆದೇಶ ಸಂಖ್ಯೆ ಅಧಿಸೂಚನೆ 22-2-2014ರ 2ಬಿ ರಲ್ಲಿ ತಿಳಿಸಿದಂತೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ಅಥವಾ ಕರ್ನಾಟಕ ನಾಗರಿಕ ಸೇವಾ ಕಾಯ್ದೆ 1978 ಅಥವಾ ಅದರಡಿ ರಚಿಸಲಾದ ಇತರೆ ನಿಯಮಗಳಂತೆ ಜೇಷ್ಠತೆ ಮತ್ತು ಮುಂಬಡ್ತಿಯನ್ನು ಹೊರತುಪಡಿಸಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಲಾಗಿದೆ.

ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಿ ದಿನಗೂಲಿ ನೌಕರರ ಮನವಿಗೆ ಸ್ಪಂದಿಸಿದ ಸಿಎಸ್ ರವಿಕುಮಾರ್ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಿ ದಿನಗೂಲಿ ನೌಕರರ ಮನವಿಗೆ ಸ್ಪಂದಿಸಿದ ಸಿಎಸ್ ರವಿಕುಮಾರ್

"ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ದಿ ಅಧಿನಿಯಮ 2012'ರಲ್ಲಿ ಅಧಿಸೂಚಿಸಲ್ಪಟ್ಟ ನಾವುಗಳು ಸುಮಾರು 30-35 ವರ್ಷಗಳಿಂದ ಸರ್ಕಾರಿ ನೌಕರರ ಸಮನಾಗಿ ಅವರಷ್ಟೆ ಜವಾಬ್ದಾರಿಯಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಕಡಿಮೆ ವೇತನ ಪಡೆದುಕೊಂಡು ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ.

Request To Chief Secretary For Provide Medical Facilities To All Daily Wages Employees

ಇಂತಹ ಕೋವಿಡ್ -19 ಸ್ಥಿತಿಯಲ್ಲಿ ಅತೀ ಕಡಿಮೆ ವೇತನ ಪಡೆದುಕೊಂಡು ವೈದ್ಯಕೀಯ ವೆಚ್ಚವನ್ನು ಭರಿಸಲಾಗದೇ ಸಾಕಷ್ಟು ನೌಕರರ ತುಂಬಾ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ.

Request To Chief Secretary For Provide Medical Facilities To All Daily Wages Employees


ಕಾರಣ ಅಧಿಸೂಚಿಸಲ್ಪಟ್ಟ ಎಲ್ಲ ಕ್ಷೇಮಾಭಿವೃದ್ದಿ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಲು ಹಾಗೂ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕ್ಷೇಮಾಭಿವೃದ್ಧಿ ನೌಕರರನ್ನು ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಎಲ್ಲ ಕ್ಷೇಮಾಭಿವೃದ್ಧಿ ನೌಕರರು ಕೋವಿಡ್ -19 ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅಂತಹ ನೌಕರರಿಗೆ ಯಾವುದೇ ವೈದ್ಯಕೀಯ ಸೌಲಭ್ಯಗಳು ಇರುವುದಿಲ್ಲ.

Request To Chief Secretary For Provide Medical Facilities To All Daily Wages Employees

ಈಗಾಗಲೇ ಸಾಕಷ್ಟು ನೌಕರರು ಕೋವಿಡ್-19ಕ್ಕೆ ತುತ್ತಾಗಿದ್ದು, ಯಾವುದೇ ರೀತಿಯ ಪರಿಹಾರ ಸಹ ದೊರಕಿರುವುದಿಲ್ಲ. ಕೋವಿಡ್ -19 ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಮೃತಪಟ್ಟರೆ ಸರ್ಕಾರಿ ನೌಕರರಿಗೆ ನಿಡುವಂತೆ ಸದರಿ ಕ್ಷೇಮಾಭಿವೃದ್ಧಿ ನೌಕರರರಿಗೂ 30 ಲಕ್ಷ ರೂ. ಪರಿಹಾರವನ್ನು ವಿಸ್ತರಿಸಿ ಆದೇಶ ಹೊರಡಿಸಲು ಸಂಘದ ಪರವಾಗಿ ವಿನಂತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘ ರಾಜ್ಯಾಧ್ಯಕ್ಷ ಹನುಮಂತಪ್ಪ ಕೋಳಿ, ಗೌರವಾಧ್ಯಕ್ಷ ಶೇಖ್ ಅಲಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಅವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

English summary
Hanumanthappa Koli State President of Daily wages Employees Welfare Union, has appealed to the state Chief Secretary P.Ravikumar to provide medical facilities to all government Daily wages Employees of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X