ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಕೆಂಪುಕೋಟೆ ನೋಡಲು ಕೆಂಪುತೋಟಕ್ಕೆ ಬನ್ನಿ

|
Google Oneindia Kannada News

ಬೆಂಗಳೂರು, ಜ. 17 : ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಸುಮಾರು 40 ಅಡಿ ಎತ್ತರದ ದೆಹಲಿಯ ಕೆಂಪುಕೋಟೆ ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಜನವರಿ 26ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಶನಿವಾರ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಬಿಬಿಎಂಪಿ ಮೇಯರ್ ಶಾಂತಕುಮಾರಿ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. [ಫಲಪುಷ್ಪ ಪ್ರದರ್ಶನದ ವಿಶೇಷತೆ ಏನು?]

Republic Day Flower show

ದೆಹಲಿಯ ಕೆಂಪುಕೋಟೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 40 ಅಡಿ ಎತ್ತರದ ಕೆಂಪು ಕೋಟೆ ಜನರನ್ನು ಆಕರ್ಷಿಸುತ್ತಿದೆ. ಗುಲಾಬಿ ಮತ್ತು ಇತರ ಹೂವುಗಳಿಂದ ಮಾಡಿದ ಇಂಡಿಯಾ ಗೇಟ್ ಜನರನ್ನು ತನ್ನತ್ತ ಸೆಳೆಯುತ್ತಿದೆ. [ಗಣರಾಜ್ಯೋತ್ಸವಕ್ಕೆ ಒಬಾಮಾ ಬರ್ತಾರೆ]

ಶನಿವಾರ ಆರಂಭವಾದ ಈ ಫಲಪುಷ್ಪ ಪ್ರದರ್ಶನ ಜ.26ರವರೆಗೆ ನಡೆಯಲಿದೆ. ವಯಸ್ಕರಿಗೆ ತಲಾ 40 ರೂ. ಟಿಕೆಟ್ ಇದ್ದು, 12 ವರ್ಷದ ಒಳಗಿನ ಮಕ್ಕಳಿಗೆ ತಲಾ 10 ರೂ. ಪ್ರವೇಶ ಶುಲ್ಕವಿದೆ. ರಜಾ ದಿನಗಳಲ್ಲಿ ವಯಸ್ಕರಿಗೆ 50 ರೂ. ಶುಲ್ಕವಿರುತ್ತದೆ.

Lal Bagh

ಫಲಪುಷ್ಪ ಪ್ರದರ್ಶನಕ್ಕೆ ಹೋಗುವ ಜನರು http://www.lalbaghflowershow.in ವೆಬ್‌ಸೈಟ್‌ಗೆ ಭೇಟಿ ನೀಡಿ, ಟಿಕೆಟ್ ಖರೀದಿ ಮಾಡಬಹುದಾಗಿದೆ. ಇದೇ ಮೊದಲ ಬಾರಿಗೆ ದ್ರೋಣ್ ಕ್ಯಾಮರಾ ಕಣ್ಗಾವಲನ್ನು ಸಸ್ಯಕಾಶಿಗೆ ಒದಗಿಸಲಾಗಿದೆ.

English summary
The annual Republic Day flower show begins at Lalbagh, Bengaluru on January 17. Horticulture minister Dr. Shamanur Shivashankarappa inaugurated flower show. For the first time, you can book entry tickets in www.lalbaghflowershow.in website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X