ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಣರಾಜ್ಯೋತ್ಸವ 2023: ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಪೊಲೀಸ್ ಬಿಗಿ ಭದ್ರತೆ: ಪ್ರತಾಪ್ ರೆಡ್ಡಿ

ಕೋವಿಡ್ ಬಳಿಕ ಬೆಂಗಳೂರಿನಲ್ಲಿ ಜನವರಿ 26ರಂದು ಅದ್ಧೂರಿ ಗಣರಾಜ್ಯೋತ್ಸವ ನಡೆಯಲಿದೆ. ಯಾರು ಗಣ್ಯರು ಆಗಮಿಸಲಿದ್ದಾರೆ, ದ್ವಜಾರೋಹಣ ನೆರವೇರಿಸುವವರು ಯಾರು?. ಪೊಲೀಸ್ ಬಿಗಿ ಭದ್ರತೆ ಹೇಗಿರಲಿದೆ?. ಸಾರ್ವಜನಿಕರು ಎಷ್ಟು ಗಂಟೆಗೆ ತೆರಳಬೇಕು, ಪೂರ್ವ ಸಿದ್ಧತೆ ಪರಿಶೀಲನೆ ಕುರ

|
Google Oneindia Kannada News

ಬೆಂಗಳೂರು, ಜನವರಿ 24: ಬೆಂಗಳೂರಿನಲ್ಲಿ ಜನವರಿ 26ರ ಗಣರಾಜ್ಯೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಕೈಗೊಳ್ಳಲಾದ ಸಿದ್ಧತೆಗಳು, ಪೊಲೀಸ್ ಬಿಗಿ ಬಂದೋಬಸ್ತ್ ಅನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೋಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ಮಂಗಳವಾರ ಪರಿಶೀಲಿಸಿದರು.

ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಗಣ್ಯಮಾನ್ಯರು ಪಾಲ್ಗೊಳ್ಳುವ ಸಮಾರಂಭ ಇದಾಗಿದೆ. ಈ ಸಂಬಂಧ ಅಗತ್ಯ ಎಚ್ಚರಿಕೆ ವಹಿಸಲಾಗುತ್ತಿದೆ. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸ್ಕೌಟ್ಸ್, ಗೈಡ್ಸ್, ಸೇವಾದಳ ಹಾಗೂ ಪೋಲಿಸ್ ಸಿಬ್ಬಂದಿ ಸೇರಿದಂತೆ ಹಲವು ತಂಡಗಳಿಂದ ಪೂರ್ವಭಾವಿ ತಯಾರಿ ನಡೆಸಲಾಯಿತು.

ರಾಜೀನಾಮೆ ನೀಡಲು ಬಯಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ರಾಜೀನಾಮೆ ನೀಡಲು ಬಯಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೈದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಭದ್ರತೆ ಮತ್ತು ಸುರಕ್ಷತೆಗೆಂದು 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ ತುರ್ತು ಸೇವೆಗೆ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

Republic Day 2023: Tight Police Security Has Provided To Manekshaw Parade Ground

ಇದೇ ಮೊದಲ ಭಾರಿಗೆ ಕರ್ನಾಟಕದ ಗಣರಾಜ್ಯೋತ್ಸವದಲ್ಲಿ ನೆರೆ ರಾಜ್ಯವಾದ ತಮಿಳುನಾಡಿನ ಪೊಲೀಸ್ ತಂಡವೊಂದು ಕವಾಯಿತಿನಲ್ಲಿ ಪಾಲ್ಗೊಳ್ಳುತ್ತಿದೆ. ಕೋವಿಡ್ ಬಳಿಕ ನಡೆಯುತ್ತಿರುವ ಗಣರಾಜ್ಯೋತ್ಸವ ಅದ್ಧೂರಿಯಾಗಿ ನೆರವೇರರಲಿದೆ. ಒಟ್ಟು 32 ಪೊಲೀಸ್ ತಂಡಗಳು ತಂಡಗಳು ಕವಾಯತಿನಲ್ಲಿ ಭಾಗವಹಿಸಲಿದೆ ಎಂದರು.

ವಿವಿಧ ಶಾಲಾ ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾಣಿಕ್ ಶಾ ಪರೇಡ್ ಮೈದಾನಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕರ್ತವ್ಯಕ್ಕಾಗಿ ಒಟ್ಟು 12 ಮಂದಿ ಡಿಸಿಪಿ, 12 ಎಸಿಪಿ, 65 ಜನ ಪಿಐ, 101 ಪಿಎಸ್ಐ ಅಧಿಕಾರಿಗಳು ಹಾಗೂ 1005 ಪೊಲೀಸ್ ಪೇದೆಗಳು ನಿಯೋಜನೆ ಮಾಡಲಾಗಿದೆ. ಈಗಾಗಲೇ ಅಳವಡಿಸಿದ್ದ 100 ಸಿಸಿಟಿವಿ ಕ್ಯಾಮರಾ ಪರಿಶೀಲಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್‌ಗಳನ್ನ ಭದ್ರತೆಯಲ್ಲಿ ಬಳಕೆಯಾಗಲಿವೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿವರಿಸಿದರು.

ಗಣರಾಜ್ಯೋತ್ಸವ ಪ್ರಮುಖ ಅಂಶಗಳು

* ಜ.26 ರಂದು ಮಾಣಿಕ್ ಶಾ ಪರೆಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭ

* ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ

* ಜಿ2 ಪ್ರವೇಶ ದ್ವಾರದಲ್ಲಿ ಅತೀ ಗಣ್ಯರಿಗಾಗಿ 2000 ಆಸನ ವ್ಯವಸ್ಥೆ

* ಜಿ3 ಪ್ರವೇಶ ದ್ವಾರದಲ್ಲಿ ಎಲ್ಲ ಇಲಾಖೆಯ ಹಿರಿಯ ಅಧಿಕಾರಿ/BSF ಅಧಿಕಾರಿ/ನಿವೃತ್ತ ಸೇನಾಧಿಕಾರಿಗಳಿಗೆ 2000 ಆಸನ ಮೀಸಲು.

Republic Day 2023: Tight Police Security Has Provided To Manekshaw Parade Ground

* ಜಿ4 ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗಾಗಿ ಒಟ್ಟು 3000 ಆಸನಗಳ ವ್ಯವಸ್ಥೆ ಮಾಡಲಾಗಿದೆ.

* ಸಮಾರಂಭಕ್ಕೆ ಬರುವವರು 8.30ರೊಳಗೆ ಆಸನದೊಳಗೆ ಕೂತಿರುವುದು ಕಡ್ಡಾಯ.

* ಸಮಾರಂಭ ನಡೆಯುವ ಮೈದಾನಕ್ಕೆ ಪ್ರವೇಶ ನಿಷೇಧ

* 100 ಸಿಸಿ ಕ್ಯಾಮೆರಾ ಸೇರಿದಂತೆ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಂದ ಕಣ್ಗಾವಲು.

English summary
Benglauru Republic Day 2023: Tight police security has provided to Manekshaw Parade ground, say city police commissioner Pratap Reddy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X