ಕಾಲೇಜಲ್ಲಿ ಕೋವಿಡ್ ಪರೀಕ್ಷೆ; ಬೆಂಗಳೂರಲ್ಲಿ ಎಷ್ಟು ಪ್ರಕರಣ ಪತ್ತೆ?
ಬೆಂಗಳೂರು, ನವೆಂಬರ್ 27 : ಬೆಂಗಳೂರು ನಗರದಲ್ಲಿ ಕಾಲೇಜುಗಳು ಪುನರಾರಂಭವಾದ ಹಿನ್ನೆಲೆಯಲ್ಲಿ ಬಿಬಿಎಂಪಿಯ ತಂಡ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯನ್ನು ನಡೆಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಗಂಟಲು ದ್ರವ ಸಂಗ್ರಹ ಮಾಡಲಾಗುತ್ತಿದೆ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಸಹ ನಡೆಸಲಾಗುತ್ತಿದೆ. ಕಳೆದ 10 ದಿನಗಳಲ್ಲಿ ಒಟ್ಟು 46,795 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.
ಕಾಲೇಜು ಆರಂಭ; ಬೆಂಗಳೂರಲ್ಲಿ 168 ಕೋವಿಡ್ ಪ್ರಕರಣ ಪತ್ತೆ
ವಿದ್ಯಾರ್ಥಿಗಳು ಮಾತ್ರವಲ್ಲ ಕಾಲೇಜಿನ ಸಿಬ್ಬಂದಿಗಳಿಗೆ ಸಹ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. 46,795 ಮಾದರಿಗಳ ಪರೀಕ್ಷೆಯಲ್ಲಿ 209 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕಾಲೇಜು ಪುನರಾರಂಭ; ವಿದ್ಯಾರ್ಥಿಗಳಿಗೆ ಸಚಿವ ಸೋಮಶೇಖರ್ ಸಲಹೆ
ಎಲ್ಲಿ, ಎಷ್ಟು ಪ್ರಕರಣ? : ನವೆಂಬರ್ 16 ರಿಂದ 25ರ ತನಕ ಬೊಮ್ಮನಹಳ್ಳಿ ವಲಯದಲ್ಲಿ 3464, ದಾಸರಹಳ್ಳಿ 2218, ಆರ್. ಆರ್. ನಗರ 8345, ಮಹದೇವಪುರ 3408, ಪೂರ್ವ 6233, ಪಶ್ಚಿಮ 7045, ಯಲಹಂಕ 9029, ದಕ್ಷಿಣದಲ್ಲಿ 7053 ಮಾದರಿಗಳ ಪರೀಕ್ಷೆ ಮಾಡಲಾಗಿದೆ.
ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು
ದಾಸರಹಳ್ಳಿ ವಲಯದಲ್ಲಿ 20, ಪೂರ್ವ ವಲಯ 39, ಪಶ್ಚಿಮ ವಲಯ 33, ಯಲಹಂಕ ಮತ್ತು ದಕ್ಷಿಣ ವಲಯದಲ್ಲಿ 29 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಗುರುವಾರದ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ 844 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,67,077ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 18,830.
ನವೆಂಬರ್ 17ರಿಂದ ಕರ್ನಾಟಕದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಕೋವಿಡ್ ಪರೀಕ್ಷೆ ನೆಗೆಟಿವ್ ಬಂದ ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಬಹುದಾಗಿದೆ.