ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಷ್ಟು ಕೊಲೆ ಮಾಡಿಸಿದ್ದಾರೆಂಬುದು ಗೊತ್ತಿದೆ'

|
Google Oneindia Kannada News

ಬೆಂಗಳೂರು, ಮಾ. 11: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಷ್ಟು ಕೊಲೆಗಳನ್ನು ಮಾಡಿಸಿದ್ದಾರೆ ಎಂಬುದು ಗೊತ್ತಿದೆ. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ರೇಣುಕಾಚಾರ್ಯ ಅವರು, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರ. ಅವರು ಸ್ಪೀಕರ್ ಇದ್ದಾಗ ಪೀಠದಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಷ್ಟು ಕೊಲೆ ಮಾಡಿಸಿದ್ದಾರೆ ಅನ್ನೋದು ಗೊತ್ತಿದೆ. ಅವರ ಮೇಲಿನ ದಾಖಲೆಗಳನ್ನ ಬಿಡುಗಡೆ ಮಾಡುತ್ತೇನೆ. ರಮೇಶ್ ಕುಮಾರ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಅವರನ್ನ ವಿಧಾನಸಭೆಯಿಂದ ಅಮಾನತು ಮಾಡಲಿ ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಚ್ಛಾಟನೆಗೆ ಸಚಿವ ಸುಧಾಕರ್ ಆಗ್ರಹ

ನಿನ್ನೆ ವಿಧಾನಸಭೆ ಕಲಾಪದಲ್ಲಿ ಸಚಿವ ಡಾ. ಸುಧಾಕರ್ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿರುವ ಹಿನ್ನೆಲಯಲ್ಲಿ ವಿಧಾನಸಭೆ ಕಲಾಪದಿಂದ ಅವರನ್ನು ಅಮಾನತು ಮಾಡಬೇಕೆಂದು ಬಿಜೆಪಿ ಶಾಸಕರು ಆಗ್ರಹಿಸುತ್ತಿದ್ದಾರೆ.

ಸುಧಾಕರ್ ಆರೋಪದಿಂದ ರಾಜೀನಾಮೆಗೆ ಮುಂದಾಗಿದ್ದ ರಮೇಶ್ ಕುಮಾರ್

ಸುಧಾಕರ್ ಆರೋಪದಿಂದ ರಾಜೀನಾಮೆಗೆ ಮುಂದಾಗಿದ್ದ ರಮೇಶ್ ಕುಮಾರ್

ಇದಕ್ಕೂ ಮೊದಲು ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಡಾ. ಸುಧಾಕರ್ ಮಾತನಾಡುವಾಗ ಸ್ಪೀಕರ್ ಕೊಟ್ಟಿದ್ದ ತೀರ್ಪಿನಿಂದ ನಮ್ಮ 17 ಜನರ ಬದುಕು ಹಾಳಾಗುತ್ತಿತ್ತು. ನಮ್ಮ ವಿರುದ್ಧ ಷಢ್ಯಂತ್ರ ಮಾಡಲಾಗಿತ್ತು ಎಂದು ಡಾ. ಸುಧಾಕರ್ ಹೇಳಿದ ತಕ್ಷಣ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದರು. ಏಕಾಂಗಿಯಾಗಿ ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ರು. ಜೊತೆಗೆ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಡುವ ಮಾತುಗಳನ್ನು ಆಡಿದ್ದರು.

ರಮೇಶ್ ಕುಮಾರ್ ಉಚ್ಛಾಟನೆಗೆ ಬಿಜೆಪಿ ಸದಸ್ಯರ ಆಗ್ರಹ

ರಮೇಶ್ ಕುಮಾರ್ ಉಚ್ಛಾಟನೆಗೆ ಬಿಜೆಪಿ ಸದಸ್ಯರ ಆಗ್ರಹ

ಅದೇ ಸಂದರ್ಭದಲ್ಲಿ ಸಚಿವ ಡಾ. ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಅವರು ಆಕ್ಷೆಪಾರ್ಹ ಪದಗಳ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ವಿಧಾನಸಭೆಯಿಂದ ಉಚ್ಛಾಟನೆ ಮಾಡಬೇಕೆಂದು ಆಗ್ರಹಿಸಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ವಾಗ್ವಾದ ಉಂಟಾಗಿತ್ತು.

ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲ

ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲ

ವಿಧಾನಸಭೆಯಲ್ಲಿ ನಡೆದ ಕೋಲಾಹಲ ಶಮಗೊಳಿಸುವ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಗೇರಿ ಸಂಧಾನ ಸಭೆ ನಡೆಸಿದ್ರು. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಗೃಹಸಚಿವ ಬಸವರಾಜ್ ಬೊಮ್ಮಾಯಿ, ಸ್ಪೀಕರ್ ಕಾಗೇರಿ ಅವರು, ರಾಜೀನಾಮೆ ಕೊಡದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು. ರಾಜೀನಾಮೆ ನಿರ್ಧಾರಕ್ಕೆ ಬಂದು ದುಡುಕಬೇಡಿ ಎಂದು ಮನವೊಲಿಕೆ ಮಾಡಿದ್ರು. ಸಭೆಯ ಬಳಿಕವೂ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಲಿಲ್ಲ.

ಸಂಧಾನ ಸಭೆ ಬಳಿಕ ಹಕ್ಕುಚ್ಯತಿಗೆ ಕಾಂಗ್ರೆಸ್ ನಿರ್ಧಾರ

ಸಂಧಾನ ಸಭೆ ಬಳಿಕ ಹಕ್ಕುಚ್ಯತಿಗೆ ಕಾಂಗ್ರೆಸ್ ನಿರ್ಧಾರ

ಸಭೆಯ ಬಳಿಕ ವಿಧಾನಸಭೆ ಕಲಾಪ ಆರಂವಾಗುತ್ತಿದ್ದಂತೆಯೆ ಸದನದಲ್ಲಿ ಮತ್ತೆ ಗದ್ದಲ ಉಂಟಾಯ್ತು. ಕಾಂಗ್ರೆಸ್ ಸದಸ್ಯ‌ರಿಂದ ಸ್ಪೀಕರ್ ಪೀಠಕ್ಕೆ ಸಚಿವ ಸುಧಾಕರ್ ಅಪಮಾನ ಮಾಡಿದ್ದಾರೆ ಎಂದು ಸಚಿವ ಸುಧಾಕರ್ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹ ಮಾಡಿದ್ರು. ರಮೇಶ್ ಕುಮಾರ್ ಅವರು ಡಾ. ಸುಧಾಕರ್ ವಿರುದ್ಧ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು. ಇದರಿಂದಾಗಿ ಕಲಾಪವನ್ನು ಮತ್ತೆ ಮುಂದೂಡಲಾಗಿತ್ತು.

English summary
Renukacharya has said that he would release the records of the murders committed by former Speaker Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X