ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಮಾರ್ಗದಲ್ಲಿ ಆರಂಭವಾಗಲಿದೆ ಸೈಕಲ್ ಪಥ

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ನಮ್ಮ ಮೆಟ್ರೋ ಹಾದು ಹೋಗುವ ಮಾರ್ಗಗಳ ಕೆಳಗಿನ ರಸ್ತೆಯಲ್ಲಿರುವ ಪಾದಚಾರಿ ಮಾರ್ಗಗಳ ಮೇಲೆ ಸೈಕಲ್ ಪಥ ಆರಂಭವಾಗಲಿದೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಬಾಡಿಗೆ ಸೈಕಲ್ ಪಥವನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ನಿರ್ಮಿಸಲು ಸಿದ್ಧತೆ ಆರಂಭಿಸಲಾಗಿದೆ. ಅದಕ್ಕಾಗಿ 125 ಕಿ.ಮೀ ಉದ್ದದ ಸೈಕಲ್ ಪಥ ನಿರ್ಮಿಸಬೇಕಿದೆ. ಅದರಲ್ಲಿ ಬಿಬಿಎಂಪಿ 75 ಕಿ.ಮೀ ಉದ್ದದ ಸೈಕಲ್ ಪಥ ನಿರ್ಮಿಸಿಕೊಡಲಿದೆ.

ಯೋಜನೆಯಲ್ಲಿ 6 ಸಾವಿರ ಬಾಡಿಗೆ ಸೈಕಲ್

ಯೋಜನೆಯಲ್ಲಿ 6 ಸಾವಿರ ಬಾಡಿಗೆ ಸೈಕಲ್

ಡಲ್ಟ್ ರೂಪಿಸಿರುವ ಯೋಜನೆಯಂತೆ ಪ್ರತಿ 250ರಿಂದ 350 ಮೀಟರ್ ದೂರದಲ್ಲಿ ಒಂದು ಸೈಕಲ್ ನಿಲುಗಡೆ ತಾಣವನ್ನು ಸ್ಥಾಪಿಸಲಾಗುತ್ತಿದೆ. ಒಟ್ಟು 25 ಕಿ.ಮೀ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳ್ಳುತ್ತಿದ್ದು, 345 ಸೈಕಲ್ ನಿಲುಗಡೆ ತಾಣವನ್ನು ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ಆರು ಸಾವಿರ ಬಾಡಿಗೆ ಸೈಕಲ್ ದೊರೆಯುವಂತೆ ಮಾಡಲಾಗುತ್ತಿದೆ.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ಸ್ವೈಪಿಂಗ್ ಕಾರ್ಡ್ ಮೂಲಕ ಹಣ ಪಾವತಿ

ಸ್ವೈಪಿಂಗ್ ಕಾರ್ಡ್ ಮೂಲಕ ಹಣ ಪಾವತಿ

ಬಾಡಿಗೆ ಸೈಕಲ್ ಪಡೆಯಬೇಕಿದ್ದರೆ ಸ್ವೈಪಿಂಗ್ ಕಾರ್ಡ್ ಮೂಲಕ ನಿಲುಗಡೆ ತಾಣದಲ್ಲಿ ಅಳವಡಿಸಲಾಗುವ ಯಂತ್ರದಲ್ಲಿ ಹಣ ಪಾವತಿಸಿ ತೆಗೆದುಕೊಂಡು ಹೋಗಬೇಕಿದೆ. ಹಾಗೆಯೇ, ಸೈಕಲ್‌ಗಳನ್ನು ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದ್ದು, ಪ್ರತಿ ಗಂಟೆಗೆ 5 ರೂ ನಿಗದಿ ಮಾಡುವುದರ ಬಗ್ಗೆ ಚಿಂತನೆ ನಡೆದಿದೆ.

ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

ಮೆಟ್ರೋ ಎರಡನೇ ಹಂತಕ್ಕೆ ಡಿಪಿಆರ್

ಮೆಟ್ರೋ ಎರಡನೇ ಹಂತಕ್ಕೆ ಡಿಪಿಆರ್

ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಎರಡನೇ ಹಂತದ ಸೈಕಲ್ ಪಥ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಅದಕ್ಕೆ 40 ಕೋಟಿ ರೂ ಅನುದಾನ ನಿಗದಿ ಮಾಡಲಾಗಿದೆ.

ಸೈಕಲ್ ಪಥ ನಿರ್ಮಾಣಕ್ಕೆ 55.50 ಕೋಟಿ ರೂ ವೆಚ್ಚ

ಸೈಕಲ್ ಪಥ ನಿರ್ಮಾಣಕ್ಕೆ 55.50 ಕೋಟಿ ರೂ ವೆಚ್ಚ

ಮೊದಲ ಹಂತದಲ್ಲಿ ಸೈಕಲ್ ಪಥ ನಿರ್ಮಾಣಕ್ಕೆ 55.50 ಕೋಟಿ ರೂ ವ್ಯಯಿಸಲಾಗುತ್ತಿದೆ. ಎಂಜಿ ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ಹೊರ ವರ್ತುಲ, ಮೂಲಕ ಸುರಂಜನ್ ದಾಸ್ ರಸ್ತೆಗೆ ಸಂಪರ್ಕಿಸುವಂತೆ ಸೈಕಲ್ ಪಥ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

English summary
Under the Metro lane cycle path will be built and cycle service will be available shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X