• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

PhD ವಿದ್ಯಾರ್ಥಿಗಳ ಫೆಲೋಶಿಫ್ ಮತ್ತೆ 25,000 ರೂ.ಗೆ ಏರಿಕೆ

|
Google Oneindia Kannada News

ಬೆಂಗಳೂರು, ಜೂನ್ 8: ಮುಸ್ಲಿಂ, ಕ್ರೈಸ್ತ, ಜೈನ್, ಸಿಖ್ ಸೇರಿದಂತೆ ವಿವಿಧ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ PhD ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ನೀಡಲಾಗುತ್ತಿದ್ದ ಫೆಲೋಶಿಫ್‌ಅನ್ನು 25,000ದಿಂದ ಏಕಾಏಕಿ 8,000 ರೂಪಾಯಿಗೆ ಕಡಿತಗೊಳಿಸಲಾಗಿತ್ತು.

ಈ ಕುರಿತು ಜಾತ್ಯಾತೀತ ಜನತಾದಳ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಪತ್ರ ಬರೆದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯದ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದರು.

ಅದೇ ರೀತಿ ಜೆಡಿಎಸ್ ಪಕ್ಷದ ನಾಯಕರಾದ ವೈ.ಎಸ್.ವಿ ದತ್ತ, ಇಮ್ರಾನ್ ಪಾಷ, ನಜ್ಮಾ ನಜೀರ್‌ರವರ ನಿರಂತರ ಹೋರಾಟದ ಪ್ರತಿಫಲವಾಗಿ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತ PhD ವಿದ್ಯಾರ್ಥಿಗಳಿಗೆ ಹಿಂದಿನಂತೆ‌ ಪ್ರತಿ ತಿಂಗಳು 25,000 ರೂಪಾಯಿಗಳನ್ನು ನೀಡುವುದಾಗಿ ತಿದ್ದುಪಡಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಛ್ ಇಲಾಖೆಯ ತಿದ್ದುಪಡಿ ಆದೇಶದಲ್ಲಿ, "ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆಆರ್‌ಎಫ್ ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಮಾತ್ರ ಪ್ರತಿ ವಾರ್ಷಿಕ 1 ಲಕ್ಷ ರೂ.ಗಳನ್ನು ನೀಡಲು ತಿದ್ದುಪಡಿ ಮಾಡಿ ಆದೇಶಿಸಿದೆ.

   ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ಸ್ಥಗಿತ:ಕಂಗಾಲಾದ ದೈತ್ಯ ಕಂಪನಿಗಳು | Oneindia Kannada

   ಅದೇ ರೀತಿ ವಿದ್ಯಾರ್ಥಿಗಳಿಂದ ಮತ್ತು ಜನಪ್ರತಿನಿಧಿಗಳಿಂದ ಫೆಲೋಶಿಫ್ ಮೊತ್ತವನ್ನು ಮೊದಲಿನ ಆದೇಶದಲ್ಲಿರುವಂತೆ ನೀಡಬೇಕೆಂದು ಕೋರಿಕೆಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವ ಕಾರಣದಿಂದ ಪಿಎಚ್‌ಡಿ (3 ವರ್ಷ) ಮತ್ತು ಎಂ.ಫಿಲ್ (2 ವರ್ಷ) ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಿಂದಿನ ಆದೇಶದಂತೆ ಪ್ರತಿ ತಿಂಗಳು 25,000 ರೂ. ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ 1 ಲಕ್ಷ ರೂ. (ನಿರ್ವಹಣಾ ವೆಚ್ಚ) ಹೀಗೆ ಒಟ್ಟು 3.10 ಲಕ್ಷ ರೂ.ಗಳನ್ನು 2021-22 ಸಾಲಿನಿಂದ ಜಾರಿಗೆ ಬರುವಂತೆ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ.

   English summary
   The state government has issued an amendment order to give religious minority PhD students Rs 25,000 per month as before.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X