ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Reject KFC trending: ಟ್ವಿಟ್ಟರ್‌ನಲ್ಲಿ ಕರವೇ ಆಕ್ರೋಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 24: ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದಿದ್ದ ಜೊಮ್ಯಾಟೋ ವಿರುದ್ಧ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಟ್ವಿಟ್ಟರ್‌ನಲ್ಲಿ Reject KFC ಎಂದು ಟ್ರೆಂಟ್‌ ಆಗುತ್ತಿದೆ. ಹಾಗಾದರೆ ಈ ಟ್ರೆಂಡ್‌ ಯಾಕೆ ಆಗುತ್ತಿದೆ. ಈ ಬಗ್ಗೆ ಮಾಹಿತಿ ನಿಮಗೆ ಇಲ್ಲಿ ನೀಡಲಾಗಿದೆ.

ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ತನ್ನ ಗ್ರಾಹಕರಿಗೆ ಕೆಎಫ್‌ಸಿ ಸಿಬ್ಬಂದಿ ಹೇಳಿದ್ದು ಈಗ ಟ್ವಿಟ್ಟರ್‌ನಲ್ಲಿ Reject KFC ಎಂದು ಟ್ರೆಂಟ್‌ ಆಗಲು ಕಾರಣವಾಗಿದೆ. ಬೆಂಗಳೂರಿನಲ್ಲಿ ಕೆಎಫ್‌ಸಿಗೆ ತೆರಳಿದ ಗ್ರಾಹಕರೊಬ್ಬರು ಸುಮಾರು ಅರ್ಧ ಗಂಟೆ ಕಳೆದರೂ ಯಾವುದೇ ಕನ್ನಡ ಹಾಡನ್ನು ಹಾಕದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Reject Zomato: ಹಿಂದಿ ಕಲಿಯಲೇ ಬೇಕು ಎಂದ ಜೊಮ್ಯಾಟೋಗೆ ತಮಿಳರ ತರಾಟೆReject Zomato: ಹಿಂದಿ ಕಲಿಯಲೇ ಬೇಕು ಎಂದ ಜೊಮ್ಯಾಟೋಗೆ ತಮಿಳರ ತರಾಟೆ

ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್‌ಸಿಯಲ್ಲಿ ಕನ್ನಡ ಹಾಡು ಹಾಕದ ಕಾರಣದಿಂದಾಗಿ ಇದನ್ನು ಸಿಬ್ಬಂದಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದು ನೆಟ್ಟಿಗರು ಈಗ ಕೆಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾವು ಭಾರತದಲ್ಲಿ ಇರುವುದು. ನಾವು ಎಲ್ಲಿ ಬೇಕಾದರೂ ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ?," ಎಂದು ಮಹಿಳೆಯನ್ನು ಪ್ರಶ್ನೆ ಮಾಡಿರುವ ಸಿಬ್ಬಂದಿಗಳು, "ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ," ಎಂದು ಕೂಡಾ ಕೆಎಫ್‌ಸಿ ಸಿಬ್ಬಂದಿ ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳೆ, "ನಮಗೆ ರಾಷ್ಟ್ರ ಭಾಷೆ ಯಾವುದು ಎಂಬುವುದು ಬೇಕಾಗಿಲ್ಲ. ನಮಗೆ ನಮ್ಮ ಭಾಷೆ ಮುಖ್ಯ. ನಮಗೆ ಕನ್ನಡ ಬರುತ್ತದೆ. ಕನ್ನಡ ಹಾಡು ಹಾಕಿ. ಕನ್ನಡ ಭಾಷೆಯನ್ನು ಉಳಿಸಿ," ಎಂದು ಆಗ್ರಹ ಮಾಡಿದ್ದಾರೆ. "ಒಬ್ಬೊಬ್ಬರು ಒಂದೊಂದು ಬಾಷೆಯ ಹಾಡು ಕೇಳಿದರೆ ನಾವು ಯಾವುದು ಹಾಕುವುದು," ಎಂದು ಈ ವೇಳೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ನಾವು ಈಗ ಹಾಡನ್ನೇ ಆಫ್‌ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

"ಯಾವ ಗ್ರಾಹಕರು ಬಂದು ಕೂಡಾ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯ ಹಾಡನ್ನು ಹಾಕಿ ಎಂದು ಕೇಳುವುದಿಲ್ಲ. ನಮ್ಮ ಕನ್ನಡ, ನಮ್ಮ ದೇಶ, ನಮ್ಮ ಭಾಷೆಯನ್ನು ನಾವು ಉಳಿಸಿಕೊಳ್ಳಬೇಕು. ಬೇರೆ ಗ್ರಾಹಕರು ಏನು ಹೇಳುತ್ತಾರೋ ನಮಗೆ ತಿಳಿದಿಲ್ಲ. ನಾವು ಕನ್ನಡದ ಜನರು, ನಮಗೆ ಕನ್ನಡ ಭಾಷೆ ಬೇಕು ಅಷ್ಟೇ," ಎಂದು ಖಡಕ್‌ ಆಗಿ ಮಹಿಳೆ ನುಡಿದಿದ್ದಾರೆ.

ಕೆಎಫ್‌ಸಿ ಇಂಡಿಯಾದಿಂದ ಬೆಂಗಳೂರಿನ 100 ಸಣ್ಣ ಆಹಾರ ಉದ್ಯಮಿಗಳಿಗೆ ನೆರವು ಕೆಎಫ್‌ಸಿ ಇಂಡಿಯಾದಿಂದ ಬೆಂಗಳೂರಿನ 100 ಸಣ್ಣ ಆಹಾರ ಉದ್ಯಮಿಗಳಿಗೆ ನೆರವು

ಇನ್ನು ಈ ನಡುವೆ ಮಹಿಳಾ ಸಿಬ್ಬಂದಿಯೊಬ್ಬರು, "ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿರುವುದಾ? ಇದಕ್ಕೆ ಮುಂಚೆ ಬಂದವರೂ ಇದೇ ರೀತಿ ಕೇಳಿದ್ರು, ಆಗ ಆಫಿಸರ್‌ ಬಂದು ಕೂತು ಮಾತನಾಡಿದರು. ಆ ಬಳಿಕ ಅವರಿಂದ ಏನು ಮಾಡಲು ಆಗಲಿಲ್ಲ. ನೀವು ಸುಮ್ಮನೆ ಯಾಕೆ ಮಾತನಾಡುತ್ತೀರಿ. ಕಂಪನಿ ರೂಲ್ಸ್‌ ಏನಿದೆ ಅದನ್ನು ನಾವು ಫಾಲೋ ಮಾಡುತ್ತೇವೆ," ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಕೆಎಫ್‌ಸಿ ಸಂಸ್ಥೆ ಗುರಿಯಾಗಲು ಕಾರಣವಾಗಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಟ್ವಿಟ್ಟರ್‌ನಲ್ಲಿ "Reject KFC ಹಾಗೂ ಕನ್ನಡ ಬೇಕು" ಎಂಬುವುದು ಟ್ರೆಂಟ್‌ ಆಗುತ್ತಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ವಿನಯ್‌ ಎಂಬವರು, "ಕರ್ನಾಟಕದಲ್ಲಿರುವ ಕೆಎಫ್‌ಸಿ ಗಳಲ್ಲಿ ಕನ್ನಡ ಹಾಡು ಹಾಕುವಂತಿಲ್ಲ ಅಂತ ಕೆಎಫ್‌ಸಿ ನಿಯಮ ಮಾಡಿದೆಯಂತೆ," ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

"ಈ ಕೆಎಫ್‌ಸಿಯವರು ಶ್ರೀಲಂಕಾದಲ್ಲಿ ಸಿಂಹಳಿ, ಚೀನಾದಲ್ಲಿ ಮ್ಯಾಂಡರಿನ್‌, ಜೋರ್ಡಾನ್‌ನಲ್ಲಿ ಅರೇಬಿಕ್‌, ರಷ್ಯಾದಲ್ಲಿ ರಷ್ಯನ್ ಹೀಗೆ ಆಯಾ ನಾಡುಗಳಲ್ಲಿ ಅವರವರ ನುಡಿಗಳನ್ನೇ ಬಳಸಿದ್ದಾರೆ. ನಮ್ಮ ಕನ್ನಡದಲ್ಲಿ ಸೇವೆ ಕೊಡೊಕೆ ಆಗಿಲ್ಲ ಅಂದ್ರೆ ಕರ್ನಾಟಕದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗಿ," ಎಂದು ಮತ್ತೋರ್ವ ಟ್ವೀಟ್ಟಿಗರು ಕಿಡಿಕಾರಿದ್ದಾರೆ.

Recommended Video

ಛೇ!!ಟೀಮ್ ಇಂಡಿಯಾ ಸೋತಿದ್ದಕ್ಕೆ ಪಾಕಿಸ್ತಾನ ಇಷ್ಟು ಕೆಳಮಟ್ಟಕ್ಕೆ ಇಳಿಬಾರ್ದಿತ್ತು | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
'Reject KFC' trends after executive tells Hindi is our national language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X