ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮು

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಕೊರೊನಾ ಭೀತಿಯಲ್ಲೇ ಆರಂಭಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಾಳೆ ಬೆಳಗ್ಗೆ ಏರೋ ಇಂಡಿಯಾ ಶೋಗೆ ಚಾಲನೆ ನೀಡಲಿದ್ದಾರೆ.ಎಚ್‌ಎಎಲ್ ನಿರ್ಮಿಸಿರುವ ಸುಖೋಯ್ ಎಸ್‌ಯು-3ಒ, ಸುಧಾರಿತ ಹೆಲಿಕಾಪ್ಟರ್ ಧ್ರುವ,ಲಘುಯುದ್ಧ ಹೆಲಿಕಾಪ್ಟರ್ ಗಳು ದೇಶೀಯವಿಮಾನಗಳ ಪಟ್ಟಿಯಲ್ಲಿವೆ.

ಬೆಂಗಳೂರಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಉಕ್ರೇನ್ ರಕ್ಷಣಾ ಸಚಿವಬೆಂಗಳೂರಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದ ಉಕ್ರೇನ್ ರಕ್ಷಣಾ ಸಚಿವ

ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಯುದ್ಧ ವಿಮಾನಗಳು ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಎಚ್‌ಎಎಲ್ ರೂಪಿಸಿದ್ದು, ಅದರ ಕುರಿತು ಪ್ರದರ್ಶನ ಇರಲಿದೆ. ತೇಜಸ್ ಯುದ್ಧ ವಿಮಾನವೂ ಈ ವ್ಯವಸ್ಥೆಯಲ್ಲಿ ಪ್ರದರ್ಶನ ನೀಡಲಿದೆ.

ಕೊರೊನಾ ನಡುವೆಯೂ ಎಚ್‌ಎಎಲ್‌ಗೆ ಬೇಡಿಕೆ

ಕೊರೊನಾ ನಡುವೆಯೂ ಎಚ್‌ಎಎಲ್‌ಗೆ ಬೇಡಿಕೆ

ಕೊರೊನಾ ಸಾಂಕ್ರಾಮಿಕದ ನಡುವೆಯೂ ಎಚ್‌ಎಎಲ್‌ಗೆ ಶಸ್ತ್ರಾಸ್ತ್ರ ಪಡೆಗಳಿಂದ 48000 ಮೊತ್ತದ ತಯಾರಿಕೆಗೆ ಬೇಡಿಕೆ ದೊರೆತಿದೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಗಾಗಿ ಸದಾ ಇತರೆ ರಾಷ್ಟ್ರಗಳ ಮೇಲೆ ಅವಲಂಬಿಸುವುದು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಈ ಬಾರಿ 78 ವಿದೇಶಿ ಕಂಪನಿಗಳಿವೆ

ಈ ಬಾರಿ 78 ವಿದೇಶಿ ಕಂಪನಿಗಳಿವೆ

ಈ ಬಾರಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 600ಕ್ಕೂ ಹೆಚ್ಚು ಪ್ರದರ್ಶಕರಿದ್ದು, ಇದರಲ್ಲಿ 78 ವಿದೇಶಿ ಕಂಪನಿಗಳಿವೆ. ದೇಶದ ರಕ್ಷಣಾ ಸಂಸ್ಥೆಗಳಾದ ಡಿಆರ್‌ಡಿಒ,ಎಲ್‌ಆರ್ ಡಿಇ ಇಸ್ರೋ, ಎನ್‌ಎಎಲ್, ಎಚ್‌ಎಎಲ್, ಬಿಎಚ್‌ಇಎಲ್,ಬಿಇಎಲ್ ಸೇರಿದಂತೆ ಹಲವು ಸಂಸ್ಥೆಗಳು ಜಾಗತಿಕ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದೆ. ಈಗಾಗಲೇ ಭಾರತೀಯ ವಾಯುಪಡೆಗೆ ತೇಜಸ್ ಸೇರ್ಪಡೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ತೇಜಸ್‌ನ 2ನೇ ಆವೃತ್ತಿಗೆ ಕಾರ್ಯ ಯೋಜನೆಯೂ ಶುರುವಾಗಿದೆ.

ಲಘು ಯುದ್ಧ ವಿಮಾನ ತೇಜಸ್

ಲಘು ಯುದ್ಧ ವಿಮಾನ ತೇಜಸ್

ಲಘು ಯುದ್ಧ ವಿಮಾನದ ತೇಜಸ್ 1 ಎ ಈಗಾಗಲೇ ಹಲವು ಪರೀಕ್ಷೆಗಳನ್ನು ಪೂರ್ಣಗೊಳಿಸಿ ಕಳೆದೆರೆಡು ಬಾರಿ ಬೆಂಗಳೂರಿನಲ್ಲಿ ಯಲಹಂಕ ವಾಯು ನೆಲೆಯಲ್ಲಿ ನಡೆದ ಏರೋ ಇಂಡಿಯಾದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿತ್ತು. ರಕ್ಷಣಾ ಸಚಿವಾಲಯ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಎಚ್‌ಎಎಲ್ ಈಗ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಸಾಮರ್ಥ್ಯ ಹೇಗಿರಲಿದೆ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಪ್ರದರ್ಶನಕ್ಕೆ ಆಗಮಿಸುವವರೆಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯ

ಪ್ರದರ್ಶನಕ್ಕೆ ಆಗಮಿಸುವವರೆಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯ

ಕೊರೊನಾ ಕಾರಣದಿಂದಾಗಿ ಈಗ ಪ್ರದರ್ಶನಕ್ಕೆ ಆಗಮಿಸುವ ಎಲ್ಲರಿಗೂ ಆರ್ಟಿಪಿಸಿಆರ್ ಪರೀಕ್ಷೆಗೊಳಪಡುವುದು ಕಡ್ಡಾಯವಾಗಿದೆ. 72 ಗಂಟೆಗಳ ಮುಂಚೆ ಪರೀಕ್ಷೆ ಮಾಡಿಸಿ ಅದರ ವರದಿಯನ್ನು ಅಪ್‌ಲೋಡ್ ಮಾಡಿದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

Recommended Video

ಏರ್ ಶೋಗಾಗಿ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ ಭಾರಿ ಸಿದ್ಧತೆ | Oneindia Kannada

English summary
Rehearsal for Aero India show underway in Bengaluru. The Aero India show is scheduled from 3rd February till 5th February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X