ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾವೈರಸ್ ನಿರ್ವಹಣೆಗೆ ವಲಯವಾರು ಸಭೆ

|
Google Oneindia Kannada News

ಬೆಂಗಳೂರು, ಜುಲೈ.21: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಆದೇಶವನ್ನು ನೀಡಿದ್ದಾರೆ. ಈ ಹಿನ್ನೆಲೆ ವಲಯವಾರು ಕೊವಿಡ್-19 ಸಭೆ ನಡೆಸಲಾಗುವುದು ಎಂದು ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Recommended Video

Drone Prathap in Police Custody, what next..? | Oneindia Kannada

ಬಿಬಿಎಂಪಿ ಪೂರ್ವ ವಲಯದ ವ್ಯಾಪ್ತಿಯಲ್ಲಿ‌ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಸತಿ ಸಚಿವ ವಿ.ಸೋಮಣ್ಣ ಪೂರ್ವ ವಲಯದ ವ್ಯಾಪ್ತಿಯ‌ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

Regional Meeting On Coronavirus Management In Bengaluru

ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್‌!

ಬೌರಿಂಗ್ ಆಸ್ಪತ್ರೆ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಬುಧವಾರದಿಂದ ಬೆಂಗಳೂರಿನಲ್ಲಿ ವಲಯವಾರು ಕೊವಿಡ್-19 ಸಭೆಯನ್ನು ನಡೆಸಲಾಗುತ್ತದೆ ಎಂದರು. ಶಾಸಕರು, ಸಂಸದರು, ಜಂಟಿ ಆಯುಕ್ತರ ಜೊತೆಗೆ ಕೊರೊನಾವೈರಸ್ ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

Regional Meeting On Coronavirus Management In Bengaluru


250 ಬೆಡ್ ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲು:

ಬೌರಿಂಗ್ ಆಸ್ಪತ್ರೆಯಲ್ಲಿ ಒಟ್ಟು 650ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿದ್ದು, ಈ ಪೈಕಿ 250 ಹಾಸಿಗೆಗಳನ್ನು ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಮೀಸಲು ಇರಿಸಲಾಗಿದೆ. ಈ 250 ಬೆಡ್ ಗಳಲ್ಲಿ 150 ಆಕ್ಸಿಜನ್ ಸಹಿತ ಬೆಡ್ ಗಳು ಸೇರಿವೆ. ಶಿವಾಜಿನಗರ, ಶಾಂತಿನಗರ, ಪುಲಕೇಶಿನಗರ ಮತ್ತು ಸರ್ವಜ್ಞನಗರಗಳು ಹೆಚ್ಚು ಜನನಿಬಿಡ ಪ್ರದೇಶಗಳಾಗಿದ್ದು, ಈ ನಾಲ್ಕು ಕ್ಷೇತ್ರಗಳ ಕೊವಿಡ್ ಕೇರ್ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

English summary
Regional Meeting On Coronavirus Management In Bangalore- Says Minister V.Somanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X