ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪೇನ್ ಕ್ರೀಡಾಕೂಟದಲ್ಲಿ ಬೆಂಗಳೂರಿನ ರೀನಾ ರಾಜು

By Prasad
|
Google Oneindia Kannada News

ಬೆಂಗಳೂರು, ಜೂನ್ 26 : ಕರ್ನಾಟಕದ ಮೊಟ್ಟಮೊದಲ ಹೃದಯ ಕಸಿ ಮಾಡಿಸಿಕೊಂಡ ಯುವತಿ, ಬೆಂಗಳೂರಿನ ರೀನಾ ರಾಜು ಅವರು ಸ್ಪೇನ್ ನಲ್ಲಿ ನಡೆಯಲಿರುವ 'ವರ್ಲ್ಡ್ ಟ್ರಾನ್ಸ್‌ಪ್ಲಾಂಟ್ ಗೇಮ್'ನಲ್ಲಿ ಭಾರತವನ್ನು ಬ್ಯಾಡ್ಮಿಂಟನ್ (ಮಿಕ್ಸ್ಡ್ ಡಬಲ್ಸ್) ಮತ್ತು 100 ಮೀ ಓಟದಲ್ಲಿ ಪ್ರತಿನಿಧಿಸಲಿದ್ದಾರೆ.

ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ

ವರ್ಲ್ಡ್ ಟ್ರಾನ್ಸ್ ಪ್ಲಾಂಟ್ ಗೇಮ್ಸ್ ಫೆಡರೇಶನ್ ಆಯೋಜಿಸಿರುವ, ಎರಡು ವರ್ಷಕ್ಕೊಮ್ಮೆ ಜರುಗುವ ಎಂಟು ದಿನಗಳ ಈ ಕ್ರೀಡಾಕೂಟದಲ್ಲಿ ರೀನಾ ರಾಜು ಅವರೊಂದಿಗೆ, ಉತ್ತರಪ್ರದೇಶದ ಬಲ್ವೀರ್ ಸಿಂಗ್ ಮತ್ತು ಲಕ್ನೋನ ಧರ್ಮೇಂದ್ರ ಸೋಟಿ ಅವರು ಕೂಡ ಭಾಗವಹಿಸುತ್ತಿದ್ದಾರೆ.

Reena Raju from Bengaluru to participate in World Transplant Games

ನವೆಂಬರ್ 19, 2009ರಲ್ಲಿ ಚೆನ್ನೈನಲ್ಲಿ ಡಾ. ಚೆರಿಯನ್ ಅವರಿಂದ ಹೃದಯ ಕಸಿ ಮಾಡಿಸಿಕೊಂಡು ಮರುಹುಟ್ಟು ಪಡೆದಿರುವ ರೀನಾ ರಾಜು ಅವರು ಈ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂದು ಹಲವು ವರ್ಷಗಳಿಂದ ಕನಸು ಕಂಡಿದ್ದರು.

ಹೃದಯ ಬೇನೆಗೆ ತುತ್ತಾಗುವ ಮುನ್ನ ಉತ್ತಮ ಕ್ರೀಡಾಪಟುವಾಗಿದ್ದ ರೀನಾ ರಾಜು ಅವರು, ಹಾಕಿ ಕ್ರೀಡೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು. ನೂರು ಮೀಟರ್ ಓಟದಲ್ಲಿ ವೃತ್ತಿ ನಿಪುಣರಿಂದ ರೀನಾ ಅವರು ತರಬೇತಿಯನ್ನು ಪಡೆದಿದ್ದಾರೆ.

ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಬೇಕಾದರೆ, ದೈಹಿಕ ಸದೃಢತೆಯನ್ನು ಸಾಬೀತುಪಡಿಸಲು ಹಲವಾರು ವೈದ್ಯಕೀಯ ಪರೀಕ್ಷೆಗಳಿಗೆ ಅವರು ಒಡ್ಡಿಕೊಳ್ಳಬೇಕಾಯಿತು. ಈ ಎಲ್ಲ ಪರೀಕ್ಷೆಗಳನ್ನು ನಡೆಸಿರುವ ಡಾ. ಚೆರಿಯನ್ ಅವರೇ, ರೀನಾ ಎಲ್ಲ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Reena Raju from Bengaluru to participate in World Transplant Games

ಯುನೈಟೆಡ್ ಕಿಂಗಡಂ ಮತ್ತು ಅಮೆರಿಕದಿಂದ ನೂರಾರು ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದರೆ, ಭಾರತದಿಂದ ಕೇವಲ ಮೂವರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಈ ಕ್ರೀಡಾಕೂಟದ ಬಗ್ಗೆ ಮಾತ್ರವಲ್ಲ, ಶಸ್ತ್ರಚಿಕಿತ್ಸೆಯ ನಂತರ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ ಎಂದು ರೀನಾ ವಿಷಾದ ವ್ಯಕ್ತಪಡಿಸುತ್ತಾರೆ.

ರೀನಾ ರಾಜು ಅವರು 'ಲೈಟ್ ಎ ಲೈಫ್ - ರೀನಾ ರಾಜು ಫೌಂಡೇಷನ್' ಹುಟ್ಟುಹಾಕಿದ್ದು, ಅದರ ಮುಖಾಂತರ ನೂರಾರು ಬಡವರಿಗೆ ಅಂಗ ಕಸಿ ಮಾಡಿಸುವಲ್ಲಿ, ಶಸ್ತ್ರಚಿಕಿತ್ಸೆಯ ನಂತರ ಉಚಿತವಾಗಿ ಔಷಧಿ ದೊರಕಿಸಿಕೊಡುವಲ್ಲಿ ಸಹಾಯ ಮಾಡುತ್ತಿದ್ದಾರೆ.

English summary
Reena Raju, the first person to get heart transplant from Karnataka, is participating in World Transplant Games in Malaga, Spain. She is representing India in Badminton (mixed doubles) and 100 meter run. Wish you all the best Reena Raju.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X