ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಶುಪೀಡಕ 'ಪ್ರಿನ್ಸಿ' ಪಾಲ್ ಗೆ ರೆಡ್ ಕಾರ್ನರ್

By Mahesh
|
Google Oneindia Kannada News

Red corner notice on Paul Meekin
ಬೆಂಗಳೂರು, ಡಿ.5: ಟ್ರಿಯೋ ಇಂಟರ್ ನ್ಯಾಷನಲ್ ಶಾಲೆಯ ಮಾಜಿ ಮುಖ್ಯೋಪಾಧ್ಯಯ, ಶಿಶು ಪೀಡಕ ಪಾಲ್ ಮೀಕಿನ್ ಅವರಿಗೆ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. ಕೊಡಿಗೇಹಳ್ಳಿಯ ಟ್ರಿಯೋ ಇಂಟರ್‌ ನ್ಯಾಷನಲ್‌ ಶಾಲೆಯ ಮಾಜಿ ಪ್ರಿನ್ಸಿಪಾಲ್ ಪಾಲ್‌ ಮೀಕಿನ್‌ ಅವರು ಮಕ್ಕಳಿಗೆ ಅಶ್ಲೀಲ ಸಂದೇಶ ರವಾನೆ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದಾರೆ.

ಪಾಲ್‌ ಅವರು 2012ರಲ್ಲಿ ಟ್ರಿಯೋ ಇಂಟರ್‌ ನ್ಯಾಷ­ನಲ್‌ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾಗ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದ ಆರೋಪ ಎದು­ರಿಸಿದ್ದಾರೆ. ಐದನೇ ತರಗತಿ ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ರವಾನಿಸಿದ ಸಂಬಂಧ ಆ ವಿದ್ಯಾರ್ಥಿಯ ಪೋಷ­ಕರು ಇಂಗ್ಲೆಡ್ ಮೂಲದ ಪಾಲ್‌ ವಿರುದ್ಧ 2012ರ ಫೆಬ್ರುವರಿ ತಿಂಗಳಲ್ಲಿ ಕೊಡಿಗೇಹಳ್ಳಿ ಠಾಣೆ­ಯಲ್ಲಿ ದೂರು ದಾಖಲಿಸಿದ್ದರು. [ಪ್ರಿನ್ಸಿ-ಪಾಲ್ ಲ್ಯಾಪ್ಟಾಪ್ ರಹಸ್ಯ]

ಶಿಶುಪೀಡನೆ, ಅಸಭ್ಯ ವರ್ತನೆ, ಅಶ್ಲೀಲ ಸಂದೇಶ ರವಾನೆ ಆರೋಪದ ಮೇಲೆ ಜ.23 ರಂದು ಪಾಲ್ ನನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ಪಾಲ್ ಹೊರಬಿದ್ದಿದ್ದ. ಆದರೆ, ನಂತರ ಇಂಟರ್ ಪೋಲ್ ನೆರವು ಪಡೆದು ಮತ್ತೆ ಬಂಧಿಸಲಾಗಿತ್ತು. [ಪ್ರಿನ್ಸಿ ಕುಡಿದ ನಂತರ ಎಲ್ಲಾ ಕಕ್ಕಿದ]

ನಕಲಿ ಪಾಸ್ ಪೋರ್ಟ್ ಬಳಕೆ ಆರೋಪ ಕೂಡಾ ಪಾಲ್ ಎದುರಿಸುತ್ತಿದ್ದು ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ರವಾನಿಸಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು 2013ರ ಜುಲೈ ತಿಂಗಳಲ್ಲಿ ಬಿಡುಗಡೆ­ಯಾದ(13 ತಿಂಗಳ ಜೈಲುವಾಸದ ನಂತರ)ಪಾಲ್ ಮೇಲೆ ನಕಲಿ ದಾಖಲೆ, ಸರ್ಟಿಫಿಕೇಟ್ ವಿತರಿಸಿದ ಆರೋಪ ಇನ್ನೂ ಬಾಕಿ ಇದೆ. [ಪಾಲ್ ಗೂ ಹ್ಯಾರಿ ಪಾಟರ್ ಗೂ ಏನು ಸಂಬಂಧ?]

ಪಾಲ್ ಅವರು ಟ್ರಿಯೋ ಶಾಲೆಗೆ ಮುಖ್ಯ ಶಿಕ್ಷಕನಾಗಿ ಸೇರಿಕೊಂಡಾಗ ತಾನು ಶೆಫೆಲ್ಡ್ ವಿಶ್ವವಿದ್ಯಾನಿಲಯನಿಂದ ತತ್ವಶಾಸ್ತ್ರದಲ್ಲಿ ಡಾಕ್ಟ­ರೇಟ್ ಹಾಗೂ ಪಿಎಚ್‌ಡಿ ಪದವಿ ಪಡೆದಿದ್ದೇನೆ ಎಂದು ದಾಖಲೆಗಳನ್ನು ನಮೂದಿಸಿದ್ದರು. ಆದರೆ, ಆ ದಾಖಲೆಗಳು ನಕಲಿ ಎಂದು ಸಾಬೀತಾಗಿತ್ತು.

ಈಗ ಪಾಲ್ ಕುವೈಟಿನಲ್ಲಿ ನೆಲೆಸಿರುವ ಸಾಧ್ಯತೆ ಕಂಡು ಬಂದಿದ್ದು, ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಹಾರಿರುವ ಸಾಧ್ಯತೆಯಿದೆ. ಪಾಲ್ ಮೀಕಿನ್ ಬಂಧನಕ್ಕಾಗಿ ಕೇಂದ್ರ ಸರ್ಕಾರದ ನೆರವು ಕೋರಲಾಗುವುದು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಪಾಲ್ ಮಿಕೀನ್ ಹುಡುಕಾಟಕ್ಕಾಗಿ ರೆಡ್ ಕಾರ್ನರ್ ನೋಟಿಸ್ ನೀಡಿರುವುದನ್ನು ಡಿಸಿಪಿ ಅಭಿಷೇಕ್ ಗೋಯಲ್ ದೃಢಪಡಿಸಿದ್ದಾರೆ.

English summary
The Bengaluru city police have issued a red corner notice against fugitive paedophile Paul Meekin who was arrested earlier on charges of sexually abusing a child in the school where he worked as a principal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X