• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನವರಿ 26ರಂದು ಬೆಂಗಳೂರಿನಲ್ಲಿ ರೆಡ್ ಅಲರ್ಟ್ ಘೋಷಣೆ

|

ಬೆಂಗಳೂರು, ಜನವರಿ 24: ಜನವರಿ 26 ರಂದು ಬೆಂಗಳೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಗಣರಾಜ್ಯೋತ್ಸವ ದಿನದಂದು ಬೆಂಗಳೂರನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು, ರೆಡ್ ಅಲರ್ಟ್ ಘೋಷಿಸಿದ್ದಾರೆ. ಗಣರಾಜ್ಯೋತ್ಸವದ ದಿನ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಭದ್ರತೆಗಾಗಿ 10 ಕೆಎಸ್ ಆರ್ಪಿ ತುಕಡಿ, 2 ಡಿಸ್ವ್ಯಾಟ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ. ಮೈದಾನದ ಸಂಪೂರ್ಣ ತಪಾಸಣೆಗೆ 7 AS ಚೆಕ್ ತಂಡ ನಿಯೋಜನೆ. 9 ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್‌. 150 ಅಧಿಕಾರಿಗಳು, 943 ಸಿಬ್ಬಂದಿ ಬಂದೋಬಸ್ತ್‌ ಗೆ ನಿಯೋಜನೆ ಮಾಡಲಾಗಿದೆ.

ಕಂಬಿ ಹಿಂದೆ ಹಾಕುತ್ತೇವೆ: 'ಸ್ವಿಗ್ಗಿ'ಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

ಕಳೆದ 15 ದಿನಗಳಿಂದ ಮಾಣಿಕ್ ಷಾ ಮೈದಾನಕ್ಕೆ 75 ಪೊಲೀಸರಿಂದ ನಿರಂತರ ಭದ್ರತೆ ಕಲ್ಪಿಸಲಾಗಿದೆ. ಬೆಂಗಳೂರಲ್ಲಿ ಅನುಮಾನವಾಗಿ ವಾಸ್ತವ್ಯ ಹೂಡುವವರ ಮೇಲೆ ನಿಗಾವಹಿಸಲಾಗಿದೆ.

ಹೋಟೆಲ್, ಲಾಡ್ಜ್ ಗಳು, ತಂಗುದಾಣಗಳಲ್ಲಿ ನಿಗಾ ಇಡಲಾಗಿದೆ. ಪಥ ಸಂಕಲನದಲ್ಲಿ 34 ತುಕಡಿಗಳು ಭಾಗವಹಿಸುತ್ತಿವೆ. ಮೈದಾನ ಸುತ್ತ 85 ಸಿಸಿ ಕ್ಯಾಮರಾ ಅಳವಡಿಕೆ.

ಸಿಗರೇಟ್, ಬೆಂಕಿ ಪೆಟ್ಟಿಗೆ, ಕರಪತ್ರಗಳು, ಹರಿತವಾದ ವಸ್ತು, ಚಾಕು ಚೂರಿಗಳು, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ವಿಡಿಯೋ,ಸ್ಟೀಲ್ ಕ್ಯಾಮರಾ, ನೀರಿನ ಬಾಟಲಿ, ಕ್ಯಾನ್, ಶಸ್ತ್ರಾಸ್ತ್ರಗಳು, ಮದ್ಯದ ಬಾಟಲ್, ತಿಂಡಿ-ತಿನಿಸು, ಬಾವುಟಗಳು, ಪಟಾಕಿ, ಸ್ಫೋಟಕ ವಸ್ತುಗಳಿಗೆ ನಿಷೇಧ ಹೇರಲಾಗಿದೆ.

ಪ್ರತಿಭಟನೆಗೆ ಅವಕಾಶವಿಲ್ಲ

ಪ್ರತಿಭಟನೆಗೆ ಅವಕಾಶವಿಲ್ಲ

ಇಷ್ಟು ದಿನ ಪ್ರತಿಭಟನೆಗೆ ಅವಕಾಶ ಕೊಡಲಾಗಿದೆ.ಇಷ್ಟು ದಿನ ಪ್ರತಿಭಟನೆಗೆ ಅವಕಾಶ ಕೊಡಲಾಗಿದೆ. ಹೀಗಾಗಿ ಪ್ರತಿಭಟನೆ ಮಾಡುವಂತಿಲ್ಲ. ಮೈದಾನದ ಸುತ್ತಲಿನ ಬಿಲ್ಡಿಂಗ್ ಹೆಚ್ಚಿನ ಭದ್ರತೆ ಮತ್ತು ನಿಗಾ ವಹಿಸಲಾಗಿದೆ. ದೇಶಭಕ್ತಿಯೊಂದಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಹೇಳಿದ್ದಾರೆ.

ಯಾರ್ಯಾರಿಗೆ ಎಲ್ಲಿ ವ್ಯವಸ್ಥೆ

ಯಾರ್ಯಾರಿಗೆ ಎಲ್ಲಿ ವ್ಯವಸ್ಥೆ

ಆರ್ಮ್ಸ್ ಪ್ಲೇಟೆನೋ ಮೊದಲನೆ ಸಾಲಿನಲ್ಲಿ, ಶ್ವಾನದಳ ಹಾಗೂ ಸ್ವಚ್ಛ ಭಾರತ್ ಈ ಭಾರಿಯ ವಿಶೇಷವಾಗಿದೆ. ಮೋಟರ್ ಬೈಕ್ ಶೋ ಹಾಗೂ ಗರುಡ ಬಟಾಲಿಯನ್ ಇಂದ ವಿಶೇಷ ಕವಾಯತು. ಗೋವಾ ಪೊಲೀಸರು ಅತಿಥಿಯಾಗಿ ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ.

ತಪಾಸಣೆ ವೇಳೆ ಸಹಕರಿಸಿ

ತಪಾಸಣೆ ವೇಳೆ ಸಹಕರಿಸಿ

ತಪಾಸಣೆ ವೇಳೆ ಪೊಲೀಸರಿಗೆ ಸಹಕಾರ ಕೊಡಿ. ನಿಗದಿತ ಸ್ಥಳದಲ್ಲಿ ಸಮೂಹಕ್ಕೆ ಸರಿಯಾಗಿ ಬಂದು ಆಸನದಲ್ಲಿ ಕೂರಬೇಕು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿಇದೆ. ಮೈದಾನವನ್ನು ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಯುತ್ತಿದೆ.

ಗಣರಾಜ್ಯೋತ್ಸ ದಿನದ ಕಾರ್ಯಕ್ರಮಗಳೇನು?

ಗಣರಾಜ್ಯೋತ್ಸ ದಿನದ ಕಾರ್ಯಕ್ರಮಗಳೇನು?

ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ. ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಲಾಗುತ್ತದೆ. 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ ನಡೆಯಲಿದೆ. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ಜರುಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು 2 ಸಾವಿರ ಮಕ್ಕಳು ಭಾಗಿಯಾಗಲಿದ್ದಾರೆ.

ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರಧಾನ

ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರಧಾನ

ರಾಜ್ಯಪಾಲ ರಿಂದ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ವೀಕ್ಷಣೆಗೆ 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತ 70 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆಕರ್ಷಕ ಮೋಟಾರ್ ಬೈಲ್ ಸ್ಟಂಟ್, ರಾಜ್ಯ ಪೊಲೀಸ್ ಗರುಡ ಪಡೆಯಿಂದ ಅಣುಕು ಪ್ರದರ್ಶನ ನಡೆಯಲಿದೆ.

English summary
Bengaluru Police commissioner Bhaskar Rao declared Red alert for Bengaluru on the occasion Of Republic day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X