ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬೊಜ್ಜುತನ ಹೆಚ್ಚಳ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬೊಜ್ಜುತನ ಕಾಡುತ್ತಿದೆ ಎನ್ನುವ ವಿಷಯವನ್ನು ವೈದ್ಯರು ಗಮನಿಸಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹಸಿವು ಕೂಡ ಹೆಚ್ಚಾಗಿದೆ.

ಇಲ್ಲಿಯವರೆಗೆ ಗುಣಮುಖರಾದ ನಂತರ ಅನೇಕ ಮಂದಿ ಹೃದಯದ ತೊಂದರೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಯಾರ್ಯಾರಿಗೆ ನೀಡುವಂತೆ ಶಿಫಾರಸು? ದೇಶದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಯಾರ್ಯಾರಿಗೆ ನೀಡುವಂತೆ ಶಿಫಾರಸು?

ಕೊವಿಡ್- ನಿಂದ ಗುಣಮುಖರಾಗಿ ಬೊಜ್ಜುತನ ಬಂದಿರುವಂತಹ ಎರಡು ಪ್ರಕರಣಗಳನ್ನು ಪ್ರತಿದಿನ ನೋಡುತ್ತಿರುವುದಾಗಿ ಅಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಮಾಲೋಚಕ ವೈದ್ಯ ಡಾ.ಮಹೇಶ್ ಚಿಕ್ಕಚನ್ನಪ್ಪ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ತಿಳಿಸಿದ್ದಾರೆ.

ಕೊವಿಡ್-19 ನಿಂದ ಚೇತರಿಸಿಕೊಂಡ ನಂತರ ಅನೇಕ ರೋಗಿಗಳು ಹೆಚ್ಚು ಆಹಾರವನ್ನು ತಿನ್ನುತ್ತಾರೆ.

ತೂಕ ಹೆಚ್ಚಾದವರಲ್ಲಿ ಮಧುಮೇಹವೂ ಹೆಚ್ಚಳ

ತೂಕ ಹೆಚ್ಚಾದವರಲ್ಲಿ ಮಧುಮೇಹವೂ ಹೆಚ್ಚಳ

ಪೂರಕ ಆಹಾರ ಪದಾರ್ಥಗಳ ಸೇವನೆ ಉತ್ತಮವೆಂದು ಕೊಲಂಬಿಯಾ ಏಷ್ಯಾ
ತೂಕ ಹೆಚ್ಚಾದವರಲ್ಲಿ ಮದುಮೇಹ, ಕೊಬ್ಬಿನಾಂಶ ಹೆಚ್ಚಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಇನ್ನೂ ಆರು ತಿಂಗಳ ಕಾಲ ಗಂಭೀರವಾದ ಆರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಹೊರಗಿನ ಆಹಾರ ಸೇವನೆ

ಹೊರಗಿನ ಆಹಾರ ಸೇವನೆ

ಮುಖ್ಯವಾಗಿ ಜಂಕ್ ಪುಡ್ ನಂತಹ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಅಲ್ಲದೇ, ಕಡಿಮೆ ಅಥವಾ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಸುಮಾರು 10 ಕೆಜಿ ತೂಕ ದಪ್ಪಾಗುತ್ತಾರೆ. ಮತ್ತೆ ತೂಕ ಇಳಿಸಿಕೊಳ್ಳಲು ಪೌಷ್ಟಿಕತಜ್ಞರು ಅಥವಾ ಆಹಾರ ತಜ್ಞರ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಡಾಕ್ಟರ್ ಗಳು ಹೇಳುತ್ತಿದ್ದಾರೆ.

ಎಣ್ಣೆ-ಕೊಬ್ಬು ಮಿಶ್ರಿತ ಆಹಾರ ಸೇವನೆ

ಎಣ್ಣೆ-ಕೊಬ್ಬು ಮಿಶ್ರಿತ ಆಹಾರ ಸೇವನೆ

ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಿಕೊಳ್ಳುವ ಸಲುವಾಗಿ ಎಣ್ಣೆ- ಕೊಬ್ಬು ಮಿಶ್ರಿತ ಆಹಾರವನ್ನು ಹೆಚ್ಚಾಗಿ ತಿಂದು ದಪ್ಪಾಗುತ್ತಿದ್ದಾರೆ. ಒಂದು ತಿಂಗಳಲ್ಲಿ 8 ರಿಂದ 10 ಕೆಜಿಯಷ್ಟು ದಪ್ಪಾಗುತ್ತಿದ್ದಾರೆ.ಅವರು ಆರೋಗ್ಯಯುಕ್ತ ಆಹಾರ ಪದಾರ್ಥ ಮತ್ತು ಒಳಾಂಗಣ ವ್ಯಾಯಾಮ ಚಟುವಟಿಕೆಗಳನ್ನು ಆರಂಭಿಸುವಂತೆ ಅವರು ಸಲಹೆ ನೀಡಿದ್ದಾರೆ.

14 ದಿನಗಳ ಕಾಲ ಮನೆಯಲ್ಲಿಯೂ ಪ್ರತ್ಯೇಕವಾಗಿರಬೇಕು

14 ದಿನಗಳ ಕಾಲ ಮನೆಯಲ್ಲಿಯೂ ಪ್ರತ್ಯೇಕವಾಗಿರಬೇಕು

ಕೊವಿಡ್-19 ನಿಂದ ಗುಣಮುಖರಾದ ಬಳಿಕವೂ 14 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು, ಹಾಗೆಯೇ ಎಣ್ಣೆ ಪದಾರ್ಥವನ್ನು ತಿನ್ನುವುದುನ್ನು ಕಡಿಮೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Recommended Video

Corona ಚೇತರಿಕೆ ಪ್ರಮಾಣ ಜಾಸ್ತಿ! | Oneindia Kannada

English summary
Obesity is the new after-effect that doctors are noticing in patients who have recovered from Covid-19. Till now many were facing issues like heart complications, chronic respiratory diseases, fatigue etc post-recovery.Health professionals say that after patients have recovered from Covid-19, they tend to eat more food, mainly junk stuff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X