ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿದೆದ್ದ ರಾಮಲಿಂಗಾ ರೆಡ್ಡಿ, ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ!

|
Google Oneindia Kannada News

Recommended Video

ರಾಮಲಿಂಗಾ ರೆಡ್ಡಿ ಕೋಪಕ್ಕೆ ದೋಸ್ತಿ ಸರ್ಕಾರ ಕಂಗಾಲು..? | Oneindia Kannada

ಬೆಂಗಳೂರು, ಜೂನ್ 04: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತೂ ಮೈತ್ರಿ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಫಲಿತಾಂಶ ಬಿಡುಗಡೆಯಾದ ನಂತರ ಕಾಂಗ್ರೆಸ್ ನ ನಿಷ್ಠಾವಂತ ನಾಯಕರೇ ಪಕ್ಷದ ಕೆಲವು ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ.

ಸಚಿವ ಸ್ಥಾನ ಸಿಗದಿದ್ದ ಕಾರಣ ಬೇಸರಗೊಂಡು, ನಂತರ ಮೌನವಾಗಿದ್ದ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಇದೀಗ ಮೌನ ಮುರಿದಿದ್ದಾರೆ. ಲೋಕಸಭೆ ಚುನಾವಣೆಯ ಸೋಲಿಗೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ಕಾರಣ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಸಾಲು ಸಾಲು ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿರುವ ರೆಡ್ಡಿ, ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳು ಸವಾಲಿನ ದಿನಗಳಾಗಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಸೋಲು : ಕೆಪಿಸಿಸಿಯಿಂದ ಸತ್ಯ ಶೋಧನಾ ಸಮಿತಿ ರಚನೆಲೋಕಸಭೆ ಸೋಲು : ಕೆಪಿಸಿಸಿಯಿಂದ ಸತ್ಯ ಶೋಧನಾ ಸಮಿತಿ ರಚನೆ

ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರಾಗಿರುವ ರಾಮಲಿಂಗಾ ರೆಡ್ಡಿ ಅವರೇ ಹೀಗೆ ಸಿಡಿದೆದ್ದರೆ, ಅವರ ಕಾಂಗ್ರೆಸ್ ನಲ್ಲಿ ಅಸಮಾಧಾನದಿಂದ ಬುಸುಗುಡುತ್ತಿರುವ ಮತ್ತಷ್ಟು ನಾಯಕರು ಸಿಡಿದೇಳಬಹುದು. ಇದರಿಂದ ಸಮ್ಮಿಶ್ರ ಸರ್ಕಾರಕ್ಕೂ ಸಂಕಟ ಗ್ಯಾರಂಟಿ.

ರಾಮಲಿಂಗಾ ರೆಡ್ಡಿ ಅವರ ಸಾಲು ಸಾಲು ಟ್ವೀಟ್ ಗಳು ಇಲ್ಲಿವೆ...

ಹಿರಿಯ ನಾಯಕರ ಕಡೆಗಣನೆ

ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಹಾಗೂ ಕೆಲವು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆಯಿಂದಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು- ರಾಮಲಿಂಗಾ ರೆಡ್ಡಿ

ವಲಸಿಗರಿಗೆ ಮಣೆ ಹಾಕಿದ್ದೇ ಸಮಸ್ಯೆಗೆ ಕಾರಣ!

ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ.

ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ- ರಾಮಲಿಂಗಾ ರೆಡ್ಡಿ

ಪರಂ ವರ್ಸಸ್ ಕೆಎನ್ ಆರ್ ಬೆಂಬಲಿಗರು; ತುಮಕೂರಲ್ಲಿ ಕಾಂಗ್ರೆಸ್ ಕೊತಕೊತಪರಂ ವರ್ಸಸ್ ಕೆಎನ್ ಆರ್ ಬೆಂಬಲಿಗರು; ತುಮಕೂರಲ್ಲಿ ಕಾಂಗ್ರೆಸ್ ಕೊತಕೊತ

ಕೆಲವು ಕಾಂಗ್ರೆಸ್ ಸಚಿವರೇ ಕಾರಣ!

ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ್ಯ ಕಾರಣವಾಗಿದೆ- ರಾಮಲಿಂಗಾ ರೆಡ್ಡಿ

ಮುಂದಿವೆ ಸವಾಲಿನ ದಿನಗಳು

ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ-ರಾಮಲಿಂಗಾ ರೆಡ್ಡಿ

ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಸ್ಥಾನವನ್ನು ತುಂಬುವುದು ಕಷ್ಟ: ಸಲ್ಮಾನ್ ಖುರ್ಷಿದ್ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಸ್ಥಾನವನ್ನು ತುಂಬುವುದು ಕಷ್ಟ: ಸಲ್ಮಾನ್ ಖುರ್ಷಿದ್

ಹಿರಿಯರಿಗೆ ಪ್ರಾತಿನಿಧ್ಯ ನೀಡಿ

ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯವಾದೀತು-ರಾಮಲಿಂಗಾ ರೆಡ್ಡಿ

ಎಡವಿದ ಸಚಿವರಿಗೆ ಸಂಘಟನೆಯ ಜವಾಬ್ದಾರಿ!

ಪಕ್ಷದ ಪರ ಚುನಾವಣಾ ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷ ಸಂಘಟನಾ ಜವಾಬ್ದಾರಿ ನೀಡುವುದರ ಜೊತೆಗೆ ಹಿರಿಯರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಿ ಪಕ್ಷದ ಆಂತರಿಕ ಅಸಮತೋಲನವನ್ನು ಸರಿಪಡಿಸುವ ಕಾರ್ಯವನ್ನು, ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕಾಗಿದೆ-ರಾಮಲಿಂಗಾ ರೆಡ್ಡಿ

English summary
BTM layout MLA, Congress leader Ramalinga Reddy expresses his anger on some of Congress ministers on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X