ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೂಲಸೌಕರ್ಯ ಯೋಜನೆಗಳಿಗೆ ಶಾರ್ಟ್ ಬ್ರೇಕ್

|
Google Oneindia Kannada News

ಬೆಂಗಳೂರು, ಮಾರ್ಚ್ 29: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕ್ಯಾಬಿನೆಟ್ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾರಣ ಬೆಂಗಳೂರು ಮೂಲಸೌಕರ್ಯ ಯೋಜನೆಗಳಿಗೆ ಹಿನ್ನಡೆಯಾಗಿದೆ.

ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್ ಶಾ ಡಬಲ್ ಎಂಜಿನ್ ಸರ್ಕಾರವಿದೆ. ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಕೇಂದ್ರ ಸಹಕರಿಸಲಿದೆ ಎಂದು ಹೇಳಿದ್ದರು. ಆದರೆ ಯಾವುದೇ ಯೋಜನೆಗಳು ಪ್ರಗತಿಯಲ್ಲಿಲ್ಲ.

ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಕಾರ್ಯ ಮುಕ್ತಾಗೊಂಡಿದ್ದು, ಉದ್ಘಾಟನೆ ಆಗಬೇಕಿದೆ. ಇದಕ್ಕೆ ಕೇಂದ್ರದಿಂದ ದಿನಾಂಕ ನಿಗದಿಯಾಗಬೇಕಿದೆ. ಆದರೆ ನಾಲ್ಕು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಗಳು ತಡವಾಗುತ್ತಿದೆ.

Reasons Why Delay In Key Infra Projects In Bengaluru

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇನ್ನಿತರೆ ಕ್ಯಾಬಿನೇಟ್ ಸಚಿವರು ಚುನಾವಣಾ ಪ್ರಚಾರದಲ್ಲಿದ್ದಾರೆ. ಇದು ಮೊದಲ ಎಸಿ ರೈಲ್ವೆ ಟರ್ಮಿನಲ್ ಆಗಿದೆ. ಪ್ರಯಾಣಿಕರಿಗೆ ಏರ್‌ಪೋರ್ಟ್ ಮಾದರಿಯ ಅನುಭವವಾಗಲಿದೆ.

ಹಾಗೆಯೇ ಹಲವು ವರ್ಷಗಳಿಂದ ಮುಂದೂಡುತ್ತಾ ಬರುತ್ತಿರುವ ಸಬ್‌ಅರ್ಬನ್ ರೈಲು ಯೋಜನೆಗೆ ಅಡಿಗಲ್ಲು ಇಟ್ಟಿಲ್ಲ. ಅಕ್ಟೋಬರ್ 2020ರಲ್ಲಿ 15,657 ಕೋಟಿ ರೂ. ವೆಚ್ಚದ ಯೋಜನೆಗೆ ಕೇಂದ್ರ ಅನುಮೋದನೆ ನೀಡಿತ್ತು.

Recommended Video

ಯಡಿಯೂರಪ್ಪನನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

ಶೀಘ್ರವೇ ಬೈಯಪ್ಪನಹಳ್ಳಿ ಯಶವಂತಪುರ, ಚಿಕ್ಕಬಾಣಾವರ ನಡುವೆ ಎರಡು ಕಾರಿಡಾರ್‌ಗಳು ನಿರ್ಮಾಣವಾಗಲಿವೆ. ಹಾಗೆಯೇ ಯಶವಂತಪುರ ರೈಲ್ವೆ ನಿಲ್ದಾಣದ ನವೀಕರಣವಾಗಿದ್ದು, ಅದರ ಉದ್ಘಾಟನೆ ಕೂಡ ನಡೆದಿಲ್ಲ.

English summary
As PM Modi and his canbinet Collegues busy in 4 States Elections Campaign delay key infra projects in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X