ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

40 ವರ್ಷಕ್ಕಿಂತ ಮೇಲ್ಪಟ್ಟ ಚಾಲಕರಿಂದಲೇ 40%ರಷ್ಟು ಬಸ್‌ ಅಪಘಾತ

|
Google Oneindia Kannada News

ಬೆಂಗಳೂರು, ಮೇ18: ಸಾರ್ವಜನಿಕರ ದಿನನಿತ್ಯದ ಅಗತ್ಯ ಪ್ರಯಾಣ ಸಾರಿಗೆ ಅವಶ್ಯವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸಾಕಷ್ಟು ಅನುಕೂಲತೆಯನ್ನು ಹೊಂದಿದೆ. ಆದರೆ ದಿನನಿತ್ಯವು ಸಾವಿರಾರು ಬಸ್‌ಗಳು ರಸ್ತೆಗಿಳಿದು ಸಾರ್ವಜನಿಕರ ಪ್ರಯಾಣದ ಸೇವೆಯಲ್ಲಿ ನಿರತರಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಕಳೆದ 4 ತಿಂಗಳಲ್ಲಿ ಚಾಲಕರು 80 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾರಣಾಂತಿಕ ಅಪಘಾತಗಳಿಗೆ ಹಾನಿ ಪಡಿಸಿದ್ದಾರೆ. ಹೀಗೆ ಸಂಭವಿಸಿರುವ ಈ ಮಾರಣಾಂತಿಕ ರಸ್ತೆ ಅಪಘಾತಗಳಿಗೆ 40ರಿಂದ 50 ವರ್ಷ ವಯಸ್ಸಿನ ಬಸ್‌ ಚಾಲಕರೇ ಕಾರಣರಾಗಿದ್ದಾರೆ ಎಂದು ನಿಗಮವು ಈ ಮಾಹಿತಿಯನ್ನು ಚಾಲಕರಿಗೆ ನೀಡಿದ ಕಾರ್ಯಗಾರದಲ್ಲಿ ಬಹಿರಂಗ ಪಡಿಸಿದೆ.

2022ರ ಕೇವಲ 4 ತಿಂಗಳ ನಡುವೆ ವರದಿಯಾಗಿರುವ 82 ಬಸ್‌ಗಳು ಮಾರಣಾಂತಿಕ ಅಪಘಾತಗಳನ್ನು ನಿಗಮದ ಅಧಿಕಾರಿಗಳು ವಿಶ್ಲೇಷಿಸಿದಾಗ ಈ ಗಂಭೀರ ಮಾಹಿತಿ ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಲಾಯಿಸಿದ್ದ ಶೇಕಡಾ 39ರಷ್ಟು 40ರಿಂದ 50 ವಯಸ್ಸಿನವರು ಬಸ್‌ಗಳನ್ನು ರಸ್ತೆ ಅಫಘಾತಗಳಲ್ಲಿ ಮಾರಣಾಂತಿಕವಾಗಿ ಹಾನಿಪಡಿಸಲಾಗಿದೆ. ಇದಕ್ಕೆ ಮೂಲ ಕಾರಣ 40ರಿಂದ 50 ವಯಸ್ಸಿನ ಬಸ್‌ ಚಾಲಕರೇ ಆಗಿದ್ದಾರೆ. ಇನ್ನು ಶೇಕಡಾ 23ರಷ್ಟು ಬಸ್ ಅಪಘಾತಗಳು 36ರಿಂದ 40 ವಯಸ್ಸಿನ ಬಸ್‌ ಚಾಲಕರೇ ಕಾರಣವಾಗಿದ್ದಾರೆ ಎಂದು ನಿಗಮವು ಮಾಹಿತಿಯನ್ನು ಬಿಡುಗಡೆ ಮಾಡಿದೆ.

Analysis: Reason behind KSRTC accidents and drivers aged above 40 years

ಈ ಕುರಿತಂತೆ ನಿಗಮವು ರಸ್ತೆ ಸುರಕ್ಷೆಯ ಕುರಿತು ಕಾರ್ಯಗಾರವನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಗಂಭೀರ ಮಾಹಿತಿಯನ್ನು ಗಮನ ಸೆಳದಿದ್ದು ಬಸ್‌ ಚಾಲಕರು ಎಚ್ಚರವಹಿಸಿ ಬಸ್‌ ಚಲಾಯಿಸಬೇಕಾಗುತ್ತದೆ ಹಾಗೂ ಮಾರಣಾಂತಿಕ ಅಪಘಾತಗಳನ್ನು ತಡೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿಗಮವು ಕಾರ್ಯಗಾರದಲ್ಲಿ ಗಮನ ಸೆಳೆದಿದೆ. ಈ ವಿಶೇಷ ಕಾರ್ಯಾಗಾರದಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚಿಸಲಾಯಿತು. 27ರಷ್ಟು ಅಪಘಾತಗಳು ಮಧ್ಯಾಹ್ನದ ಸಮಯದಲ್ಲಿ ಸಂಭವಿಸಿವೆ. ಪಾದಚಾರಿಗಳು ಮೊಬೈಲ್‌ನಲ್ಲಿ ಮಾತನಾಡಿಕೊಂಡು ದಾಟುತ್ತಿರುವುದು ಅಪಘಾತಗಳಿಗೆ ಕಾರಣ ತಿಳಿದು ಬಂದಿದೆ ಹಾಗೂ 40%ರಷ್ಟು ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಗಳು 40 ವರ್ಷಕ್ಕಿಂತ ಮೇಲ್ಪಟ್ಟ ಚಾಲಕರಿಂದ ಉಂಟಾಗುತ್ತಿರುವುದು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದೆ.

Analysis: Reason behind KSRTC accidents and drivers aged above 40 years

ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರು, ನೌಕರರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದರು. ಅವರಿಗೆ ಸಾಂತ್ವನ ಹೇಳಿ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಅವರಿಗಾಗಿ 'ಗೆಟ್ ವೆಲ್' ಕಿಟ್ ನೀಡಲಾಗಿದೆ ಎಂದು ನಿಗಮ ತಿಳಿಸಿತು. ಇನ್ನು ಇದೇ ವೇಳೆ ಅಪಘಾತಕ್ಕೀಡಾದ ಚಾಲಕರಿಗಾಗಿ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾತನಾಡಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಉತ್ತಮ ಅಭ್ಯಾಸಗಳನ್ನು ಕಲಿಯಲು ಅವಕಾಶವನ್ನು ಬಳಸಿಕೊಳ್ಳುವಂತೆ ಬಸ್ ಚಾಲಕರಿಗೆ ಕರೆ ನೀಡಿದರು.

Recommended Video

ಗುಜರಾತ್ ಟೈಟನ್ಸ್ ವಿರುದ್ಧ RCB ಗೆದ್ರೆ ಪ್ಲೇಆಫ್ ರೇಸ್ ನಿಂದ ಹೊರಬೀಳೋದು ಯಾರು? | Oneindia Kannada

English summary
KSRTC Officials analysed the 82 fatal accidents reported between January to April this year and said 39 per cent were caused by drivers who are in the age range 40 to 50 years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X