ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧು ಸಾಗರ್ ಡೈರಿಯಲ್ಲಿ ಅಡಗಿತ್ತು ಆತ್ಮಹತ್ಯೆಯ ಡೆತ್ ಸೀಕ್ರೇಟ್!

|
Google Oneindia Kannada News

ಬೆಂಗಳೂರು, ಸೆ. 20: 'ಹಲ್ಲೆಗೆರೆ ಶಂಕರ್ ಒಬ್ಬ ಸ್ವಾರ್ಥಿ. ನನ್ನ ಅಪ್ಪ ಎಂದು ಹೇಳಿಕೊಳ್ಳಲು ನಾಚಿಕೆ, ಅತ ಒಬ್ಬ ಕಾಮುಕ, ತನ್ನ ಏರಿಯಾದ ಮಹಿಳೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಆಕೆಯ ಮಗಳನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸಿದ್ದ. End abuse against women and children!' ಕುಟುಂಬದ ಸಾಮೂಹಿಕ ಆತ್ಮಹತ್ಯೆ ಹಿಂದಿನ ರಹಸ್ಯ ಮಧುಸಾಗರ್ ಬರೆದಿರುವ ಡೈರಿ ಹಾಗೂ ಡೆತ್ ನೋಟ್‌ನಲ್ಲಿ ಬಹಿರಂಗವಾಗಿದೆ.

ಮಧು ಸಾಗರ್ ಡೆತ್ ನೋಟ್ ಹಾಗೂ ಡೈರಿಯಲ್ಲಿ ಉಲ್ಲೇಖವಾಗಿರುವ ಮಾಹಿತಿ ಅಧರಿಸಿ ಬ್ಯಾಡರಹಳ್ಳಿ ಪೊಲೀಸರು ಪತ್ರಕರ್ತಹಲ್ಲೆಗೆರೆ ಶಂಕರ್ ಮತ್ತು ಮೃತ ಸಹೋದರಿಯರ ಗಂಡಂದಿರನ್ನು ವಿಚಾರಣೆ ನಡೆಸಿದ್ದಾರೆ. ಇಂದು ಸಹ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದು, ಮಧು ಸಾಗರ್ ಬರೆದಿರುವ ಪುಟಗಟ್ಟಲೇ ಡೆತ್ ನೋಟ್‌ಗೆ ಸಂಬಂಧಿಸದಿಂತೆ ಹಲ್ಲೆಗೆರೆ ಶಂಕರ್ ಮತ್ತು ಆತನ ಅಳಿಯಂದಿರು ಪೊಲೀಸರು ಉತ್ತರಿಸಲಿದ್ದಾರೆ.

ಅಬಕಾರಿ ಪತ್ರಿಕೆ ಸಂಪಾದಕ ಹಲ್ಲೆಗೆರೆ ಶಂಕರ್ ಮೂಲತಃ ಮಂಡ್ಯ ಮೂಲದ ಹಲ್ಲೆಗೆರೆಯವರು. ಬಾರ್‌ನಲ್ಲೆ ಕೆಲಸ ಮಾಡುತ್ತಿದ್ದ ಶಂಕರ್ ಅಬಕಾರಿ ವ್ಯವಸ್ಥೆ, ಬಾರ್‌ಗಳ ನಿಯಮ, ನಿಯಮ ಉಲ್ಲಂಘನೆ ವಹಿವಾಟಿನ ಬಗ್ಗೆ ಹರಿದು ಕುಡಿದಿದ್ದ. ಅಬಕಾರಿ ಪತ್ರಿಕೆ ಆರಂಭಿಸಿದ್ದೇ ನಿರೀಕ್ಷೆಗೂ ಮೀರಿ ಶ್ರೀಮಂತಿಕೆ ಆರಿಸಿ ಬಂದಿತ್ತು. ಬದುಕಿಗಾಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದವ ಐಷಾರಾಮಿ ಬಂಗಲೆ, ಮನೆ ತುಂಬಾ ಚಿನ್ನ, ಬೆಳ್ಳಿ ಆಭರಣ, ಹಣಕಾಸಿನ ಶ್ರೀಮಂತಿಕೆ ಇಡೀ ಕುಟುಂಬದ ಹಳಿ ತಪ್ಪಿಸಿರುವುದು ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆಯ ಮೊರೆ ಹೋಗುವುದು ಸಹಜ.

Bengaluru: Reason behind family Commits suicide in Thigalarapalya

ಆದರೆ ಅತಿ ಶ್ರೀಮಂತಿಕೆ ಕೂಡ ಮನುಷ್ಯನನ್ನು ಹಾಳು ಮಾಡುತ್ತದೆ ಎಂಬುದಕ್ಕೆ ಹಲ್ಲೆಗೆರೆ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣವೇ ಸಾಕ್ಷಿ.

ಶಂಕರ್ ಪುತ್ರ ಸಾಯುವ ಮುನ್ನ ತಂದೆ ವಿರುದ್ಧ ಅವರ ಪುತ್ರ ಮಧು ಸಾಗರ್ ಪುಟಗಟ್ಟಲೇ ಆರೋಪ ಮಾಡಿದ್ದಾನೆ. ತನ್ನ ತಂದೆಯ ವಿರುದ್ಧವೇ ಪುಟಗಟ್ಟಲೇ ಬರೆದು ಅದನ್ನು ಜೆರಾಕ್ಸ್ ಮಾಡಿ ಹಂಚಿದ್ದ. ಮಧು ಸಾಗರ್ ಬರೆದಿರುವ ಡೈರಿಯಲ್ಲಿ ಶಂಕರ್ ಬೇರೆ ಮಹಿಳೆಯರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಹೀಗಾಗಿ ಶಂಕರ್ ಮತ್ತು ಪತ್ನಿ ನಡುವೆ ಸಂಬಂಧ ಹದಗೆಟ್ಟಿತ್ತು. ಅದಾದ ಬಳಿಕ ಶಂಕರ್ ಪುತ್ರಿಯರಾದ ಸಿಂಧುರಾಣಿ ಮತ್ತು ಸಿಂಚನಾ ಮದುವೆ ಯಾಗಿದ್ದರೂ, ನೆಮ್ಮದಿ ಇರಲಿಲ್ಲ. ಅಳಿಯಂದಿರ ಪರ ನಿಂತಿದ್ದ ಶಂಕರ್ ಹೆಣ್ಣು ಮಕ್ಕಳ ದೃಷ್ಟಿಯಲ್ಲಿ ಕೂಡ ಕೆಟ್ಟವರಾಗಿದ್ದರು.

Bengaluru: Reason behind family Commits suicide in Thigalarapalya

ಶ್ರೀಮಂತಿಕೆ ಮೈಗೂಡುತ್ತಿದ್ದಂತೆ, ಮಹಿಳೆಯರ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬುದನ್ನು ಮಧುಸಾಗರ್ ಡೆತ್ ನೋಡ್ ನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನನ್ನ ಮೊಬೈಲ್ ನಲ್ಲಿ ವಾಟ್ಸಪ್ ಸ್ಕ್ರೀನ್ ಶಾಟ್ ಇದೆ ಎಂದು ಹೇಳಿಕೊಂಡಿದ್ದಾರೆ. ಶಂಕರ್‌ನನ್ನು ಹಲವು ಮಹಿಳೆಯರು ಟ್ರ್ಯಾಪ್ ಮಾಡಿದ್ದರು. ಅಪ್ಪನ ಈ ನಡವಳಿಕೆ ನೋಡಿ ಅಮ್ಮ ದೂರ ಉಳಿದಿದ್ದರು. ಪದೇ ಪದೇ ಜಗಳ ಆಗುತ್ತಿತ್ತು. ಇದೇ ವಿಚಾರವಾಗಿ ಶಂಕರ್‌ನನ್ನು 2007 ರಲ್ಲಿ ಮಕ್ಕಳೇ ಮನೆಯಲ್ಲಿ ಥಳಿಸಿದ್ದರು.

Bengaluru: Reason behind family Commits suicide in Thigalarapalya

ಮೂರು ಕೋಟಿ ವ್ಯಯಿಸಿ ಮನೆ ಕಟ್ಟಿದರೂ ಕಿಟಕಿಯಿಂದ ನೀರು ಬರುತ್ತಿತ್ತು. ಇದರ ಜತೆಗೆ ಅಕ್ಕಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಮಧುಸಾಗರ್ ಡೆತ್ ನೋಟ್‌ನಲ್ಲಿ ಬರೆದಿದ್ದು, ಕೊನೆಯಲ್ಲಿ End abuse against women and children ಎಂಬ ಶೀರ್ಷಿಕೆ ಪ್ರಿಂಟ್ ತೆಗೆದು ಇಟ್ಟಿರುವುದು ಪೊಲೀಸರ ಕೈಗೆ ಸಿಕ್ಕಿದೆ. ಈ ಎಲ್ಲಾ ದಾಖಲೆಗಳನ್ನು ಮುಂದಿಟ್ಟುಕೊಂಡು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bengaluru: Reason behind family Commits suicide in Thigalarapalya

ಶಂಕರ್ ಮನೆಯಲ್ಲಿ ಚಿನ್ನ ಪತ್ತೆ: ಹಲ್ಲೆಗೆರೆ ಶಂಕರ್ ಮನೆಯಲ್ಲಿ 850 ಗ್ರಾಂ. ಚಿನ್ನಾಭರಣ, 3880 ಗ್ರಾಂ ಬೆಳ್ಳಿ, ಹದಿನೈದು ಲಕ್ಷ ರೂ. ನಗದು ಹಣ ಮನೆಯಲ್ಲಿ ಪತ್ತೆಯಾಗಿದ್ದು, ಅದನ್ನು ಶಂಕರ್ ಅವರಿಗೆ ಒಪ್ಪಿಸಲಾಗಿದೆ. ಇನ್ನು ಮೂರು ಲ್ಯಾಪ್‌ಟಾಪ್, ಮೂರು ಡೆತ್ ನೋಟ್ ಹಾಗೂ ಐದು ಮೊಬೈಲ್ ಒಂದು ಪೆನ್ ಡ್ರೈವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Recommended Video

World Bank ನಲ್ಲಿ ಪುಕ್ಸಟ್ಟೆ ರ‍್ಯಾಂಕ್ ಗಾಗಿ China ಮಾಡಿದ ವಂಚನೆ ಜಗಜ್ಜಾಹೀರು | Oneindia Kannada

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
Here is the reason behind 5 family members including 9 month old baby Commits suicide in Thigalarapalya. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X