• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೌಮ್ಯಾ ರೆಡ್ಡಿ ಅವರ ಫ್ಲೆಕ್ಸ್ ತೆರವು ಅಭಿಯಾನದ ರಿಯಾಲಿಟಿ ಚೆಕ್‌ ಮಾಡಿದಾಗ ಕಂಡದ್ದು ಇದು

By Manjunatha
|
   ಸೌಮ್ಯ ರೆಡ್ಡಿಯವರ ಫ್ಲೆಕ್ಸ್ ತೆರವು ಅಭಿಯಾನದ ರಿಯಾಲಿಟಿ ಚೆಕ್ | Oneindia Kannada

   ಬೆಂಗಳೂರು, ಜೂನ್ 19: ಜಯನಗರದ ನೂತನ ಶಾಸಕಿ ಸೌಮ್ಯಾ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಿರ್ಧಾರವನ್ನು ತಳೆದಿದ್ದರು. ತಮ್ಮ ಜಯಕ್ಕೆ ಶುಭಾಶಯ ಕೋರಿದ್ದ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಅವರು ತಳೆದಿದ್ದರು.

   ಶಾಸಕಿ ಸೌಮ್ಯಾ ರೆಡ್ಡಿ ಅವರ ಈ ನಿರ್ಧಾರಕ್ಕೆ ಪತ್ರಿಕೆಗಳಲ್ಲಿ, ಪೋರ್ಟಲ್ ಗಳಲ್ಲಿ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಈ ಫ್ಲೆಕ್ಸ್‌ ತೆರವು ಅಭಿಯಾನ ಕಾರ್ಯರೂಪಕ್ಕೆ ಬಂದಿದೆಯೇ ಇಲ್ಲವೆ ಎಂದು 'ಒನ್ಇಂಡಿಯಾ ಕನ್ನಡ' ರಿಯಾಲಿಟ್ ಚೆಕ್ ಮಾಡಿತು. ಆಗ ಎದುರಾದ ಸತ್ಯವೇ ಬೇರೆ.

   ನೂತನ ಶಾಸಕಿ ಸೌಮ್ಯಾ ರೆಡ್ಡಿ ನಿರ್ಧಾರಕ್ಕೆ ಬಹುಪರಾಕ್!

   ಕ್ಲೀನ್ ಜಯನಗರ ಹೆಸರಿನಲ್ಲಿ ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವು ಮಾಡುವಂತೆ ಸೂಚಿಸಿದ್ದು ಸರಿಯಷ್ಟೆ. ಆದರೆ ಫ್ಲೆಕ್ಸ್‌ ಗಳು ತೆರವಾಗಿಬಿಟ್ಟಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ ಇಲ್ಲ ಎಂದೇ ಹೇಳಬೇಕು. ಮಾಧ್ಯಮದಿಂದ ಪಬ್ಲಿಸಿಟಿ ಪಡೆದುಕೊಳ್ಳಲು ಅವರು ಹೀಗೆ ಮಾಡಿದರೆ? ಉತ್ತರ ಜಯನಗರದ ಶಾಸಕಿಯೇ ನೀಡಬೇಕು.

   ಮಯ್ಯಾಸ್ ವೃತ್ತದಲ್ಲಿ ತೆರವು ಮಾಡಿದ್ದರು

   ಮಯ್ಯಾಸ್ ವೃತ್ತದಲ್ಲಿ ತೆರವು ಮಾಡಿದ್ದರು

   ಸೌಮ್ಯಾ ರೆಡ್ಡಿ ಅವರು ಮೊನ್ನೆ ಮಯ್ಯಾಸ್ ವೃತ್ತದಲ್ಲಿ ತಮ್ಮದೇ ಫ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದರು. ಜಯನಗರದಾದ್ಯಂತ ಹಾಕಲಾಕಿರುವ ಅನವಶ್ಯಕ ಫ್ಲೆಕ್ಸ್‌ಗಳನ್ನು ತೆರವು ಮಾಡುವಂತೆ ಸೂಚಿಸಿದ್ದರು ಆದರೆ ಬಹುತೇಕ ಕಡೆ ಫ್ಲೆಕ್ಸ್‌ ಬ್ಯಾನರ್‌ಗಳು ಹಾಗೆಯೇ ಇವೆ.

   ದ.ರಾ.ಬೇಂದ್ರೆ ವೃತ್ತದಲ್ಲಿ ನಗುತ್ತಿದ್ದಾರೆ ಸೌಮ್ಯಾ ರೆಡ್ಡಿ

   ದ.ರಾ.ಬೇಂದ್ರೆ ವೃತ್ತದಲ್ಲಿ ನಗುತ್ತಿದ್ದಾರೆ ಸೌಮ್ಯಾ ರೆಡ್ಡಿ

   ಜಯನಗರದ ದ.ರಾ.ಬೇಂದ್ರೆ ವೃತ್ತದಲ್ಲಿ ಎರಡು ದೊಡ್ಡ ಫ್ಲೆಕ್ಸ್‌ ಬ್ಯಾನರ್‌ನಲ್ಲಿ ಸೌಮ್ಯಾ ರೆಡ್ಡಿ ನಗುತ್ತಿದ್ದಾರೆ. ದೊಡ್ಡ ವೃತ್ತವಾದ ಇಲ್ಲಿ ಸಿಗ್ನಲ್ ದೀಪದ ಪಕ್ಕದಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಸೌಮ್ಯಾ ರೆಡ್ಡಿಗೆ ಶುಭಾಶಯ ಕೋರಿ ಫ್ಲೆಕ್ಸ್‌ ಹಾಕಿದ್ದಾರೆ.

   ವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿ

   ಜಯನಗರ 3ನೇ ಹಂತದಲ್ಲೂ ಇವೆ

   ಜಯನಗರ 3ನೇ ಹಂತದಲ್ಲೂ ಇವೆ

   ಜಯನಗರ ಮೂರನೇ ಹಂತದ ಸಿಗ್ನಲ್ ಬಳಿ ಸೌಮ್ಯಾ ರೆಡ್ಡಿ ಅವರಿಗೆ ಶುಭಾಷಯ ಕೋರಿ ಉದ್ದನೆಯ ಫ್ಲೆಕ್ಸ್ ಹಾಕಲಾಗಿದೆ. ಇದು ಸಹ ಸಿಗ್ನಲ್ ಬಳಿಯೇ ಇದ್ದು, ಫ್ಲೆಕ್ಸ್ ಹಿಂದೆ ಇರುವ ಅಂಗಡಿಗಳಿಗೆ ಇದರಿಂದ ಕಿರಿ-ಕಿರಿ ಆಗುತ್ತಿದೆ.

   ಚೆನ್ನಮ್ಮ ಕ್ರೀಡಾಂಗಣದ ಪಕ್ಕವೂ ಇದೆ

   ಚೆನ್ನಮ್ಮ ಕ್ರೀಡಾಂಗಣದ ಪಕ್ಕವೂ ಇದೆ

   ಜಯನಗರದ ಕಿತ್ತೂರ ಚೆನ್ನಮ್ಮ ಕ್ರೀಡಾಂಗಣದ ಪಕ್ಕ ರಸ್ತೆಯ ತಿರುವಿನಲ್ಲಿ ದೊಡ್ಡ ಫ್ಲೆಕ್ಸ್‌ ಹಾಕಲಾಗಿದೆ. ಸೌಮ್ಯಾ ರೆಡ್ಡಿ ಮತ್ತು ಅಪ್ಪ ರಾಮಲಿಂಗಾ ರೆಡ್ಡಿ ಅವರು ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದ್ದಾರೆ. ರಸ್ತೆಯ ತಿರುವಿನಲ್ಲೇ ಈ ಫ್ಲೆಕ್ಸ್ ಇದ್ದು ವಾಹನ ಸವಾರರ ಗಮನ ಫ್ಲೆಕ್ಸ್ ಕಡೆ ಹೋದರೆ ಬೀಳುವುದು ಗ್ಯಾರೆಂಟಿ.

   ಬಿಎಂಟಿಸಿ ಸಂಕೀರ್ಣದ ಬಳಿಯೂ ಇದೆ ಗತಿ

   ಬಿಎಂಟಿಸಿ ಸಂಕೀರ್ಣದ ಬಳಿಯೂ ಇದೆ ಗತಿ

   ಜಯನಗರ ಬಿಎಂಟಿಸಿ ಸಂಕೀರ್ಣದ ಬಳಿ ನಾಲ್ಕೈದು ಫ್ಲೆಕ್ಸ್‌ಗಳು ಒಂದೇ ವೃತ್ತದಲ್ಲಿ ರಾರಾಜಿಸುತ್ತಿವೆ. ಇಲ್ಲಿನ ಒಂದು ಫ್ಲೆಕ್ಸ್‌ ಅನ್ನಂತೂ ಫುಟ್‌ಪಾತ್‌ ಮೇಲೆಯೇ ಹಾಕಲಾಗಿದೆ.

   ಸೌಮ್ಯಾ ರೆಡ್ಡಿ ಅವರಲ್ಲಿ ವಿಶ್ವಾಸವಿದೆ

   ಸೌಮ್ಯಾ ರೆಡ್ಡಿ ಅವರಲ್ಲಿ ವಿಶ್ವಾಸವಿದೆ

   ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ತೆರವಿಗೆ ಸೂಚಿಸಿರುವುದು ಸತ್ಯವೇ ಆದರೆ ಕಾರ್ಯ ಪರಿಣಾಮಕಾರಿಯಾಗಿ ಆಗುವಂತೆ ನೋಡಿಕೊಳ್ಳುವುದು ಕೂಡ ಅವರದ್ದೇ ಜವಾಬ್ದಾರಿ. ಉತ್ಸಾಹದ ಚಿಲುಮೆಯಂತಿರುವ ಅವರ ಮೇಲೆ ಜಯನಗರದ ಜನರಿಗೆ ವಿಶ್ವಾಸವಿದೆ. ಆದರೆ ವೀಶ್ವಾಸವನ್ನು ಉಳಿಸಿಕೊಳ್ಳುವ ಬದ್ಧತೆ ಅವರು ಪ್ರದರ್ಶಿಸಬೇಕಿದೆಯಷ್ಟೆ.

   English summary
   Jayanagar congress MLA Sowmya Reddy recently started small movement called clean Jayanagar as the first step of it she removed her own flex and banner. But movement not going well many flex of Sowmya Reddy were still on the signals and road side.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more