ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಭೂ ಮಾಫಿಯಾಗೆ ದೊಡ್ಡ ಸೋಲು: ರಾಜೀವ್ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಮಾರ್ಚ್ 6: ಬಿಲ್ಡರ್ ಗಳು- ರಾಜಕೀಯ ಸಂಬಂಧದೊಂದಿಗೆ ಹಣ ಬಲದಿಂದ ಬೆಂಗಳೂರು- ಬೆಳ್ಳಂದೂರು ಲೂಟಿ ಹೊಡೆಯುತ್ತಿದ್ದುದನ್ನು ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಇತರ ನಾಗರಿಕ ಸಂಸ್ಥೆಗಳು ತಪ್ಪಿಸಿವೆ ಹಾಗೂ ಆ ಶಕ್ತಿಗಳನ್ನು ಸೋಲಿಸಿವೆ. ಈ ಸಂಸ್ಥೆಗಳ ಪ್ರಯತ್ನಕ್ಕೆ ನನ್ನ ಪೂರ್ಣ ಬೆಂಬಲ- ಸಹಕಾರ ಇತ್ತು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬೆಂಗಳೂರು ಉಳಿಸಿ ಹೋರಾಟದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಸಿಕ್ಕ ದೊಡ್ಡ ಜಯ ಇದು. ಕಾನೂನು ಮೀರುವ ಬಿಲ್ಡರ್ ಗಳಿಗೆ ಇದು ಎಚ್ಚರಿಕೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಬಹಳ ಗೆಲುವು ದೊರೆತಿದೆ. ಆದರೆ ಈಗಿನ ಗೆಲುವು ಬಿಲ್ಡರ್ ಗಳು ಮತ್ತು ಆರು ವರ್ಷದ ಕಾಂಗ್ರೆಸ್ ಅಧಿಕಾರದ ವಿರುದ್ಧ ಎಂದಿದ್ದಾರೆ.

ಚುನಾವಣೆ ಬಂದಾಗ ಉಕ್ಕಿನ ಸೇತುವೆ ಕನವರಿಕೆ: ರಾಜೀವ್ ಚಂದ್ರಶೇಖರ್ಚುನಾವಣೆ ಬಂದಾಗ ಉಕ್ಕಿನ ಸೇತುವೆ ಕನವರಿಕೆ: ರಾಜೀವ್ ಚಂದ್ರಶೇಖರ್

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನನಗೆ ಹಲವರು ಸಂದೇಶ ಕಳುಹಿಸಿದ್ದಾರೆ. ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಇತರ ಮುಂಚೂಣಿ ಫೌಂಡೇಷನ್ ಅರ್ಜಿಯನ್ನು ಬೆಂಗಳೂರನ್ನು ರಕ್ಷಿಸುವ ಉದ್ದೇಶದಿಂದ ಬೆಂಬಲಿಸಿದ್ದೆ. ಬೆಳ್ಳಂದೂರಿನಲ್ಲಿ ಕಾನೂನು ಬಾಹಿರ ನಿರ್ಮಾಣ ಆಗಬಾರದು ಎಂಬುದು ನಮ್ಮ ಹೋರಾಟ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತನ್ನ ಆದೇಶದಲ್ಲಿ ಎಲ್ಲ ಕೆರೆಗಳು ಒಳಗೊಳ್ಳುವಂತೆ ಮಾಡಿದೆ ಎಂದಿದ್ದಾರೆ.

Real estate Mafia backed by the Congress defeated: Rajeev Chandrasekhar

ಬೆಳ್ಳಂದೂರು ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇತರೆ ಕೆರೆಗಳ ಮೂಲ ಬಫರ್ ವಲಯಗಳನ್ನು ಹಾಗೇ ಉಳಿಸಿಕೊಳ್ಳಲು ಸೂಚಿಸಿದೆ ಎಂದು ಹೇಳಿದ್ದಾರೆ.

-ಬೆಳ್ಳಂದೂರು ಕೆರೆ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು

* ಕಾನೂನು ಮೀರಿ ಕಟ್ಟಡ ನಿರ್ಮಿಸಿದ (ಮಂತ್ರಿ ಟೆಕ್ ಝೋನ್ ಹಾಗೂ ಕೋರ್ ಮೈಂಡ್) ಬಿಲ್ಡರ್ಸ್ ಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೂರು ಕೋಟಿಗೂ ಹೆಚ್ಚು ದಂಡ ವಿಧಿಸಿರುವುದನ್ನು ಹಾಗೂ ಬಫರ್ ಝೋನ್ ಜಾರಿ ಆಗುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

* ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕಾನೂನುಬಾಹಿರ ಚಟುವಟಿಕೆ ವಿರುದ್ಧದ ಹೋರಾಟಕ್ಕೆ ನೆರವು ನೀಡಿಲ್ಲ.

* ಯಾವುದೇ ಬಿಲ್ಡರ್ ಬಫರ್ ಝೋನ್ ಉಲ್ಲಂಘಿಸಿದರೆ ಶಿಕ್ಷೆ ವಿಧಿಸಬಹುದು

* ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸಮಿತಿ ರಚಿಸಲಿದೆ. ಕರ್ನಾಟಕ ಸರಕಾರದ ಹಣದಿಂದ ಎಸ್ಕ್ರಾ ಮೂಲಕ ಇದು ರಚನೆ ಆಗಲಿದೆ.

* ಇದು ಕಾನೂನುಬಾಹಿರ ಎಂಬುದನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಎತ್ತಿಹಿಡಿದಿದೆ. ಈ ಮೂಲಕ ಕಾನೂನುಬಾಹಿರ ನಿರ್ಮಾಣಕ್ಕೆ ಅವಕಾಶ ನೀಡಿದ ತಪ್ಪಿತಸ್ಥರನ್ನು (ಸರಕಾರದಲ್ಲಿ ಇರುವವರನ್ನು) ಹುಡುಕಲು ನೆರವಾಗಲಿದೆ.

English summary
Namma Bengaluru Foundation and other Citizen organisations with my full support have defeated the builder-politico nexus that was looting Bengaluru and Bellanduru despite money power they used - law and people prevailed in Supreme court. The lawbreaking Builders must beware!, said Rajyasabha member Rajeev Chandrasekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X