ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಬಂಧಿಸಿದ ಸಿಸಿಬಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿ ಪ್ರಭಾಕರ್ ರೆಡ್ಡಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಲಾಗಿದ್ದು ಅವರನ್ನು ಬಂಧಿಸಲಾಗಿದೆ.

ಡಿಕೆಶಿ ವಶಕ್ಕೆ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಡಿಕೆಶಿ ವಶಕ್ಕೆ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ

ಪ್ರಭಾಕರ್ ಅವರ ರಾಜರಾಜೇಶ್ವರಿ ನಗರದ ಸಾಂತ್ವನ ನಿಲಯ, ಮೈಲಸಂದ್ರದ ನಿವಾಸ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ ಸೇರಿ ಒಟ್ಟು ಐದು ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ಬೆಂಗಳೂರು ದಕ್ಷಿಣ: ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಬೆಂಗಳೂರು ದಕ್ಷಿಣ: ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ

ಪ್ರಭಾಕರ್ ಅವರ ಮೇಲೆ ಭೂಕಬಳಿಕೆ ಸೇರಿ ಇನ್ನೂ ಹಲವು ಆರೋಪಗಳು ಇದ್ದವು. ಪ್ರಭಾರ್ ಅವರ ಮೇಲೆ 40 ಕ್ಕೂ ಹೆಚ್ಚು ದೂರುಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು ಎನ್ನಲಾಗಿದೆ.

Real estate businessman Prabhakar Reddy arrested by CCB police

ಪ್ರಭಾಕರ್ ರೆಡ್ಡಿ ಅವರ ಪ್ರಕರಣಗಳು ಸಿಸಿಬಿಗೆ ವರ್ಗಾವಣೆ ಆಗಿತ್ತು, ಹಾಗಾಗಿ ಇಂದು ಸಂಜೆ ವೇಳೆಗೆ ಡಿಸಿಪಿ ಗಿರೀಶ್ ಅವರ ನೇತೃತ್ವದ ಸಿಸಿಬಿ ಪೊಲೀಸರ ತಂಡವು ಪ್ರಭಾಕರ್ ರೆಡ್ಡಿ ಅವರ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಭಾಕರ್ ನಿವಾಸಕ್ಕೆ ದಾಳಿ ಮಾಡಿದ ವೇಳೆ ಅವರ ಕುಟುಂಬವು ಸಿಸಿಬಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದೆ ಎನ್ನಲಾಗಿದೆ.

English summary
Bengaluru's noted real estate businessman Prabhakar Reddy arrested by CCB police today. CCB police has been raided Prabhakar Reddy house and other property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X