ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯಿಂದ ಕಡಿಮೆ ಬೆಲೆಗೆ ಆಸ್ತಿ ಹರಾಜು

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ಕಡಿಮೆ ಹಣಕ್ಕೆ ಗುತ್ತಿಗೆ ಅಥವಾ ಲೀಸ್‌ಗೆ ನೀಡಲಾಗಿರುವ ಆಸ್ತಿಯನ್ನು ಮರುಹರಾಜು ಹಾಕಲು ಬಿಬಿಎಂಪಿ ನಿರ್ಧರಿಸಿದೆ.

ಪಾಲಿಕೆಯಿಂದ ವಿವಿಧ ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಉದ್ದೇಶಗಳಿಗೆ ನೀಡಲಾಗಿರುವ ಆಸ್ತಿಯನ್ನು ಮರುಹರಾಜು ಹಾಕುತ್ತಿದೆ.

 ಬೆಂಗಳೂರಲ್ಲಿ ಏಕಾಏಕಿ ಕಂದಾಯ ಸೈಟ್ ನೋಂದಣಿ ಸ್ಥಗಿತ ಬೆಂಗಳೂರಲ್ಲಿ ಏಕಾಏಕಿ ಕಂದಾಯ ಸೈಟ್ ನೋಂದಣಿ ಸ್ಥಗಿತ

ಬಿಬಿಎಂಪಿಯು ಈವರೆಗೆ 348 ಆಸ್ತಿಗಳನ್ನು ಗುತ್ತಿಗೆಗೆ ನೀಡಿದೆ. ಅದರಲ್ಲಿ 195 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ಗುತ್ತಿಗೆ ಅವಧಿಪೂರೈಸಿರುವ ಕಟ್ಟಡಗಳ ಮರುಹರಾಜು ಹಾಕಲಾಗುತ್ತಿದೆ.

 ಗುತ್ತಿಗೆ ನಿಯಮ ಪಾಲಿಸದ ಸಂಸ್ಥೆಗಳು

ಗುತ್ತಿಗೆ ನಿಯಮ ಪಾಲಿಸದ ಸಂಸ್ಥೆಗಳು

ಪಾಲಿಕೆ ಆಸ್ತಿ ಗುತ್ತಿಗೆ ಪಡೆದ ಬಹುತೇಕ ಸಂಘ-ಸಂಸ್ಥೆಗಳು ಗುತ್ತಿಗೆಯ ಮೂಲ ನಿಯಮಗಳನ್ನೇ ಉಲ್ಲಂಘನೆ ಮಾಡಿರುವ ಆರೋಪಗಳಿವೆ. ಅಧಿಕಾರಿಗಳಿಗೆ ಪರಿಶೀಲನೆ ಮಾಡಿ ಎಂದು ಹೇಳಲಾಗಿದೆ. ಗುತ್ತಿಗೆ ಅವಧಿ ಮುಗಿದ ಆಸ್ತಿಗಳಿಗೆ ಹಾಗೂ ಬಾಕಿ ಉಳಿಸಿಕೊಂಡ ಸಂಘ-ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

 ಬಿಬಿಎಂಪಿ ಒಟ್ಟು 348 ಅಸ್ತಿಗಳನ್ನು ಗುತ್ತಿಗೆ ನೀಡಿದೆ

ಬಿಬಿಎಂಪಿ ಒಟ್ಟು 348 ಅಸ್ತಿಗಳನ್ನು ಗುತ್ತಿಗೆ ನೀಡಿದೆ

ಬಿಬಿಎಂಪಿಯು ಈವರೆಗೆ 348 ಆಸ್ತಿಗಳನ್ನು ಗುತ್ತಿಗೆಗೆ ನೀಡಿದೆ. ಅದರಲ್ಲಿ 195 ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ಗುತ್ತಿಗೆ ಅವಧಿಪೂರೈಸಿರುವ ಕಟ್ಟಡಗಳ ಮರುಹರಾಜು ಮಾಡಿ, ಮಾರುಕಟ್ಟೆ ದರದಂತೆ ಮರುಗುತ್ತಿಗೆ ನೀಡಲು ಆಲೋಚಿಸಲಾಗಿದೆ.

 ಒಟ್ಟು 9.28 ಕೋಟಿ ರೂ ಬಾಕಿ ಇದೆ

ಒಟ್ಟು 9.28 ಕೋಟಿ ರೂ ಬಾಕಿ ಇದೆ

ಬಿಬಿಎಂಪಿಯಿಂದ ನೀಡಲಾದ ಆಸ್ತಿಗಳಿಗೆ ಪ್ರತಿ ಚದರ ಅಡಿಗೆ 1 ರೂ.ನಿಂದ 10 ರೂ.ಗಳಂತೆ ಬಾಡಿಗೆ ನಿಗದಿಪಡಿಸಲಾಗಿದೆ. ಇಷ್ಟು ಕಡಿಮೆ ಬಾಡಿಗೆಯಿದ್ದರೂ ಆಲಿಕೆಗೆ ವಾರ್ಷಿಕ ಅಂದಾಜು 1.32 ಕೋಟಿ ರೂ. ಬಾಡಿಗೆ ಆದಾಯ ಬರುತ್ತದೆ. ಹಲವು ಸಂಘ-ಸಂಸ್ಥೆಗಳು ಸರಿಯಾಗಿ ಬಾಡಿಗೆ ಪಾವತಿಸದಿರುವುದು ಇದಕ್ಕೆ ಕಾರಣವಾಗಿದೆ. ಈಗ 9.28 ಕೋಟಿ ರೂ. ವಸೂಲಿ ಮಾಡಬೇಕಿದೆ.

 ವಲಯವಾರು ಗುತ್ತಿಗೆ ಆಸ್ತಿ ವಿವರ ಇಲ್ಲಿದೆ

ವಲಯವಾರು ಗುತ್ತಿಗೆ ಆಸ್ತಿ ವಿವರ ಇಲ್ಲಿದೆ

-ಪೂರ್ವ ವಲಯ-121 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದ್ದು, 44 ಆಸ್ತಿ ಗುತ್ತಿಗೆ ಒಪ್ಪಂದ ಅವಧಿ ಪೂರ್ಣಗೊಂಡಿದೆ.5.96 ಕೋಟಿ ರೂ. ಬಾಕಿದೆ.

-ಪಶ್ಚಿಮ ವಲಯದ 123 ಆಸ್ತಿಗಳಲ್ಲಿ 92 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು 56.10 ಲಕ್ಷ ರೂ. ಬಾಕಿ ಇದೆ. ದಕ್ಷಿಣ ವಲಯದ 101 ಆಸ್ತಿಗಳಲ್ಲಿ 56 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿದ್ದು 2.54 ಕೋಟಿ ರೂ. ಬಾಕಿ ಇದೆ. ಮಹದೇವಪುರ ವಲಯದಲ್ಲಿ ಒಂದು ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಪೂರ್ಣಗೊಂಡಿದ್ದು, 25 ಸಾವಿರ ರೂ. ಬಾಕಿ ಉಳಿದಿದೆ.

English summary
BBMP has decided to Re aution For its leased property for less money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X