ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸ್ಕೆಟ್ ದಂಧೆ ಬೆನ್ನಟ್ಟಿದ್ದ ಬೆಳಗೆರೆ; 17 ವರ್ಷಗಳ ಹಿಂದಿನ ರೋಚಕ ಪ್ರಕರಣ

|
Google Oneindia Kannada News

ಬೆಂಗಳೂರು. ನ. 13: ಅಪರಾಧ ವರದಿಗಾರಿಕೆಗೆ ಅವತ್ತಿಗೆ ಇದ್ದ ಚೌಕಟ್ಟುಗಳನ್ನು ಮೀರಿದ್ದರು ಪತ್ರಕರ್ತ ರವಿ ಬೆಳೆಗೆರೆ. ಅವರ ಸಾಹಸಮಯ ವರದಿಗಾರಿಕೆಗೆ ಹೆಸರಾಗಿರುವುದು ರಾಜ್ಯದಲ್ಲಿ ಇವತ್ತಿಗೂ ಜೀವಂತವಾಗಿರುವ ಹರಪ್ಪನಹಳ್ಳಿಯ ಚಿನ್ನದ ಬಿಸ್ಕೆಟ್ ದಂಧೆ.

ಮುಗ್ಧರನ್ನು ಹಳದಿ ಲೋಹದ ಆಸೆಗೆ ಬೀಳಿಸಿ ವಂಚಿಸುತ್ತಿದ್ದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಗೋಲ್ಡ್‌ ಗ್ಯಾಂಗ್‌ನ್ನು ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಬಯಲಿಗೆ ಎಳೆಯಲು ಬೆಳಗೆರೆ ಮುಂದಾಗಿದ್ದು 2003ರಲ್ಲಿ. ಸುಮಾರು 17 ವರ್ಷಗಳ ಹಿಂದೆ ರವಿ ಬೆಳೆಗೆರೆ ಸಮರ ಸಾರಲು ಹೋಗಿ ದರೋಡೆಗೆ ಒಳಗಾಗಿದ್ದರು. ಜೀವ ರಕ್ಷಣೆಗೆ ಗುಂಡು ಹಾರಿಸಿದ್ದರು! ಕೊನೆಗೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು. ಅವತ್ತು ಬೆಳಗೆರೆ ವರದಿ ಮಾಡಲು ಹೋಗಿ, ಪ್ರಕರಣ ಮೈಮೇಲೆ ಎಳೆದುಕೊಂಡ ಘಟನೆ ಹಾಗೂ ನಂತರ ನಡೆದ ಕಾನೂನು ಸಮರದ ಪೂರ್ಣ ಡಿಟೇಲ್‌ ಇಲ್ಲಿದೆ.

ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?

ಹೊಲದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದೆ. ಈ ವಿಷಯ ಪೊಲೀಸರಿಗೆ ಗೊತ್ತಾದರೆ ವಶಪಡಿಸಿಕೊಳ್ಳುತ್ತಾರೆ. ಯಾರಿಗೂ ಗೊತ್ತಾಗದಂತೆ ಮಾರಾಟ ಮಾಡಲು ಚಿನ್ನದ ಬಿಸ್ಕೆಟ್ ಸಿಕ್ಕಿದೆ ಎಂದು ಹೇಳುವ ಕೆಲವರು ಮಾರಾಟಕ್ಕೆ ಪ್ರಯತ್ನ ಮಾಡುತ್ತಾರೆ. ಯಾರಾದರೂ ಖರೀದಿ ಮಾಡುವುದಾದರೆ ಕಡಿಮೆ ಬೆಲೆಗೆ ಚಿನ್ನದ ಬಿಸ್ಕೆಟ್ ಕೊಡ್ತಾರೆ ಎಂಬ ಸಂದೇಶವನ್ನು ಹರಿಯಬಿಡುತ್ತಾರೆ. ಯಾರಾದರೂ ಚಿನ್ನದ ಆಸೆಗೆ ಬಿದ್ದು ಹಣ ಸಮೇತ ಹೋದರೆ ವಾಪಸು ಬರುವುದು ಅನುಮಾನ. ಹಣ ಮರಳಿ ಮನೆಗೆ ತರಲು ಸಾಧ್ಯವೇ ಇಲ್ಲ. ಅಂತದ್ದೊಂದು ಚಿನ್ನದ ಹೆಸರಿನಲ್ಲಿ ನಡೆಸುವ ವಂಚನೆ ಜಾಲ ಹರಪನಹಳ್ಳಿ, ಚನ್ನಗಿರಿ, ದಾವಣಗೆರೆ ಸುತ್ತಮುತ್ತ ಅವತ್ತಿಗೆ ಜೋರಾಗಿತ್ತು. ಇದರ ಮಾಹಿತಿ ಪತ್ರಕರ್ತ ಬೆಳಗೆರೆ ಸಿಕ್ಕಿತ್ತು.

17 ವರ್ಷಗಳ ಹಿಂದೆ, ಬೆಳೆಗೆರೆ ವಂಚಕರ ಜಾಡು ಹಿಡಿದು

17 ವರ್ಷಗಳ ಹಿಂದೆ, ಬೆಳೆಗೆರೆ ವಂಚಕರ ಜಾಡು ಹಿಡಿದು

ಅದು 2003, ಮೇ. 29. ಬೆಳಗ್ಗೆ 9 ಗಂಟೆ. ಚಿನ್ನದ ಬಿಸ್ಕೆಟ್ ಖರೀದಿ ಮಾಡುವ ಸೋಗಿನಲ್ಲಿ ರವಿ ಬೆಳೆಗೆರೆ ಮತ್ತು ತಂಡ ಹರಪನಹಳ್ಳಿಗೆ ಭೇಟಿ ನೀಡಿತ್ತು. ರವಿ ಬೆಳಗೆರೆ ಜತೆಗಿದ್ದ ಇಬ್ಬರು ಟೀ ಕುಡಿಯಲು ಹೋಗಿದ್ದರು. ರವಿ ಬೆಳಗೆರೆ ಸ್ನೇಹಿತರೊಬ್ಬರೊಂದಿಗೆ ಹರಪನಹಳ್ಳಿಯ ಖಾಸಗಿ ಕಾಲೇಜು ಬಳಿ ಕಾಯುತ್ತಿದ್ದರು. ಚಿನ್ನದ ಬಿಸ್ಕೆಟ್ ಡೀಲಿಂಗ್ ಹೆಸರಿನಲ್ಲಿ ಅಂಗಡಿ ಹನುಮಂತು ಮತ್ತು ಕೆ. ಲಕ್ಷ್ಮಣ್‌ ಎಂಬ ಇಬ್ಬರು ರವಿ ಬೆಳಗೆರೆಯನ್ನು ಭೇಟಿ ಮಾಡಿದ್ದರು. ಅಸಲಿ ಚಿನ್ನದ ಬಿಸ್ಕೆಟ್ ತೋರಿಸಿದ್ದರು. ಇದು ನೀಲಕಂಟಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಸಿಕ್ಕಿವೆ ಎಂದು ನಂಬಿಸಿದ್ದರು. ರವಿ ಬೆಳಗೆರೆ ನಂಬುವಂತೆ ವೆಂಕಟಪ್ಪ ಮತ್ತು ಮುದ್ಧವ್ವ ಎಂಬ ಮಹಿಳೆ ಚಿನ್ನದ ಬಿಸ್ಕೆಟ್ ಮಾದರಿಗಳನ್ನು ತೋರಿಸಿದ್ದರು. ಕೇವಲ ಒಂದು ಬಿಸ್ಕೆಟ್ ಖರೀದಿ ಮಾಡುತ್ತೇವೆ. ಅದರ ಅಸಲಿತನ ನೋಡಿ ಉಳಿದಿದ್ದನ್ನು ಖರೀದಿ ಮಾಡುವುದಾಗಿ ರವಿ ಬೆಳೆಗೆರೆ ಭರವಸೆ ನೀಡಿದ್ದರು.

ಒಂದೇ ಸಲಕ್ಕೆ 3 ಲಕ್ಷ ಪಾಯಿಯಷ್ಟು Apple ಪ್ರಾಡಕ್ಟ್ ಖರೀದಿಸಿದ್ದ RBಒಂದೇ ಸಲಕ್ಕೆ 3 ಲಕ್ಷ ಪಾಯಿಯಷ್ಟು Apple ಪ್ರಾಡಕ್ಟ್ ಖರೀದಿಸಿದ್ದ RB

ಏಕಾಏಕಿ ನಡೆದಿತ್ತು ದಾಳಿ, ಪ್ಯಾಂಟಿನೊಳಗಿಂದಲೇ ಗುಂಡು ಹಾರಿತ್ತು

ಏಕಾಏಕಿ ನಡೆದಿತ್ತು ದಾಳಿ, ಪ್ಯಾಂಟಿನೊಳಗಿಂದಲೇ ಗುಂಡು ಹಾರಿತ್ತು

ಅಷ್ಟರಲ್ಲಿ ಕೊರಚರ ನಿಂಗಪ್ಪ, ಚಿಕ್ಕ, ಕೊರಚರ ಕೃಷ್ಣ್ಪ, ಕೆಂಚ ಎಂಟ್ರಿ ಕೊಟ್ಟಿದ್ದರು. ಗೋಲ್ಡ್‌ ಬಿಸ್ಕೆಟ್ ಖರೀದಿಗೆ ಎಂದು ಹೋಗಿದ್ದ ರವಿ ಬೆಳಗೆರೆ ಮೇಲೆ ಏಕಾಏಕಿ ದಾಳಿ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ ಕದಿದ್ದರು. ರವಿ ಬೆಳಗೆರೆ ಬಳಿಯಿದ್ದ ಮೊಬೈಲ್‌ ಕಿತ್ತುಕೊಂಡಿದ್ದರು. ಬೆಳಗೆರೆ ಜತೆಗಿದ್ದ ಸ್ನೇಹಿತನ ಬಳಿ 30 ಸಾವಿರ ನಗದು ಹಣವನ್ನು ಕಸಿದುಕೊಂಡಿದ್ದರಯ. ಗೋಲ್ಡ್‌ ಬಿಸ್ಕೆಟ್ ಗ್ಯಾಂಗ್ ಹಲ್ಲೆ ಮಾಡಲು ಮುಂದಾದ ವೇಳೆ ರವಿ ಬೆಳಗೆರೆ ತನ್ನ ಬಳಿಯಿದ್ದ ರಿವಲ್ವಾರ್‌ನಿಂದ ಗುಂಡು ಹಾರಿಸಿದ್ದರು. ಕೊರಚರ ನಿಂಗಪ್ಪನ ಕಾಲಿಗೆ ಅದು ತಾಗಿತ್ತು. ಉಳಿದವರು ಅಲ್ಲಿಂದ ಪರಾರಿಯಾಗಿದ್ದರು.

ಆರೋಪಿಗಳು ನಿರ್ದೋಷಿಗಳು; ನಡೆದಿತ್ತು ಸುದೀರ್ಘ ಕಾನೂನು ಹೋರಾಟ

ಆರೋಪಿಗಳು ನಿರ್ದೋಷಿಗಳು; ನಡೆದಿತ್ತು ಸುದೀರ್ಘ ಕಾನೂನು ಹೋರಾಟ

ರವಿ ಬೆಳಗೆರೆ ತನ್ನ ಆಪ್ತರೊಂದಿಗೆ ಹರಪನಹಳ್ಳಿ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದರು. ಅಂದೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದಾದ ವಾರದ ಬಳಿಕ ಮೊದಲ ಆರೋಪಿ ಕೊರಚರ ನಿಂಗಪ್ಪನನ್ನು ಬಂಧಿಸಿ ಬೆಳಗೆರೆ ಬಳಿ ಕಸಿದಿದ್ದ ಚಿನ್ನದ ಸರ, ವಾಚ್ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣ ತನಿಖೆ ನಡೆಸಿ ಹರಪನಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ ಗೋಲ್ಡ್‌ ಬಿಸ್ಕೆಟ್ ದಂಧೆಕೋರರಿಗೆ ಶಿಕ್ಷೆ ವಿಧಿಸಿ 2006 ರಲ್ಲಿ ತೀರ್ಪು ನೀಡಿತ್ತು. ನ್ಯಾಯಾಲಯದ ಶಿಕ್ಷೆ ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳು ನಿರ್ದೋಷಿಗಳು ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು.

ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?

ಇವತ್ತಿಗೂ ಜಾಲ ಕ್ರೀಯಾಶೀಲ, ಗೋಲ್ಡ್ ಎಂದು ಪೆಗ್ಗು ಬೀಳಬೇಡಿ

ಇವತ್ತಿಗೂ ಜಾಲ ಕ್ರೀಯಾಶೀಲ, ಗೋಲ್ಡ್ ಎಂದು ಪೆಗ್ಗು ಬೀಳಬೇಡಿ

17 ವರ್ಷಗಳ ಹಿಂದೆ ರವಿ ಬೆಳಗೆರೆ ಗೋಲ್ಡ್‌ ಬಿಸ್ಕೆಟ್ ವಂಚಕರನ್ನು ಬೆನ್ನಟ್ಟಿ ಹೋಗಿದ್ದರು. ದೊಡ್ಡ ಸುದ್ದಿಯನ್ನೂ ಮಾಡಿದ್ದರು. ಅದಾಗಿ ಸ್ವಲ್ಪ ದಿನ ತಣ್ಣಗಿದ್ದ ದಂಧೆ ಮತ್ತೆ ಕಾರ್ಯಾರಂಭ ಮಾಡಿತ್ತು. ವಿಶೇಷ ಅಂದರೆ ಇವತ್ತಿಗೂ ಈ ಭಾಗದಿಂದ ಚಿಕ್ಕ ಕಡಿಮೆ ಬೆಲೆ ಸಿಗಲಿದೆ ಎಂಬ ಸಂದೇಶ, ದೂರವಾಣಿ ಕರೆಗಳು ಹಣ ಮಾಡುವ ಆತುರಕ್ಕೆ ಬಿದ್ದವರಿಗೆ ಲಭ್ಯವಾಗುತ್ತಲೇ ಇವೆ. ಹೊಲದಲ್ಲಿ ಕೆಲಸ ಮಾಡುವಾಗ ಚಿನ್ನದ ಬಿಸ್ಕೆಟ್ ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಆಗುತ್ತಿಲ್ಲ. ಯಾರಾದರೂ ತೆಗೆದುಕೊಳ್ಳುವರು ಇದ್ದರೆ ಕಡಿಮೆ ಬೆಲೆಗೆ ಕೊಡುತ್ತಾರಂತೆ ಎಂಬ ಸಂದೇಶವನ್ನು ಏಜೆಂಟರ ಮೂಲಕ ಜನ ಸಾಮಾನ್ಯರಿಗೆ ತಲುಪುತ್ತಿದೆ. ಚಿನ್ನದ ಬಿಸ್ಕೆಟ್ ಆಸೆಗೆ ಬಿದ್ದು ಹೋದರೆ, ಹಣ ಕಳೆದುಕೊಳ್ಳುವ ಜತೆಗೆ ಜೀವ ಕೂಡ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಬೆಳೆಗೆರೆ ಇಲ್ಲದ ಸಮಯದಲ್ಲಿ, ಜೀವಂತವಾಗಿರಯವ ವಂಚನೆಯ ಕುರಿತು ಜಾಗೃತಿಯ ಅಗತ್ಯವಿದೆ.

ಖಾಸ್ ಬಾತ್: ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನಖಾಸ್ ಬಾತ್: ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನ

Recommended Video

ರವಿ ಬೆಳಗೆರೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ R ಅಶೋಕ್ | Oneindia Kannada

English summary
Ravi Belagere's 2003 sensational crime reporting case about gold biscuit scam at Harapanahalli recalled methodically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X