ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ ಎಂದ ರೇವಣ್ಣ

|
Google Oneindia Kannada News

Recommended Video

HM Revanna Speaks About Collapse of the Coalition Government | Oneindia Kannada

ಬೆಂಗಳೂರು, ಅಕ್ಟೋಬರ್ 25: ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣರಲ್ಲ ಎಂದು ಎಂಎಲ್‌ಸಿ ಎಚ್‌ಎಂ ರೇವಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಯಾರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂದು ಗೊತ್ತು ಕೇವಲ ಕಾಂಗ್ರೆಸ್‌ನ್ನು ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

'ಕೇಡು ಬಯಸಿದ್ದು ಯಾರು?' ಸಿದ್ದರಾಮಯ್ಯ-ಕುಮಾರಸ್ವಾಮಿ ವಾರು ಜೋರು!'ಕೇಡು ಬಯಸಿದ್ದು ಯಾರು?' ಸಿದ್ದರಾಮಯ್ಯ-ಕುಮಾರಸ್ವಾಮಿ ವಾರು ಜೋರು!

ಕುಮಾರಸ್ವಾಮಿ ಸರ್ಕಾರ ಪತನವಾಗಲು ಕಾಂಗ್ರೆಸ್ ಕಾರಣವಲ್ಲ. ಹಾಗಿರುವಾಗ ಸಿದ್ದರಾಮಯ್ಯ ಅವರನ್ನು ದೂರಿ ಪ್ರಯೋಜನವೇನಿದೆ? ಅವರು ಚುನಾಯಿತ ಪ್ರತಿನಿಧಿಗಳನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ. ನಾನೇ ಏನಾದರೂ ಕೇಳಿದರೂ ಕೆಲಸ ಮಾಡಿಕೊಡುತ್ತಿರಲಿಲ್ಲ.

ಕುಮಾರಸ್ವಾಮಿ ಕೆಲಸ ಮಾಡಿಕೊಡುತ್ತಿರಲಿಲ್ಲ

ಕುಮಾರಸ್ವಾಮಿ ಕೆಲಸ ಮಾಡಿಕೊಡುತ್ತಿರಲಿಲ್ಲ

ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಕೆಲಸ ಮಾಡಿಕೊಡುತ್ತಿರಲಿಲ್ಲ, ಇದನ್ನು ಜನತಾದಳದ ಪ್ರಮುಖ ನಾಯಕರೇ ಹೇಳುತ್ತಿದ್ದಾರೆ. ನಿಮ್ಮ ಪಕ್ಷದ ಶಾಸಕರನ್ನೇ ನಿಮ್ಮಿಂದ ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಇನ್ನೂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ? ಎಂದು ಅವರು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಕುಮಾರಸ್ವಾಮಿ ಟ್ವಿಟ್ಟರ್ ವಾರ್

ಸಿದ್ದರಾಮಯ್ಯ ಕುಮಾರಸ್ವಾಮಿ ಟ್ವಿಟ್ಟರ್ ವಾರ್

ಪರಸ್ಪರ ಟ್ವಿಟ್ಟರ್ ವಾರ್ನಲ್ಲಿ ತೊಡಗಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಕಾರಣ ಯಾರು? ಎಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಇಬ್ಬರೂ ಕಾರಣ

ಸಮ್ಮಿಶ್ರ ಸರ್ಕಾರದ ಪತನಕ್ಕೆ ಇಬ್ಬರೂ ಕಾರಣ

ಇನ್ನೂ ಸಿದ್ದರಾಮಯ್ಯ, ಕುಮಾರಸ್ವಾಮಿ ಟ್ವಿಟ್ಟರ್ ವಾರ್ ಕುರಿತು ಪ್ರತಿಕ್ರಿಯೆ ನೀಡಿರುವ ಎಚ್‌. ವಿಶ್ವನಾಥ್, ಸಮ್ಮಿಶ್ರ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ. ಸಿದ್ದರಾಮಯ್ಯ ಹೆಚ್ಡಿಕೆ ಇಬ್ಬರೂ ಸಮಬಲರು.

ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಿಲ್ಲ

ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಿಲ್ಲ

ಸರ್ಕಾರ ರಚನೆ ಮಾಡುವಾಗ, ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಿಲ್ಲ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲಿಲ್ಲ. ಯಾರನ್ನೂ ಹೇಳದೆ ಕೇಳದೆ ಸರ್ಕಾರ ಮಾಡಿದ್ದರು. ಪಕ್ಷ ರಾಜಕಾರಣ ಇಲ್ಲದೆ ಇರುವುದರಿಂದ ಇದು ಪಕ್ಷಾಂತರಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

English summary
MLC HM Revanna said Siddaramaiah was not responsible for the collapse of the coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X