ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಂಬಾರ್‌ನಲ್ಲಿ ಇಲಿ:ಕಾರ್ಪೊರೇಟರ್‌ ಪತಿ ವಿರುದ್ಧ ದೂರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 17: ಕಳೆದ ಶನಿವಾರ ಗಾಯತ್ರಿನಗರದ ಇಂದಿರಾ ಕ್ಯಾಂಟೀನ್‌ನ ಸಾಂಬಾರಿನಲ್ಲಿ ಇಲಿ ಪತ್ತೆಯಾಗಿ ಆತಂಕ ಸೃಷ್ಟಿಮಾಡಿತ್ತು, ಆ ಘಟನೆಗೆ ಟ್ವಿಸ್ಟ್ ಎಂಬಂತೆ ಕಾರ್ಪೊರೇಟರ್‌ ಪತಿಯೇ ಈ ಕೆಲಸ ಮಾಡಿದ್ದಾರೆ ಎಂದು ಚೆಫ್‌ಟಾಕ್‌ ಸಂಸ್ಥೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ.

ಕಾರ್ಪೊರೇಟರ್‌ ಚಂದ್ರಕಲಾ ಅವರ ಪತಿ ಗಿರೀಶ್‌ ಲಕ್ಕಣ್ಣ ವಿರುದ್ಧ ದೂರು ದಾಖಲಾಗಿದೆ, ಇಂದಿರಾ ಕ್ಯಾಂಟೀನ್‌ ಆಹಾರ ಪೂರೈಸುವ ಗುತ್ತಿಗೆ ಪಡೆದಿರುವ ಚೆಫ್‌ಟಾಕ್‌ ಸಂಸ್ಥೆಯು ಪೌರಕಾರ್ಮಿಕರಿಗೆ ಆ.1ರಂದು ಅನ್ನ, ಸಾಂಬಾರ್‌ ಸರಬರಾಜು ಮಾಡಿತ್ತು. ಸಾಂಬಾರಿನಲ್ಲಿ ಸತ್ತ ಇಲಿ ಕಂಡು ಬಂತು, ತಕ್ಷಣ ಸ್ಥಳಕ್ಕೆ ಬಂದ ಸಂಸ್ಥೆಯ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಗಾಯತ್ರಿನಗರ ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಸಿಕ್ಕಿತು ಇಲಿ!ಗಾಯತ್ರಿನಗರ ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಸಿಕ್ಕಿತು ಇಲಿ!

ಅಡುಗೆ ಮನೆಯಲ್ಲಿದ್ದ ಆಂಬಾರ್‌ ಮತ್ತು ಕಾರ್ಮಿಕರಿಗೆ ಪೂರೈಸಿದ ಸಾಂಬಾರ್‌ ನನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಅಡುಗೆ ಮನೆಯ ಸಾಂಬಾರ್‌ನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಕಾರ್ಮಿಕರಿಗೆ ಊಟ ಕಳುಹಿಸಿದ ನಂತರ ಸತ್ತ ಇಲಿಯನ್ನು ಹಾಕಿರುವುದು ಕಂಡುಬಂದಿದೆ. ಹೀಗಾಗಿ ಸಂಸ್ಥೆಯ ಸಿಬ್ಬಂದಿ ಬಾಲ ಮುರುಗನ್‌ ಎಂಬುವರು ಪೊಲೀಸರಿಗೆ ಗಿರೀಶ್‌ ಅವರ ವಿರುದ್ಧ ದೂರು ನೀಡಿದ್ದಾರೆ.

Rat in sambar: Indira Canteen manager files plaint against corporator’s spouse

ಪೌರ ಕಾರ್ಮಿಕರ ಊಟವಾದ ಬಳಿಕ ಪಾತ್ರೆಯಲ್ಲಿ ಸತ್ತ ಇಲಿಯನ್ನು ಹಾಕಲಾಗಿತ್ತು, ಕಾರ್ಪೊರೇಟರ್‌ ಪತಿ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಆದರೆ ಅದಕ್ಕೆ ಒಪ್ಪದ ಚೆಫ್‌ಟಾಕ್‌ ಸಂಸ್ಥೆಯ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ ಎಂದು ಮುರುಗನ್‌ ದೂರಿದ್ದಾರೆ.

ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್ಇಂದಿರಾ ಕ್ಯಾಂಟೀನ್ ಶುರುವಾಗಿ 1 ವರ್ಷ, ಮಾರಾಟದ ಲೆಕ್ಕ 6 ಕೋಟಿ ಪ್ಲೇಟ್

ಅದೇನೆ ಅವರ ವಯಕ್ತಿಕ ದ್ವೇಷವಿದ್ದರೂ, ಪೌರಕಾರ್ಮಿಕರ ಜೀವದ ಜತೆ ಯಾಕೆ ಇವರು ಚೆಲ್ಲಾಟ ಆಡುತ್ತಿದ್ದಾರೆ, ಇಲಿ ಹಾಕಿದವರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು, ಹಾಗೆಯೇ ಅಡುಗೆ ಮಾಡುವಾಗ ಅಥವಾ ನಂತರ ಎಲ್ಲಾ ಪಾತ್ರೆಗಳನ್ನು ಕಡ್ಡಾಯವಾಗಿ ಮುಚ್ಚಿರಬೇಕು ಇದು ನಮ್ಮ ಕಳಕಳಿ.

English summary
The manager of the Indira Canteen in Gayathri Nagar (ward 76) has filed a complaint with Subramanyanagar police, accusing a corporator’s husband of placing a dead rat in the vessel from which sambar was served by the canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X