ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಯತ್ರಿನಗರ ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಸಿಕ್ಕಿತು ಇಲಿ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಗಾಯತ್ರಿನಗರದ ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಇಲಿ ಪತ್ತೆಯಾದ ಘಟನೆ ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಾಂಬಾರಿನಲ್ಲಿ ಇಲಿ ಕಂಡು ಪೌರಕಾರ್ಮಿಕರು ಬೆಚ್ಚಿಬಿದ್ದರು.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಕೂಡ ಒಂದಾಗಿತ್ತು. ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರವನ್ನು ಪೂರೈಸಿ ಲಕ್ಷಾಂತರ ಜನರ ಹಸಿವು ನೀಗಿಸಿತ್ತು, ಹಗಾಗಿಯೇ ಈಗಿನ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡಿತ್ತು.

ಬಂದ್ ದಿನವು ಇಂದಿರಾ ಕ್ಯಾಂಟೀನ್ ಗೆ 1 ಲಕ್ಷ ಜನ ಬಂದರಾ?ಬಂದ್ ದಿನವು ಇಂದಿರಾ ಕ್ಯಾಂಟೀನ್ ಗೆ 1 ಲಕ್ಷ ಜನ ಬಂದರಾ?

ಆದರೆ ಇಂತಹ ಬೇಜವಾಬ್ದಾರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಾಯತ್ರಿನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಪೂರೈಸುವಾಗ ಸಾಂಬಾರಿನಲ್ಲಿ ಇಲಿ ಬಿದ್ದಿರುವುದನ್ನು ಕಂಡು ಪೌರಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ, ಚೆಟ್‌ ಆಫ್‌ ಸಂಸ್ಥೆಯಿಂದ ಈ ಎಡವಟ್ಟಾಗಿದೆ. ಈ ಕುರಿತು ಸಂಸ್ಥೆ ಬಗ್ಗೆ ಜಂಟಿ ವಲಯ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

Rat found in Indira canteen food

ಯಾವುದೋ ಒಂದು ಕ್ಯಾಂಟೀನ್‌ನಲ್ಲಿ ಈ ರೀತಿಯಾಗಿದೆ ಎಂದರೆ ಎಲ್ಲಾ ಕ್ಯಾಂಟೀನ್‌ಗಳು ಇದೇ ರೀತಿ ಇರುತ್ತವೆ ಎಂದು ಭವಿಸುವುದು ತಪ್ಪಾಗುತ್ತದೆ ಆದರೆ ಈ ಘಟನೆ ಸಾರ್ವಜನಿಕರಲ್ಲಿ ಅತಂಕಮೂಡಿಸಿರುವುದಂತೂ ಸತ್ಯ. ಇನ್ನುಮುಂದೆ ಇಂದಿರಾಕ್ಯಾಂಟೀನ್‌ ಬರುವವರ ಸಂಖ್ಯೆ ಕೊಂಚ ಕಡಿಮೆಯಾಗಬಹುದು.

English summary
Allegedly a rat found in Indira canteen food at Gayatri Nagar ward which food was distributing to Poura Karmikas. The complaint was filed with joint commissioner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X