ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿ.ಎಸ್. ಶಿವರುದ್ರಪ್ಪ ಬರೆದ ಉಯಿಲು ಪತ್ರದಲ್ಲೇನಿದೆ?

By Mahesh
|
Google Oneindia Kannada News

ಬೆಂಗಳೂರು, ಡಿ.23: ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿ ಬೆಳದ ಜನಮೆಚ್ಚಿದ ಕವಿ ಜಿ.ಎಸ್ ಶಿವರುದ್ರಪ್ಪ ಅವರು ಹುಟ್ಟಿನಿಂದ ಲಿಂಗಾಯತ ಧರ್ಮಕ್ಕೆ ಸೇರಿದವರಾದರೂ ಯಾವತ್ತಿಗೂ ಒಂದು ಗುಂಪಿನ, ಜಾತಿಯ, ಧರ್ಮದ ವ್ಯಕ್ತಿಯಾಗಿ ಗುರುತಿಸಿಕೊಂಡವರಲ್ಲ. ಕುವೆಂಪು ಅವರ ಸಾಂಗತ್ಯದಿಂದ ಸಾಹಿತ್ಯ ಕೃಷಿಯಲ್ಲದೆ, ಸಾಮಾಜಿಕ ಕೃಷಿಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಸುಧಾರಕರಾಗಿದರು. ನಿಜದ ಅರ್ಥದಲ್ಲಿ ವಿಶ್ವಮಾನವನಂತೆ ಉಳಿದ ಜಿಎಸ್ ಶಿವರುದ್ರಪ್ಪ ಅವರು ಪ್ರಾತಃ ಸ್ಮರಣೀಯರು.

ರಾಷ್ಟ್ರಕವಿ ಶಿವರುದ್ರಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಳೆ (ಡಿ.24) ಸರ್ಕಾರಿ ರಜೆ ಘೋಷಿಸಿದ್ದಾರೆ. ಇಂದು ಹಾಗೂ ನಾಳೆ ಎರಡು ದಿನ ರಾಜ್ಯದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತದೆ. ಹಲವಾರು ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಲಾಗಿದೆ.[ಶಿವರುದ್ರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಜಯದೇವ್]

ಬೆಂಗಳೂರಿನ ಜ್ಞಾನ ಭಾರತಿಯ ಆವರಣದಲ್ಲಿ ರಾಷ್ಟ್ರಕವಿಗಳ ಅಂತಿಮ ಸಂಸ್ಕಾರ ನೆರವೇರಿಸಲು ವಿವಿಧ ವಿವಿ ಕುಲಪತಿಗಳಿಂದ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಡಿ.26ರಂದು ಡಾ. ಜಿಎಸ್ ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಅದರೆ, ಕನ್ನಡ ವಿದ್ಯಾರ್ಥಿಗಳ ಪಾಲಿನ ಮೆಚ್ಚಿನ ಮೇಷ್ಟ್ರು ಶಿವರುದ್ರಪ್ಪ ಅವರ ಅಂತಿಮ ಸಂಸ್ಕಾರ ಹೇಗೆ ನಡೆಯಲಿದೆ ಎಂಬ ಚರ್ಚೆ ಮಧ್ಯಾಹ್ನದಿಂದಲೇ ಆರಂಭವಾಗಿತ್ತು. ಇದಕ್ಕೆ ಈಗ ಉತ್ತರವೂ ಸಿಕ್ಕಿದೆ.[ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು]

Rashtrakavi GS Shivarudrappa's Last Rites and Will details

'ನಾನು ಜೀವನದಲ್ಲಿ ಎಲ್ಲವನ್ನು ಕಂಡಿದ್ದೇನೆ. ಸಾಕಷ್ಟು ಕವನಗಳನ್ನು ಬರೆದಿದ್ದೇನೆ. ಕೃತಕ ಜೀವನಾಧಾರಗಳನ್ನು ನೀಡಿ ನನ್ನನ್ನು ಹೆಚ್ಚು ಕಾಲ ಜೀವಂತ ಇಡಬೇಡಿ. ನನ್ನ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಧಾರ್ಮಿಕ ವಿಧಿ ವಿಧಾನ ಬೇಡ. ನನ್ನ ಕಳೇಬರವನ್ನು ಸುಟ್ಟರೆ ಸಾಕು ಎಂದು ನನ್ನ ಅಪ್ಪ ಹೇಳಿದ್ದರು ಎಂದು ಜಯದೇವ್ ಅವರು ಸ್ಮರಿಸಿಕೊಂಡಿದ್ದಾರೆ.[ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ]

ಜಿ.ಎಸ್. ಶಿವರುದ್ರಪ್ಪ ಬರೆದ ಪತ್ರದಲ್ಲೇನಿದೆ?: ಪತ್ನಿ ಹಾಗೂ ಮಕ್ಕಳನ್ನು ಮುಂದೆ ಕೂರಿಸಿ ಬರೆದ ಪತ್ರದ ಸಾರಾಂಶ ಈ ಕೆಳಗಿನಂತಿದೆ:

'ನಾನು ಯಾವ ಜಾತಿಗೂ ಸೇರಿದವನಲ್ಲ. ನಾನು ಕರ್ನಾಟಕದ ಆಸ್ತಿ. ಹಾಗಾಗಿ ನನ್ನ ಅಂತ್ಯಕ್ರಿಯೆಯಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನ ನಡೆಸಬಾರದು. ನನ್ನನ್ನು ಮಣ್ಣು ಮಾಡಬಾರದು. ಚಿತೆಗೇರಿಸಿ ಅಗ್ನಿ ಸ್ಪರ್ಷ ಮಾಡಬೇಕು. ಒಂದು ಹಿಡಿ ಚಿತಾಭಸ್ಮವನ್ನು ಕಾವೇರಿಯಲ್ಲಿ ಬಿಡಿ. ನನ್ನ ಹೆಸರಲ್ಲಿ ಸರ್ಕಾರವಾಗಲೀ ಅಥವಾ ಕುಟುಂಬವಾಗಲೀ ಆಡಂಬರದ ಕಾರ್ಯಕ್ರಮ ಮತ್ತು ಸ್ಮಾರಕ ನಿರ್ಮಾಣ ಮಾಡಬಾರದು.- ಜಿ.ಎಸ್ ಶಿವರುದ್ರಪ್ಪ[ಜಿ.ಎಸ್ ಶಿವರುದ್ರಪ್ಪ ನಿಧನಕ್ಕೆ ಗಣ್ಯರ ಕಂಬನಿ]

English summary
Kannada poet, writer and researcher, Rashtrakavi GS Shivarudrappa passed away today(Dec.23) at his residence in Banashankari, Bangalore. He was 87. Here are the details about his will paper and Last Rites
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X