ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಬಿಎಸ್ವೈಗೆ ಮನವಿ

|
Google Oneindia Kannada News

ಬೆಂಗಳೂರು, ಡಿ. 2: ಕರ್ನಾಟಕದಲ್ಲಿ ಪ್ರಬಲ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಾಷ್ಟ್ರಧರ್ಮ ಸಂಘಟನೆಯು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

ಇದಕ್ಕೂ ಮುನ್ನ ಗಾಂಧಿನಗರದ ಮೌರ್ಯ ಸರ್ಕಲ್‍ನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ 80 ರಿಂದ 100 ಜನರು ನಮ್ಮ ಹಿಂದೂ ಸಂಸ್ಕೃತಿ ಮೌಲ್ಯಗಳನ್ನು ಎತ್ತಿಹಿಡಿಯುವವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?

ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕರಾದ ಸಂತೋಷ್ ಕೆಂಚಾಂಬ ರವರ ನೇತೃತ್ವದಲ್ಲಿ ದೇಸಿ ತಳಿಯಾದ ಗಿರ್ ಗೋವಿನೊಂದಿಗೆ ಮೌರ್ಯ ಸರ್ಕಲ್‍ನಿಂದ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣವರೆಗೆ ಪಾದಯಾತ್ರೆ ಮಾಡಲಾಯಿತು.

Rashtradharma Sangatane demand Cow Slaughter Ban bill

ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು.

1. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು
2. ಗೋ ರಕ್ಷಕರನ್ನು ಜೈಲಿನಿಂದ ಬಿಡುಗಡೆ ಮಾಡಿ ಅವರ ಮೇಲಿರುವ ಕೇಸುಗಳನ್ನು ಖುಲಾಸೆ
ಮಾಡುವುದು
3. ದೇಸಿ ಗೋವುಗಳ ಸಂರಕ್ಷಣೆಗೆ ಆಯೋಗ ರಚನೆ
4. ಗೋಮಾಳ ಜಾಗದ ಸಂರಕ್ಷಣೆ ಮತ್ತು ಒತ್ತುವರಿ ತಡೆಯುವುದು
5. ಗೋ ಶಾಲೆಗಳಿಗೆ ಬಜೆಟ್‍ನಲ್ಲಿ ಸೂಕ್ತ ಅನುದಾನ ನೀಡುವುದು
ಈ ಎಲ್ಲಾ ವಿಷಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು

ಬಿಜೆಪಿಯ ಗೋಹತ್ಯೆ ನಿಷೇಧ ವಿಧೇಯಕ ರದ್ದುಬಿಜೆಪಿಯ ಗೋಹತ್ಯೆ ನಿಷೇಧ ವಿಧೇಯಕ ರದ್ದು

Rashtradharma Sangatane demand Cow Slaughter Ban bill

Recommended Video

Ind vs Aus 1st T20 ನಾಳೆ ನಡೆಯಲಿದ್ದು , ಸೇಡು ತೀರಿಸಿಕೊಳ್ಳಲು ಭಾರತ ಸಿದ್ದ | Oneindia Kannada

ಈ ಕಾರ್ಯಕ್ರಮದಲ್ಲಿ ರಾಷ್ಟ್ರಧರ್ಮ ಸಂಘಟನೆಯ ಕಾರ್ಯಕರ್ತರು ಹಾಗೂ ಗೋಪಾಲಕ ಕುಮಾರ ಸುಬ್ರಮಣ್ಯ ಜಾಗೀರ್‍ಧಾರ್, ಗೋ ಸೇವಕ ರಾಘವೇಂದ್ರ, ರಾಷ್ಟ್ರೋತ್ತಾನ ಗೋಶಾಲೆಯ ಡಾ. ವಿ ಜೀವನ್ ಕುಮಾರ್, ಗೋಮಾತ್ರಂ ಗೋಶಾಲೆಯ ಜಿ.ಎಲ್ ಮಂಜುನಾಥ್, ಪ್ರಾಣಿ ದಯಾಸಂಘದ ಸುನೀಲ್ ದುಗಾರ್ ಸೇರಿದಂತೆ ಹಲವಾರು ಗೋ ಸೇವಕರು ಪಾಲ್ಗೊಂಡಿದ್ದರು.

English summary
Rashtradharma Organization, working towards rejuvenation and revitalization of cultural values of Bharath, organized a Jatha to the Chief Minister’s House on December 2, 2020 from Maurya Circle to CM Home Office Krishna on Kumar Krupa Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X