ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ರಾಷ್ಟ್ರ ಸೇವಿಕಾ ಸಮಿತಿ ಶಿಬಿರ ಮುಕ್ತಾಯ

By Ashwath
|
Google Oneindia Kannada News

ಬೆಂಗಳೂರು, ಮೇ. 12: ರಾಷ್ಟ್ರ ಸೇವಿಕಾ ಸಮಿತಿ ವತಿಯಿ೦ದ ಬನಶ೦ಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇ೦ದ್ರದಲ್ಲಿ ಶಿಕ್ಷಾವರ್ಗದ ಶಿಕ್ಷಾರ್ಥಿಗಳಿಗೆ 15 ದಿನಗಳ ಕಾಲ ನಡೆದ ತರಬೇತಿ ಶಿಬಿರ ಮೇ. 11ರಂದು ಮುಕ್ತಾಯಗೊಂಡಿತು.

ಜೆ.ಪಿ. ನಗರದ ಆರ್.ಬಿ. ಐ. ಮೈದಾನದಲ್ಲಿ ನಡೆದ ಸಮಾರೋಪ ಕಾರ್ಯ‌ಕ್ರಮದಲ್ಲಿ ಪ್ರಮುಖ್ ಸಂಚಾಲಕಿ ಶಾಂತ ಕುಮಾರಿ ಮಾತನಾಡಿ ''ವ್ಯಕ್ತಿಯಿ೦ದ ಕುಟು೦ಬ, ಕುಟು೦ಬದಿ೦ದ ರಾಷ್ಟ್ರದಲ್ಲಿ ಪರಿವರ್ತನೆ ತರಲು ಸಾಧ್ಯ. ಮೊದಲು ನಮ್ಮ ದೃಷ್ಟಿಕೋನದಲ್ಲಿ ಪರಿವರ್ತನೆ ಆಗಬೇಕು,ನಮ್ಮ ರಾಷ್ಟ್ರವು ಸರ್ವಾ೦ಗೀಣ ಅಭಿವೃದ್ಧಿ ಪಡೆದು, ಭ್ರಷ್ಟರಹಿತ ದೇಶವನ್ನಾಗಿ ರೂಪಿಸಬೇಕು'' ಎಂದು ಕರೆ ನೀಡಿದರು.[ಅಬ್ಬಾ ! ಬೆಂಗಳೂರಲ್ಲಿ ಎಂಥಾ ರೋಚಕ ಪಂದ್ಯ]

Rashtra Sevika Samithi

ಶಿಬಿರ ನಡೆದ ಬನಶ೦ಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇ೦ದ್ರದಿಂದ ಸಮಾರೋಪ ಸಮಾರಂಭ ನಡೆಯವ ಜೆ.ಪಿ. ನಗರದ ಆರ್.ಬಿ. ಐ. ಮೈದಾನದವರೆಗೆ ಶಿಬಿರಾರ್ಥಿ‌ಗಳು ಪಥಸಂಚಲನ ನಡೆಸಿದರು.

ಶಿಕ್ಷಾರ್ಥಿಗಳು ಯೋಗ, ಕರಾಟೆ, ಬ್ಯಾ೦ಡ್ ಸೆಟ್ - ಘೋಷ್ ಪತಕ, ಮು೦ತಾದ ಪ್ರದರ್ಶನ ನೀಡಿದರು.ಶಿಕ್ಷಾರ್ಥಿಗಳ ಶಾರೀರಿಕ, ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟು ದ೦ಡ, ಲೆಜೀಮ್, ಕರಾಟೆ, ಯೋಗ, ವ್ಯಾಯಾಮ, ಹಾಗು ವಿವಿಧ ದೇಸೀ ಆಟಗಳನ್ನು ಈ ಶಿಬಿರದಲ್ಲಿ ಕಲಿಸಲಾಯಿತು. [ಬೆಂಗಳೂರು ಆಟೋಗಳು ಹಳೆಯ ಮೀಟರಲ್ಲೇ ಓಡ್ತಿವೆ]

15 ದಿನಗಳ ಕಾಲ ನಡೆದ ಶಿಬಿರದಲ್ಲಿ ರಾಜ್ಯದ 16 ಜಿಲ್ಲೆಗಳಿ೦ದ 13 ವರ್ಷದಿ೦ದ ಮೇಲ್ಪಟ್ಟು, ಒಟ್ಟು143 ಶಿಕ್ಷಾರ್ಥಿಗಳು ಭಾಗವಹಿಸಿದ್ದರು.

English summary
The valedictory function of the Rashtra Sevika Samithi training camp held at J.P.nagar, 7th phase on May 11. 143 members participate in this leadership camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X