• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಷಪೂರಿತ ಬೆಳ್ಳಂದೂರು ಕೆರೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಫೋಟೊ ಶೂಟ್!

|

ಬೆಂಗಳೂರು, ಡಿಸೆಂಬರ್ 14: ಬೆಳ್ಳಂದೂರು ಕೆರೆ ಮಾಲಿನ್ಯ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಗೆ ಜಿಗಿದಿದ್ದಾರೆ. ನೀರಿನೊಳಗೆ ಫೋಟೊಶೂಟ್ ಕೂಡ ಮಾಡಿದ್ದಾರೆ.

ರಶ್ಮಿಕಾ ಕೆರೆಯ ದಂಡೆ ಮೇಲೆ ಚಿಂತಾಕ್ರಾಂತರಾಗಿ ನಿಂತಿರೋದು. ಪ್ಲಾಸ್ಟಿಕ್ ಕವರ್​ಗಳ ಮಧ್ಯೆ ತೇಲಾಡ್ತಿರೋದು.. ಹೀಗೆ ನಾನಾ ಬಗೆಯ ಅರ್ಥ ಒದಗಿಸೊ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ಅಲ್ಲದೇ ಜಲಮಾಲಿನ್ಯದ ಕುರಿತು ಭಾವನಾತ್ಮಕ ಬರಹವೊಂದನ್ನು ಟ್ವೀಟ್ ಮಾಡಿದ್ದಾರೆ.

ರಾಜ್ಯಕ್ಕೆ ಎನ್‌ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ

ರಶ್ಮಿಕಾ ಅವರ ಫೋಟೋಶೂಟ್ ಅನ್ನು ಸನ್ಮತಿ ಡಿ. ಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಅಂಡರ್ ವಾಟರ್ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಬೆಳ್ಳಂದೂರು ಕೆರೆಯ ಪರಿಸ್ಥಿತಿ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಷ್ಟೊಂದು ಅಪಾಯಕಾರಿ ಸ್ಥಳ. ಇದೇ ಜಾಗದಲ್ಲೀಗ ಫೋಟೊಶೂಟ್ ಮಾಡಿಸೋ ಮೂಲಕ ರಶ್ಮಿಕಾ ಸುದ್ದಿಯಾಗಿದ್ದು, ಜಲ ಮಾಲಿನ್ಯ ತಡೆಯುವಂತೆ ಮನವಿ ಮಾಡಿದ್ದಾರೆ. ಅಬ್ಬಾ.. ಈ ಕೆರೆಯ ಬಗ್ಗೆ ಕೇಳಿದ್ದೆ. ಆದರೆ, ಇದು ಇಷ್ಟೊಂದು ಹಾಳಾಗಿದೆ ಎಂಬುದು ಗೊತ್ತಿರಲಿಲ್ಲ. ತುಂಬಾ ಬೇಸರವಾಗಿದೆ ಇದು ಬೆಳ್ಳಂದೂರು ಕೆರೆಯ ಕುರಿತು ರಶ್ಮಿಕಾ ಮಂದಣ್ಣ ಹೇಳಿರುವ ಮಾತು.

ಸೆಪ್ಟಿಕ್ ಟ್ಯಾಂಕ್‌ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ

ಬೆಳ್ಳಂದೂರು ಕೆರೆಯಲ್ಲಿ ಜಲ ಮಾಲಿನ್ಯದ ಅರಿವು ಮೂಡಿಸುವ ಕುರಿತು ಡಾಕ್ಯುಮೆಂಟರಿ ಮಾಡುತ್ತಿದ್ದು, ರಶ್ಮಿಕಾ ಅದರ ಫೋಟೋಶೂಟ್‍ನಲ್ಲಿ ಭಾಗವಹಿಸಿದ್ದಾರೆ. ಕೆರೆಯ ಸಮೀಪದಲ್ಲಿ ಫೋಟೋಶೂಟ್‍ನಲ್ಲಿ ಪಾಲ್ಗೊಂಡಿದ್ದ ರಶ್ಮಿಕಾ, ಬೆಳ್ಳಂದೂರು ಕೆರೆಯ ದುಸ್ಥಿತಿ ನೋಡಿ ಮರುಗಿದ್ದಾರೆ.

ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ

ಬೆಂಗಳೂರಿನ ಅತಿ ಹೆಚ್ಚು ಮಲಿನಕಾರಕ ಕೆರೆಗಳಲ್ಲಿ ಬೆಳ್ಳಂದೂರು ಕೆರೆ ಕೂಡ ಒಂದು, ಬೆಳ್ಳಂದೂರು ಕೆರೆ ಅಭಿವೃದ್ಧಿ ಮಾಡದ ಸರ್ಕಾರಕ್ಕೆ ಇತ್ತೀಚೆಗಷ್ಟೇ ಹಸಿರು ನ್ಯಾಯಾಧೀಕರಣ 75 ಕೋಟಿ ರೂ ದಂಡವನ್ನೂ ವಿಧಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India is a country where pollution often runs unchecked owing to lax laws and there not being enough measures in place to counter it. Every year, the air quality drops to severely hazardous in major cities like Delhi, and Bangalore's Bellandur lake, infamous for its water pollution, continues to froth up at regular intervals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more