ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪತ್ತೆಯಾಯಿತು ಅತಿ ಅಪರೂಪದ ಶ್ವೇತನಾಗ

|
Google Oneindia Kannada News

ಬೆಂಗಳೂರು, ಮೇ 25: ಅತ್ಯಂತ ಅಪರೂಪದ ಬಿಳಿ ಬಣ್ಣದ ನಾಗರಹಾವು ನಗರದಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಜ್ಯುಡಿಶಿಯಲ್ ಬಡಾವಣೆಯಲ್ಲಿ ಈ ಅಪರೂಪದ ಬಿಳಿ ನಾಗರ ಹಾವು ಪತ್ತೆ ಆಗಿದ್ದು, ಹಾವು ಆರಿ ಅಡಿ ಉದ್ದವಿದೆ. ಸಾರ್ವಜನಿಕರೊಬ್ಬರು ಹಾವನ್ನು ಕಂಡು ಬಿಬಿಎಂಪಿಗೆ ವಿಷಯ ಮುಟ್ಟಿಸಿದ್ದಾರೆ.

ಬಿಳಿನಾಗರ ಹಾವನ್ನು ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ವಿಭಾಗದ ಮೋಹನ್ ಅವರು ರಕ್ಷಣೆ ಮಾಡಿದ್ದಾರೆ. ಹಾವನ್ನು ಸುರಕ್ಷಿತ ಸ್ಥಾನಕ್ಕೆ ಬಿಡಲಾಗುತ್ತಿದೆ.

ಹಾವು ತಿನ್ನುವ ಅಳಿಲಿನ ಫೋಟೋ ವೈರಲ್; ನಿಜವೆಷ್ಟು, ಸುಳ್ಳೆಷ್ಟು?ಹಾವು ತಿನ್ನುವ ಅಳಿಲಿನ ಫೋಟೋ ವೈರಲ್; ನಿಜವೆಷ್ಟು, ಸುಳ್ಳೆಷ್ಟು?

ಸಾಮಾನ್ಯವಾಗಿ ಬಿಳಿ ಬಣ್ಣದ ನಾಗರ ಹಾವು ಪತ್ತೆ ಆಗುವುದು ಬಹಳವೇ ಅಪರೂಪ. ಪುರಾಣಗಳಲ್ಲಿ ಅಲ್ಲಲ್ಲಿ 'ಶ್ವೇತನಾಗ'ದ ಉಲ್ಲೇಖ ಇರುವುದರಿಂದ ಈ ಬಣ್ಣದ ಹಾವಿನ ಬಗ್ಗೆ ಅತಿಯಾದ ಕುತೂಹಲ ಮತ್ತು ಭಯ ತುಂಬಿದ ಭಕ್ತಿಯ ಭಾವವೂ ಇದೆ.

Rare white cobra snake found in Bengaluru

ಎಲ್ಲ ಪ್ರಾಣಿಗಳು ಸಹ ದೇಹದಲ್ಲಿನ ರಾಸಾಯನಿಕಗಳ ಬದಲಾವಣೆಯಿಂದ ತಮ್ಮ ನೈಜ ಬಣ್ಣ ಕಳೆದುಕೊಂಡು ಬಿಳಿ ಬಣ್ಣಕ್ಕೆ ತಿರಿಗುವುದು ಸಾಮಾನ್ಯ ಎನ್ನುತ್ತಾರೆ ಜೀವ ಸಂಶೋಧಕರು.

ಭಾರತ ಹಾವಾಡಿಗರ ದೇಶ ಎಂದು ಬಿಂಬಿಸಿದ್ದ ಕಾಂಗ್ರೆಸ್: ನರೇಂದ್ರ ಮೋದಿಭಾರತ ಹಾವಾಡಿಗರ ದೇಶ ಎಂದು ಬಿಂಬಿಸಿದ್ದ ಕಾಂಗ್ರೆಸ್: ನರೇಂದ್ರ ಮೋದಿ

ಚರ್ಮದ ಮೆಲಾನಿನ್ ಕಳೆದುಕೊಂಡು ಅಥವಾ ಇತರೆ ರಾಸಾಯನಿಕ ಕಾರಣದಿಂದ ಹಾವುಗಳು ಹೀಗೆ ಬಿಳಿಯ ಬಣ್ಣಕ್ಕೆ ತಿರುಗುತ್ತವೆ. ಮನುಷ್ಯರೂ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿ ಅಪರೂಪವಾಗಿ ಈ ರೀತಿ ಆಗುತ್ತದೆ.

English summary
Rare white cobra snake found in Bengaluru's judicial layout. BBMP wild life department rescued it and leave it to safe place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X