ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಛಾಯಾಚಿತ್ರಗಳಲ್ಲಿ ಡಾ. ಹೊ. ಶ್ರೀನಿವಾಸಯ್ಯರ ಸಂಸ್ಮರಣೆ

ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ(93) ಅವರು ಇಂದು ಮುಂಜಾನೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕರ್ನಾಟಕದಾದ್ಯಂತ ಓಡಾಡಿದ ಹಿರಿಯ ಜೀವ ಡಾ. ಹೊ. ಶ್ರೀನಿವಾಸಯ್ಯ ಅವರ ಅಪರೂಪದ ಚಿತ್ರಗಳು ಇಲ್ಲಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಏಪ್ರಿಲ್ 6: ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ(93) ಅವರು ಇಂದು ಮುಂಜಾನೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದ ಹೊ ನರಸಿಂಹಯ್ಯ ಸಾವಿರಾರು ಶಾಲೆ-ಕಾಲೇಜುಗಳಲ್ಲಿ ಗಾಂಧಿ ತತ್ವಗಳ ಪ್ರಚಾರ ಮಾಡಿ, ಯುವ ಪೀಳಿಗೆಗೆ ಮಹಾತ್ಮನ ವ್ಯಕ್ತಿತ್ವವನ್ನು ಪರಿಚಯಿಸಿದ್ದರು.

ಗಾಂಧೀಜಿಯವರ ಕುರಿತು ಹಲವು ಕೃತಿಗಳನ್ನು ರಚಿಸಿದ್ದ ಅವರು, ಸಹಕಾರ ತತ್ವದ ಆಧಾರದ ಮೇಲೆ ಬ್ಯಾಂಕ್ ಗಳನ್ನೂ ಪ್ರಾರಂಭಿಸಿದ್ದರು. ಅವರ ಪ್ರಸಿದ್ಧ ಪ್ರವಾಸೀ ಕಥನ "ನಾ ಕಂಡ ಜರ್ಮನಿ" ಸಾಹಿತ್ಯ ವಲಯದಲ್ಲಿ ಅಪಾರ ಮೆಚ್ಚುಗೆ ಪಡೆದಿತ್ತು.

ಸಾಹಿತಿ, ಗಾಂಧಿವಾದಿ, ಪತ್ರಕರ್ತ, ಸಮಾಜ ಸೇವಕ ಹೀಗೆ ನಾನಾ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸಯ್ಯ ಅವರು ಓರ್ವ ಪುತ್ರಿ ಹಾಗೂ ಅಸಂಖ್ಯ ಅಭಿಮಾನಿಗಳನ್ನು ಅಗಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ನಾಡಿನ ಹಲವು ಗಣ್ಯರು ಶ್ರೀನಿವಾಸಯ್ಯನವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಾದ್ಯಂತ ಒಡಾಡಿದ ಡಾ. ಹೊ. ಶ್ರೀನಿವಾಸಯ್ಯ ಅವರ ಅಪರೂಪದ ಚಿತ್ರಗಳು ಇಲ್ಲಿವೆ.

ಗಾಂಧಿ ಹೆಜ್ಜೆ ಶತಮಾನೋತ್ಸವ ಸಮಾರಂಭ

ಗಾಂಧಿ ಹೆಜ್ಜೆ ಶತಮಾನೋತ್ಸವ ಸಮಾರಂಭ

ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಡಾ. ಹೊ. ಶ್ರೀನಿವಾಸಯ್ಯ ಭಾಗವಹಿಸಿದ್ದರು.

ಗಾಂಧಿ-ಶ್ರೀನಿವಾಸಯ್ಯ

ಗಾಂಧಿ-ಶ್ರೀನಿವಾಸಯ್ಯ

ಮಹಾತ್ಮಾ ಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಡಾ: ಹೊ. ಶ್ರೀನಿವಾಸಯ್ಯ

ಗಾಂಧಿ ಸೇವಾ ಪುರಸ್ಕಾರ

ಗಾಂಧಿ ಸೇವಾ ಪುರಸ್ಕಾರ

ಗಾಂಧಿ ಸೇವಾ ಪುರಸ್ಕಾರ ಸ್ವೀಕರಿಸಲು ಆಗಮಿಸಿದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಮಿಸುತ್ತಿರುವ ಹೊ ಶ್ರೀನಿವಾಸಯ್ಯ.

ಗಾಂಧಿ ಜಯಂತಿ

ಗಾಂಧಿ ಜಯಂತಿ

ಗಾಂಧೀ ಜಯಂತಿ ಸಂಧರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಕೆ. ಪಾಟೀಲ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ಅವರೊಂದಿಗೆ ಶ್ರೀನಿವಾಸಯ್ಯ.

ಎ.ಐ.ಸಿ.ಸಿ. ಅಧಿವೇಶನದಲ್ಲಿ

ಎ.ಐ.ಸಿ.ಸಿ. ಅಧಿವೇಶನದಲ್ಲಿ

1951 ರಲ್ಲಿ ಬೆಂಗಳೂರಿನಲ್ಲಿ ನಡೆದ ಎ.ಐ.ಸಿ.ಸಿ. ಅಧಿವೇಶನ ಸಂದರ್ಭದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ, ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರೊಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀನಿವಾಸಯ್ಯ.

ಪಾಟೀಲ್ ಜತೆ

ಪಾಟೀಲ್ ಜತೆ

ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರೊಂದಿಗೆ ಡಾ. ಹೊ. ಶ್ರೀನಿವಾಸಯ್ಯ.

ಬಾಲಗಂಗಾಧರನಾಥ ಸ್ವಾಮೀಜಿ ಜತೆ

ಬಾಲಗಂಗಾಧರನಾಥ ಸ್ವಾಮೀಜಿ ಜತೆ

ಆದಿಚುಂಚನಗಿರಿ ಮಠದ ಡಾ: ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಶ್ರೀನಿವಾಸಯ್ಯ.

ರಾಜ್ಯಪಾಲರ ಜತೆ

ರಾಜ್ಯಪಾಲರ ಜತೆ

ಎಂಬತ್ತರ ದಶಕದಲ್ಲಿ ರಾಜ್ಯಪಾಲ ಗೋವಿಂದ ನಾರಾಯಣ್ ಅವರೊಂದಿಗೆ ಶ್ರೀನಿವಾಸಯ್ಯ.

ಸೇವಾ ಶಿಬಿರದಲ್ಲಿ

ಸೇವಾ ಶಿಬಿರದಲ್ಲಿ

ಕೋಲಾರ ಜಿಲ್ಲೆಯಲ್ಲಿ ನಡೆದ ಸೇವಾ ಶಿಬಿರದಲ್ಲಿ ಯುವಕರಾಗಿದ್ದ ಹೊ. ಶ್ರೀನಿವಾಸಯ್ಯ

ಕವಿಶೈಲದಲ್ಲಿ

ಕವಿಶೈಲದಲ್ಲಿ

ಕುವೆಂಪು ಸ್ಮಾರಕ ಕವಿಶೈಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊ. ಶ್ರೀನಿವಾಸ್ ನವರು ತೆಗೆಸಿಕೊಂಡ ಅಪರೂಪದ ಚಿತ್ರ.

English summary
Veteran writer and Gandhian Dr. Ho Srinivasaiah passes away in Jayadeva Hospital Bengaluru, this morning. His special and rare photographs are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X