ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಜೈಲಲ್ಲಿ ಅತ್ಯಾಚಾರಿಯ ಸಾಮ್ರಾಜ್ಯ: ಡಿ ರೂಪ ಬಿಚ್ಚಿಟ್ಟ ಸತ್ಯ

By Sachhidananda Acharya
|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಎಚ್.ಪಿ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಎಂಬಾಕೆಯನ್ನು 12 ವರ್ಷಗಳ ಹಿಂದೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಮಾಡಿದ ಶಿವಕುಮಾರ್ ಎಂಬಾತನಿಗೆ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾನೆ. ಆದರೆ ಆತ ಇಲ್ಲೂ ತನ್ನ ಸಾಮ್ರಾಜ್ಯ ಕಟ್ಟಿಕೊಂಡು ಮೆರೆದಾಡುತ್ತಿದ್ದಾನೆ ಎಂಬುದೇ ಈ ಕಥೆ.

ಪರಪ್ಪನ ಅಗ್ರಹಾರ ಅವ್ಯವಹಾರ : ಐಪಿಎಸ್ ಅಧಿಕಾರಿ ರೂಪಾಗೆ ಗೆಲುವುಪರಪ್ಪನ ಅಗ್ರಹಾರ ಅವ್ಯವಹಾರ : ಐಪಿಎಸ್ ಅಧಿಕಾರಿ ರೂಪಾಗೆ ಗೆಲುವು

ಇತ್ತೀಚೆಗೆ ಮಹಿಳೆಯೊಬ್ಬರ ಕೈ ಹಿಡಿದುಕೊಂಡಿದ್ದ ಶಿವಕುಮಾರ್ ಫೋಟೋ ವೈರಲ್ ಆಗಿತ್ತು. ಈ ಫೋಟೋದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ, ಚಿತ್ರದಲ್ಲಿ ಕಾಣಿಸುವ ಗೋಡೆ ನೋಡಿದರೆ ಇದು ಜೈಲಿನ ಹೊರಗೆ ತೆಗೆದ ಫೋಟೋ ಎಂಬ ಅನುಮಾನಗಳಿವೆ. ಆಕೆ ಹೋಮ್ ಗಾರ್ಡ್ ಸಿಬ್ಬಂದಿಯಾಗಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿವಕುಮಾರ್ ಜೈಲಿನಿಂದ ಹೊರ ಬಂದಿದ್ದ ಸಂದರ್ಭ ತೆಗೆದ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ.

ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?

Rapist was running Parappana Agrahara Prison: D Roopa’s shocking allegation,

ಈ ಕುರಿತು ಬಂದೀಖಾನೆ ವಿಭಾಗದ ಮಾಜಿ ಡಿಐಜಿ ಡಿ. ರೂಪಾ 'ದಿ ನ್ಯೂಸ್ ಮಿನಿಟ್'ಗೆ ಪ್ರತಿಕ್ರಿಯೆ ನೀಡಿದ್ದು, "ನಾನು ಜೈಲಿನಲ್ಲಿರುವ ಖೈದಿಗಳ ಬಳಿ ವಿಚಾರಿಸಿದಾಗ ಮುಖ್ಯ ಸೂಪರಿಂಟೆಂಡೆಂಟ್ ಕೃಷ್ಣ ಕುಮಾರ್ ಖೈದಿಗಳ ಸಣ್ಣ ತಂಡವನ್ನು ಇಟ್ಟುಕೊಂಡಿದ್ದು ಇವರೇ ಲಂಚದ ಹಣ ಸಂಗ್ರಹ ಮೊದಲಾದವನ್ನು ಮಾಡುತ್ತಾರೆ ಎಂದಿದ್ದರು. ಪೆರೋಲ್ ಪಡೆಯಲು, ತಮ್ಮವನ್ನು ಭೇಟಿಯಾಗಲು, ಮನೆಯಿಂದ ತಂದ ಆಹಾರ ತಿನ್ನಲು ಹೀಗೆ ಹಲವು ಕಾರಣಗಳಿಗೆ ಜೈಲಿನಲ್ಲಿ ಲಂಚ ಸಂಗ್ರಹಿಸಲಾಗುತ್ತದೆ. ಇದೇ ಖೈದಿಗಳು ಜೈಲಿನಲ್ಲಿ ನೈಟ್ ವಾಚ್ ಮನ್ ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಈ ತಂಡಕ್ಕೆ ಶಿವಕುಮಾರನೇ ನಾಯಕ ಎಂದು ನಾನು ಕೇಳಲ್ಪಟ್ಟಿದ್ದೇನೆ," ಎಂದಿದ್ದಾರೆ.

ಜೈಲು ಅವ್ಯವಹಾರ ಬಯಲಿಗೆಳೆದ ರೂಪಾಗೆ ರಾಷ್ಟ್ರಪತಿ ಪದಕಜೈಲು ಅವ್ಯವಹಾರ ಬಯಲಿಗೆಳೆದ ರೂಪಾಗೆ ರಾಷ್ಟ್ರಪತಿ ಪದಕ

ಆದರೆ ವೈರಲ್ ಆಗಿರುವ ಫೋಟೋ ನಕಲಿ ಎಂಬುದು ಆಂತರಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

"ನಾನು ಈ ಚಿತ್ರ ನೋಡಿಲ್ಲ. ಆದರೆ ಮಾಧ್ಯಮಗಳ ವರದಿ ನಂತರ ನಾವು ತನಿಖೆ ನಡೆಸಿದೆವು. ಈ ಫೋಟೋ ಸುಳ್ಳು. ಅವರಿಬ್ಬರು ಭೇಟಿಯಾಗಿಯೇ ಇಲ್ಲ," ಎಂದು ಹಾಲಿ ಜೈಲು ಸೂಪರಿಂಟೆಂಡೆಂಟ್ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

English summary
Rapist and murderer Shiva Kumar holds control over Parappana Agrahara Centra Prison, Bengaluru. Former DGP (Prison) D. Roopa alleges that Shiva Kumar gang collects bribe inside jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X