ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆ

|
Google Oneindia Kannada News

ಬೆಂಗಳೂರು, ಜನವರಿ 08: ರ್‍ಯಾಪಿಡೋ (ಬೈಕ್‌ ಕ್ಯಾಬ್ ಸರ್ವಿಸ್‌) ಸೇವೆ ಬಳಸುವ ಯುವತಿಯರನ್ನು ಚಿಂತೆಗೀಡು ಮಾಡುವಂತಹಾ, ರ್‍ಯಾಪಿಡೋ ಬಳಸುವ ಮುನ್ನಾ ಹಿಂಜರಿಕೆ ಉಂಟುಮಾಡುವಂತಹಾ ಘಟನೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ.

Recommended Video

Manish Pandey marries Kudla Girl Ashritha Shetty | Oneindia Kannada

ಮಂಗಳವಾರ ರಾತ್ರಿ 8:30 ರ ವೇಳೆಗೆ ಎಚ್‌ಎಸ್‌ಆರ್‌ ಲೇಔಟ್‌ನಿಂದ ಬಿಳೇಕಹಳ್ಳಿ ಗೆ ತೆರಳಲು ಯುವತಿಯೊಬ್ಬಾಕೆ ರ್‍ಯಾಪಿಡೋ ಬುಕ್ ಮಾಡಿದ್ದಾರೆ. ಮೊಬೈಲ್‌ನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಗೆಳತಿಯ ಮೊಬೈಲ್‌ನಿಂದ ಬುಕ್ ಮಾಡಿ, ಆನ್‌ಲೈನ್ ಪೇಮೆಂಟ್ ಮಾಡದೆ ನಗದು ಹಣ ನೀಡುವ ಆಯ್ಕೆ ಮಾಡಿಕೊಂಡಿದ್ದಾರೆ.

ಬೌನ್ಸ್ ಸಹಾಯದೊಂದಿಗೆ ಬೈಕ್ ಕಳ್ಳರ ಗ್ಯಾಂಗ್ ಬಂಧನ: ಭಾಸ್ಕರ್ ರಾವ್ಬೌನ್ಸ್ ಸಹಾಯದೊಂದಿಗೆ ಬೈಕ್ ಕಳ್ಳರ ಗ್ಯಾಂಗ್ ಬಂಧನ: ಭಾಸ್ಕರ್ ರಾವ್

ನಿಗದಿತ ವೇಳೆಗೆ ಬೈಕ್‌ನಲ್ಲಿ ಬಂದ ರ್‍ಯಾಪಿಡೋ ಹತ್ತಿ ಬಿಳೇಕಹಳ್ಳಿ ಕಡೆಗೆ ಹೊರಟಿದ್ದಾರೆ. ಸಿಲ್ಕ್‌ ಬೋರ್ಡ್‌ ಬರುತ್ತಲೇ ರ್‍ಯಾಪಿಡೋ ದ್ವಿಚಕ್ರ ವಾಹನದ ಚಾಲಕ ನೇರವಾಗಿ ತೆರಳುವ ಬದಲಿಗೆ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಆ ರಸ್ತೆಯಲ್ಲಿ ಸಾಕಷ್ಟು ಬಾರಿ ಸಂಚರಿಸಿದ್ದ ಯುವತಿಗೆ ಇದು ತಪ್ಪು ದಾರಿ ಎಂದು ಅರಿವಾಗಿ ಪ್ರಶ್ನೆ ಮಾಡಿದ್ದಾಳೆ.

Rapido Drives Gives Trouble To Young Girl In Bengaluru

'ಮುಂದೆ ಯೂಟರ್ನ್‌ ತೆಗೆದುಕೊಳ್ಳುತ್ತೇನೆ' ಎಂದು ಸಬೂಬು ಹೇಳಿ ವೇಗವಾಗಿ ಬೈಕ್ ಚಲಾಯಿಸಿದ್ದಾನೆ ಚಾಲಕ. ಮುಂದೆ ಯೂಟರ್ನ್‌ ತೆಗೆದುಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಯುವತಿ ಸುಮ್ಮನಾಗಿದ್ದಾಳೆ. ಆದರೆ ಆಕೆಗೆ ಆತಂಕ ಶುರುವಾಗಿದ್ದು ವಾಹನ ಚಾಲಕ ಗಾಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಹತ್ತಿಸಿದಾಗ.

ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ

ಗಾಡಿ ಫ್ಲೈಓವರ್‌ ಮೇಲೆ ಹತ್ತುತ್ತಿದ್ದಂತೆ ಆತಂಕಕ್ಕೆ ಒಳಗಾದ ಯುವತಿ ಗಾಡಿಯನ್ನು ನಿಲ್ಲಿಸಲು ಹೇಳಿದ್ದಾಳೆ. 'ನಿಲ್ಲಿಸುತ್ತೇನೆ.. ನಿಲ್ಲಿಸುತ್ತೇನೆ' ಎನ್ನುತ್ತಲೇ ಆತ ಗಾಡಿ ವೇಗವನ್ನು ಹೆಚ್ಚು ಮಾಡಿದ್ದಾನೆ. 'ನಾನು ಮೂತ್ರ ವಿಸರ್ಜನೆ ಮಾಡಬೇಕು ಕೂಡಲೇ ಗಾಡಿ ನಿಲ್ಲಿಸಿ' ಎಂದು ಯುವತಿ ಬೇಡಿಕೊಂಡಿದ್ದಾಳೆ.

ನಿಜವಾದ ಸಂಕಷ್ಟ ಆರಂಭವಾಗಿದ್ದೇ ಅಲ್ಲಿಂದ

ನಿಜವಾದ ಸಂಕಷ್ಟ ಆರಂಭವಾಗಿದ್ದೇ ಅಲ್ಲಿಂದ

ವಾಹನ ಚಾಲಕ ಫ್ಲೈಓವರ್‌ ಮೇಲಿನ 'ಲೇ ಬೇ' (ವಾಹನ ನಿಲ್ಲಿಸಿ ವಿರಮಿಸುವ ಜಾಗ) ದಲ್ಲಿ ಗಾಡಿ ನಿಲ್ಲಿಸಿ ಯುವತಿ ಗಾಡಿ ಇಳಿಯುತ್ತಲೇ ಆಕೆಯಿಂದ ಹಣ ಸಹ ಪಡೆಯದೇ ಅಲ್ಲಿಂದ ಪರಾರಿ ಆಗಿದ್ದಾನೆ. ವಾಹನ ಚಾಲಕನಿಂದ ಬಿಡುಗಡೆ ಪಡೆದರೂ ಯುವತಿಗೆ ನಿಜವಾದ ಸಂಕಷ್ಟ ಎದುರಾಗಿದ್ದು ಬೈಕ್ ಇಳಿದ ಮೇಲೆಯೇ. ಹತ್ತು ಕಿ.ಮೀ ಉದ್ದದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಬರೋಬ್ಬರಿ ಮಧ್ಯೆದಲ್ಲಿ ನಿಂತಿದ್ದಳು ಯುವತಿ, ಫ್ಲೈಓವರ್ ಇಳಿಯಲು ಎರಡೂ ಕಡೆಗೆ ಐದು ಕಿ.ಮೀ ನಡೆಯಬೇಕಿತ್ತು. ಅದೂ ಆ ಕತ್ತಲ ರಾತ್ರಿಯಲ್ಲಿ.

ಸಿಗರೇಟು, ಬಿಯರ್ ಹೀರುತ್ತಾ ನಿಂತಿದ್ದ ಯುವಕರು

ಸಿಗರೇಟು, ಬಿಯರ್ ಹೀರುತ್ತಾ ನಿಂತಿದ್ದ ಯುವಕರು

ಲೇ ಬೇ ಬಳಿ ಯುವತಿ ಇಳಿದಾಗ ಅಲ್ಲಿ ಹೊಸೂರು ಕಡೆಗೆ ಹೋಗುತ್ತಿದ್ದ ಕೆಲವು ಹುಡುಗರು ಕಾರು ನಿಲ್ಲಿಸಿ ಸಿಗರೇಟು ಸೇದುತ್ತಾ ನಿಂತಿದ್ದರು, ಇಬ್ಬರು ಉತ್ತರ ಭಾರತದ ಹುಡುಗರು ಕೈಯಲ್ಲಿ ಬಿಯರ್ ಟಿನ್ ಹೀರುತ್ತಿದ್ದರು. ಒಬ್ಬ ನಡು ವಯಸ್ಸಿನ ವ್ಯಕ್ತಿ ಕಾರು ನಿಲ್ಲಿಸಿ ಮನೆಗೆ ಹೋಗುವ ಮುನ್ನಾ ಹೆಂಡತಿ ಕೊಟ್ಟಿದ್ದ ಬಾಕ್ಸ್‌ನಲ್ಲಿ ಉಳಿದಿದ್ದ ಚಪಾತಿ ತಿನ್ನುತ್ತಿದ್ದ. ನವವಿವಾಹಿತ ಜೋಡಿಯೊಂದು ಮಾತನಾಡುತ್ತಾ ನಿಂತಿದ್ದರು.

ಮೊಬೈಲ್ ಬ್ಯಾಟರಿ ಸಹ ಸತ್ತು ಹೋಗಿತ್ತು

ಮೊಬೈಲ್ ಬ್ಯಾಟರಿ ಸಹ ಸತ್ತು ಹೋಗಿತ್ತು

ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಯುವತಿ, ಜೋಡಿ ನಿಂತಿದ್ದ ಕಡೆಗೆ ಬಂದು ಅಲ್ಲಿಯೇ ನಿಂತಳು. ರ್‍ಯಾಪಿಡೋ ಬೈಕ್‌ನಲ್ಲಿ ಬರುವಾಗಲೇ ತನ್ನ ಗೆಳೆಯನಿಗೆ ಬೈಕ್ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಏರಿದ್ದರ ಬಗ್ಗೆ ಮೆಸೆಜ್ ಮಾಡಿ ಲೊಕೇಶನ್ ಕಳಿಸಿದ್ದಳು. ಆದರೆ ಆಕೆಯ ದುರಾದೃಷ್ಟಕ್ಕೆ ಲೊಕೇಶನ್ ಕಳಿಸುತ್ತಿದ್ದಂತೆ ಕೊನೆ ಉಸಿರೆಳೆಯುತ್ತಿದ್ದ ಮೊಬೈಲ್ ಬ್ಯಾಟರಿ ಸತ್ತು ಹೋಗಿ ಮೊಬೈಲ್ ಬಂದ್ ಆಗಿತ್ತು.

ಜೋಡಿಯನ್ನು ಬೇಡಿಕೊಂಡ ಯುವತಿ

ಜೋಡಿಯನ್ನು ಬೇಡಿಕೊಂಡ ಯುವತಿ

ಕೈಯಲ್ಲಿ ಮೊಬೈಲ್ ಇಲ್ಲ, ಗೊತ್ತಿರದ ಜಾಗ ಸುತ್ತಲೇ ಬರೀ ಅಪರಿಚಿತ ಹುಡುಗರೇ. ಏನು ಮಾಡುವುದೆಂದು ಯೋಚಿಸುವ ಹೊತ್ತಿಗೆ ನವವಿವಾಹಿತ ಜೋಡಿ ಬೈಕ್ ಏರಿ ಅಲ್ಲಿಂದ ತೆರಳಲು ಸಜ್ಜಾಯಿತು. ಕೂಡಲೇ ಯುವತಿ ನವವಿವಾಹಿತ ಜೋಡಿ ಬಳಿ ಬಂದು ಯುವತಿಯನ್ನುದ್ದೇಶಿಸಿ 'ಇಲ್ಲಿ ನಾನು ಮತ್ತು ನೀವು ಇಬ್ಬರೇ ಮಹಿಳೆಯರಿದ್ದೇವೆ, ನೀವು ಹೊರಟುಹೋದರೆ ನಾನು ಒಬ್ಬಳೇ ಆಗುತ್ತೇನೆ, ನನ್ನ ಗೆಳೆಯ ಬರುತ್ತಿದ್ದಾರೆ ಸ್ವಲ್ಪ ಹೊತ್ತು ಇಲ್ಲಿರಿ' ಎಂದು ಕೇಳಿಕೊಂಡಿದ್ದಾಳೆ. ಅಷ್ಟು ಕೇಳುವಷ್ಟರಲ್ಲಿ ದುಖಃ ಒತ್ತರಿಸಿ ಬಂದು ಕಣ್ಣೀರು ಸುರಿಯಲಾರಂಭಿಸಿದೆ.

ನೀರು, ಹೊದಿಕೆ ಕೊಟ್ಟು ಉಪಚರಿಸಿದ ಯುವಜೋಡಿ

ನೀರು, ಹೊದಿಕೆ ಕೊಟ್ಟು ಉಪಚರಿಸಿದ ಯುವಜೋಡಿ

ಆಕೆಯ ಕಷ್ಟ ಅರ್ಥ ಮಾಡಿಕೊಂಡ ನವವಿವಾಹಿತ ಜೋಡಿ ಆಕೆಯೊಂದಿಗೆ ಇರಲು ಒಪ್ಪಿದೆ. ಮೊಬೈಲ್ ನೀಡಿ ಗೆಳೆಯನಿಗೆ ಕರೆ ಮಾಡಲು ಸಹಾಯ ಮಾಡಿದ್ದಾರೆ. ಗೆಳೆಯನಿಗೆ ಕರೆ ಮಾಡಿ ತಾನಿರುವ ಸ್ಥಳ, ಇರುವ ಪರಿಸ್ಥಿತಿಯನ್ನು ವಿವರಿಸಿ, ನವವಿವಾಹಿತ ಯುವತಿ ಕೊಟ್ಟ ನೀರು ಕುಡಿದು, ಕೊಟ್ಟ ಶಾಲು ಹೊದ್ದುಕೊಂಡು ನಿರುಮ್ಮಳವಾದಳು.

ಬಿಯರ್ ಹೀರುತ್ತಿದ್ದವನ ತರಲೆ

ಬಿಯರ್ ಹೀರುತ್ತಿದ್ದವನ ತರಲೆ

ಅಷ್ಟರಲ್ಲಿಯೇ ಅಲ್ಲಿಯೇ ಬೈಕ್‌ ನಿಲ್ಲಿಸಿ ಬಿಯರ್ ಹೀರುತ್ತಾ ನಿಂತಿದ್ದ ಇಬ್ಬರು ಹುಡುಗರಲ್ಲಿ ಒಬ್ಬ ಯುವತಿ ಬಳಿ ಬಂದು, 'ರಾಮ್‌ ರಾಮ್‌' ಎಂದ, ಮೊದಲು ಗಾಬರಿಗೊಂಡ ಆಕೆ 'ರಾಮ್‌ ರಾಮ್‌' ಎಂದು ನಮಿಸಿದ್ದಾಳೆ. 'ಒಬ್ಬರೇ ನಿಂತಿದ್ದೀರಿ, ಬೇಕೆಂದರೆ ನಾವು ನಿಮ್ಮನ್ನು ಡ್ರಾಪ್ ಮಾಡುತ್ತೇವೆ' ಎಂದು ಕೇಳಿದ್ದಾನೆ. ಆತನ ಸಹಾಯ ಹಸ್ತ(?) ವನ್ನು ನಿರಾಕರಿಸಿದ ಮಹಿಳೆ, ನನ್ನ ಗೆಳೆಯ ಬರುತ್ತಿದ್ದಾನೆಂದು ಹೇಳಿದ್ದಾಳೆ.

ಎರಡು ಗಂಟೆ ಅತೀವ ಅಭದ್ರತೆ ಎದುರಿಸಿದ ಯುವತಿ

ಎರಡು ಗಂಟೆ ಅತೀವ ಅಭದ್ರತೆ ಎದುರಿಸಿದ ಯುವತಿ

ಗೆಳತಿಗೆ ಬಂದೊದಗಿದ ಸ್ಥಿತಿಯಿಂದ ಆತಂಕಕ್ಕೆ ಒಳಗಾಗಿದ್ದ ಆಕೆಯ ಗೆಳೆಯ ಬೈಕ್ ಏರಿ ಉಟ್ಟ ಬಟ್ಟೆಯಲ್ಲಿಯೇ ಅವರಿವರನ್ನು ಸ್ಥಳ ಕೇಳುತ್ತಾ ಅಂತೂ ಫ್ಲೈ ಓವರ್‌ ನ ಲೇ ಬೇ ಸ್ಥಳಕ್ಕೆ ಬಂದಿದ್ದಾನೆ. ಗೆಳೆಯನನ್ನು ನೋಡಿದ ಮೇಲೆ ನಿರುಮ್ಮಳವಾದ ಯುವತಿ ಸಹಾಯ ಮಾಡಿದ ನವವಿವಾಹಿತರಿಗೆ ಧನ್ಯವಾದ ಹೇಳಿ ಹೊರಟಿದ್ದಾಳೆ. ಆದರೆ ಆ ಎರಡು ಗಂಟೆ ಆಕೆ ಅನುಭವಿಸಿದ ಅಭದ್ರತೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಇನ್ನೆಂದೂ ಆಕೆ ರ್‍ಯಾಪಿಡೋ ಏರಲಾರಳು. ಮೊಬೈಲ್ ಬ್ಯಾಟರಿ ಸೂಕ್ತವಾಗಿರದ ವೇಳೆ ಹೊರಗೆ ಹೋಗಲಾರಳು.

ಯಾರ ಉದ್ದೇಶ ಏನಾಗಿತ್ತೋ ಗೊತ್ತಿಲ್ಲ

ಯಾರ ಉದ್ದೇಶ ಏನಾಗಿತ್ತೋ ಗೊತ್ತಿಲ್ಲ

ಆ ರ್‍ಯಾಪಿಡೋ ಚಾಲಕ ದಾರಿ ತಪ್ಪಿ ಫ್ಲೈಓರ್‌ ಮೇಲೆ ಬಂದನೋ ಅಥವಾ ಅವನ ಉದ್ದೇಶ ಬೇರೆಯದ್ದೇನೋ ಇತ್ತೋ? ಆತ ಹಣ ಸಹ ಪಡೆಯದೇ ಪರಾರಿಯಾಗಿದ್ದ ಗಮನಿಸಿದರೆ ಆತನ ಉದ್ದೇಶ ಏನಿತ್ತೆಂದು ಊಹಿಸುವುದು ಸುಲಭ. ಫ್ಲೈ ಓವರ್‌ ಮೇಲೆ ಕುಡಿಯುತ್ತಾ ನಿಂತಿದ್ದ ಯುವಕ ಸಹಾಯ ಹಸ್ತ ಚಾಚಿದಾಗ ಅವನ ಉದ್ದೇಶ ಏನಿತ್ತೆಂದು ಹೇಳಲಸಾಧ್ಯವಾದರೂ ಆಕೆ ರಿಸ್ಕ್‌ ತೆಗೆದುಕೊಳ್ಳದೇ ಅವರ ಸಹಾಯವನ್ನು ನಿರಾಕರಿಸಿದರು. ಇದು ಆ ಸಮಯದಲ್ಲಿ ಉಚಿತವೂ ಆಗಿತ್ತು. ಯುವತಿಯರು ರ್‍ಯಾಪಿಡೋ ಮತ್ತಿತರ ಸೇವೆಗಳನ್ನು ಬಳಸುವಾಗ ಸಾಕಷ್ಟು ಜಾಗೃತೆ ವಹಿಸಬೇಕೆಂಬುದಂತೂ ಸತ್ಯ.

English summary
A young girl gives trouble to a young girl in Bengaluru. She booked a Rapido ride to Belekalli but the driver take wrong root and left her in a strange place and went.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X