ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಮೊರೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಜುಲೈ1: ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಆರ್.ಶ್ರೀನಿವಾಸ್ ವಿರುದ್ಧದ ಅತ್ಯಾಚಾರ, ಜೀವ ಬೆದರಿಕೆ ಆರೋಪದಡಿ ದಾಖಲಾಗಿರುವ ದೂರನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ. ಸ್ವತಃ ಆರೋಪಿ ಇನ್‌ಸ್ಪೆಕ್ಟರ್ ಟಿ.ಆರ್. ಶ್ರೀನಿವಾಸ್ ಅವರ ಪತ್ನಿ ಮುಬಶಿರಾ ಅವರೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಪೊಲೀಸ್ ಮಹಾನಿದೇಶಕರು, ನಗರ ಪೊಲೀಸ್ ಆಯುಕ್ತರು, ಸಿಬಿಐ, ಜೆ.ಸಿ. ನಗರ ಠಾಣಾ ಇನ್‌ಸ್ಪೆಕ್ಟರ್ ಮತ್ತು ಟಿ.ಆರ್.ಶ್ರೀನಿವಾಸ್‌ಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ಪ್ರಕರಣ ಕುರಿತು 2022ರ ಜೂನ್ 1ರಂದು ದೂರು ನೀಡಿದ್ದರೂ ಜೆ.ಸಿ.ನಗರ ಠಾಣೆ ಇನ್‌ಸ್ಪೆಕ್ಟರ್ ತನಿಖೆ ನಡೆಸಿಲ್ಲ. ಬದಲಾಗಿ ಪತಿ ಶ್ರೀನಿವಾಸ್ ಜೊತೆಗೆ ಸೇರಿ ಅರ್ಜಿದಾರರಿಗೆ ಠಾಣೆಗೆ ಕರೆಯಿಸಿ ದೂರು ಹಿಂಪಡೆಯುವಂತೆ ಬೆದರಿಸಿದರು. ಅದಕ್ಕೆ ಹೆದರದೇ ಇದ್ದಾಗ ಹಣದ ಆಮಿಷವೊಡ್ಡಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದರು.

Rape case against inspector Srinivas: Wife seeks CBI enquiry

ಆದರೆ, ಜೂ.5ರಂದು ಡಿಸಿಪಿ ಮಧ್ಯಪ್ರವೇಶದಿಂದ ಶ್ರೀನಿವಾಸ್ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಮತ್ತು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಯಿತು. ಅದೇ ದಿನ ಜೆ.ಸಿ.ನಗರ ಠಾಣಾ ಇನ್ಸ್‌ಪೆಕ್ಟರ್ ಮತ್ತು ಶ್ರೀನಿವಾಸ ಪಿತೂರಿ ನಡೆಸಿ ವಿರುದ್ಧ ಸುಳ್ಳು ಬ್ಲಾಕ್‌ಮೇಲ್ ಪ್ರಕರಣ ದಾಖಲಿಸಿದರು. ದೂರು ದಾಖಲಿಸಿ ಹಲವು ದಿನ ಕಳೆದರೂ ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಲಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಟಿ.ಆರ್. ಶ್ರೀನಿವಾಸ್ ವಸಂತನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನನಗೆ 2005ರಲ್ಲಿ ಅಲ್ಲಾ ಬಕಾಷ್ ಎಂಬ ವ್ಯಕ್ತಿಯೊಂದಿಗೆ ಮುಬಶಿರಾ ಮದುವೆಯಾಗಿತ್ತು. ಕೌಟುಂಬಿಕ ಕಿರುಕುಳ ಹಿನ್ನೆಲೆಯಲ್ಲಿ ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ನಂತರ ಇಬ್ಬರು ಬೇರೆಯಾದೆವು. ಈ ವೇಳೆ ಪರಿಚಿತರಾದ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಆರ್. ಶ್ರೀನಿವಾಸ್ ಜೊತೆಗೆ ನನ್ನ ಸ್ನೇಹ ಗಾಢವಾಯಿತು. ಉತ್ತಮ ಜೀವನ ಕಲ್ಪಿಸುವುದಾಗಿ ಭರವಸೆ ನೀಡಿ 2013ರಲ್ಲಿ ನನ್ನನ್ನು ಶ್ರೀನಿವಾಸ್ ಮದುವೆಯಾದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಾಲಾ ದಿನಗಳಲ್ಲಿ ಪರಿಚಿತನಾಗಿದ್ದ ಈತ ಪತ್ನಿ ದಾಖಲಿಸಿದ್ದ ಕಿರುಕುಳ ಪ್ರಕರಣದಲ್ಲಿ ಶಿವಾಜಿನಗರ ಠಾಣೆಗೆ ವಿಚಾರಣೆಗೆ ಹಾಜರಾದಾಗ ದೂರುದಾರ ಮಹಿಳೆ ಸಿಕ್ಕಿ ಇಬ್ಬರೂ ಮಾತುಕತೆ ಮಾಡಿ ಮದುವೆಯಾಗಿದ್ದರು. 2014 ರಿಂದ 2022 ರ ಅವಧಿಯಲ್ಲಿ ಶ್ರೀನಿವಾಸ್ ಎಸಗಿರುವ ದೌರ್ಜನ್ಯ ಪ್ರಕರಣಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

Karnataka HC


ಮಿಗಿಲಾಗಿ ತನ್ನ ಹದಿಮೂರು ವರ್ಷದ ಮಗಳ ಮೇಲೆ ಶ್ರೀನಿವಾಸ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಅರೋಪಿಸಲಾಗಿದೆ. ಅಲ್ಲದೇ ದೂರುದಾರ ಮಹಿಳೆ, ಆಕೆಯ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮಹಿಳೆ ಗರ್ಭವತಿಯಾಗಿದ್ದ ವೇಳೆ ಹಲ್ಲೆ ಮಾಡಿ ಹೊಟ್ಟೆಯಲ್ಲಿ ಮಗುವನ್ನು ಶ್ರೀನಿವಾಸ್ ಸಾಯಿಸಿದ್ದ ಎಂದು ಸಂತ್ರಸ್ತ ಮಹಿಳೆ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ನನಗೆ ಎರಡು ಹೆಣ್ಣು ಮಕ್ಕಳಾದವು ಎಂದು ನನ್ನ ಪತಿ ಹಿಂಸೆ ನೀಡಿದ್ದ. ಹೀಗಾಗಿ ಆತನಿಂದ ವಿಚ್ಛೇಧನ ಪಡೆದಿದ್ದೆ. ಶಾಲಾ ದಿನಗಳಲ್ಲಿ ಪರಿಚಿತ ಶ್ರೀನಿವಾಸ್ ನನಗೆ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿದ್ದ. ಆನಂತರ ನನ್ನ ಸಹೋದರಿ ಕೌಟುಂಬಿಕ ಜಗಳ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ಇದನ್ನು ಪ್ರಶ್ನಿಸಿದ್ದ ನನ್ನ ಮೇಲೆ ಪದೇ ಪದೇ ಹಲ್ಲೆ ಮಾಡಿದ್ದ. ನಾನು ಗರ್ಭವತಿಯಾಗಿದ್ದ ವೇಳೆ ಶ್ರೀನಿವಾಸ್ ಹಲ್ಲೆ ಮಾಡಿದ್ದರಿಂದ ನನಗೆ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು.

Recommended Video

HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada

ಅಲ್ಲದೆ, ಆರಂಭದಲ್ಲಿ ದಾಂಪತ್ಯ ಜೀವನ ಚೆನ್ನಾಗಿತ್ತು. ನಂತರ ಶ್ರೀನಿವಾಸ ಅಮಾನವೀಯವಾಗಿ ನಡೆದುಕೊಳ್ಳಲು ಆರಂಭಿಸಿದರು. ನೀಲಿ ಚಿತ್ರ ನೋಡುವಂತೆ ಒತ್ತಾಯಿಸುತ್ತಿದ್ದರು. ಮನೆಯಲ್ಲಿಯೇ ನೀಲಿ ಚಿತ್ರ ನೋಡುತ್ತಿದ್ದರು. ಅದನ್ನು ಪ್ರಶ್ನಿಸಿದಾಗ ಕೈಗೆ ಹಗ್ಗ ಕಟ್ಟಿ ಹಲ್ಲೆ ಮಾಡಿದರು. ಸಾಲದೆ ಗಂಡನೊಂದಿಗೆ ಕೌಟುಂಬಿಕ ಕಲಹ ಹೊಂದಿರುವ ನನ್ನ ತಂಗಿಯ ಜತೆಗೆ ಅನೈತಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣರಾಗಿದ್ದಾರೆ. ಇನ್ನೂ ನಾನು ಮನೆಯಲ್ಲಿ ಇಲ್ಲದ ವೇಲೆ ನನ್ನ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮುಬಶಿರಾ ಅರ್ಜಿಯಲ್ಲಿ ದೂರಿದ್ದಾರೆ.

English summary
Rape case against inspector Srinivas, his Wife seeks CBI enquiry. JC Nagar police Registered rape case against Police sub inspector Srinivas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X