• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!

|
   ಕಾಶ್ಮೀರ ವಿಚಾರದಲ್ಲಿ ಟ್ರಂಪ್ ಮಧ್ಯಸ್ತಿಕೆ | Donald Trump | Kashmir | India | Oneindia kannada

   ಬೆಂಗಳೂರು, ಜನವರಿ 20: ಒಂಟಿಯಾಗಿ ಖಾಸಗಿ ಟ್ಯಾಕ್ಸಿ, ಕ್ಯಾಬ್‌ಗಳ ಸೇವೆಯನ್ನು ಪಡೆಯುವ ಮಹಿಳೆಯರು ಈ ಸ್ಟೋರಿಯನ್ನು ಒಮ್ಮೆ ಓದಲೇಬೇಕಾಗಿದೆ. ಭದ್ರತೆ ಮತ್ತು ಖಾಸಗಿತನಕ್ಕೆ ಹೆಸರಾಗಬೇಕಿದ್ದ ಖಾಸಗಿ ಕ್ಯಾಬ್‌ಗಳು ಇಂದು ಒಂಟಿ ಮಹಿಳೆಯರಿಗೆ ಕಂಟಕವಾಗುತ್ತಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

   ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆಯನ್ನು, ಓಲಾ ಕ್ಯಾಬ್‌ಗೆ ಹತ್ತಿಸಿಕೊಂಡಿದ್ದ ಚಾಲಕ ಹಾಗೂ ಇಬ್ಬರು ದುಷ್ಕರ್ಮಿಗಳು ಆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಬೆತ್ತಲೆ ಮಾಡಿ, ನಡುರಾತ್ರಿಯಲ್ಲಿಯೇ ಕಾರಿನಿಂದ ಹೊರದಬ್ಬಿ ಹೋಗಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಂಗಳೂರು ಹೊರವಲಯದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

   ಅಪರಿಚಿತರಿಗೆ ಸಹಾಯ ಮಾಡುವ ಮುನ್ನಾ ಎಚ್ಚರ: ಬೆಂಗಳೂರಲ್ಲಿ ನಡೆದಿದೆ ಹೀಗೊಂದು ಘಟನೆ

   ""ಈ ಕರಾಳ ಘಟನೆ ಕುರಿತು ಸಂತ್ರಸ್ತ ಮಹಿಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ಪ್ರಗತಿಯಲ್ಲಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು'' ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ "ಒನ್‌ಇಂಡಿಯಾ ಕನ್ನಡಕ್ಕೆ' ತಿಳಿಸಿದ್ದಾರೆ.

   ಆ ಕರಾಳ ರಾತ್ರಿಯಲ್ಲಿ ಆಗಿದ್ದಾದರು ಏನು?

   ಆ ಕರಾಳ ರಾತ್ರಿಯಲ್ಲಿ ಆಗಿದ್ದಾದರು ಏನು?

   ಜನವರಿ 16 ರಂದು ಉಗಾಂಡ ಮೂಲದ 25 ವರ್ಷದ ಸಂತ್ರಸ್ತ ಮಹಿಳೆ ದೆಹಲಿಯಿಂದ ಕಿಡ್ನಿ ಸಂಬಂಧಿತ ಕಾಯಿಲೆಗೆ ನಗರದ ಕಮ್ಮನಹಳ್ಳಿಯಲ್ಲಿರುವ ಸಿಟಿಲೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಚಿಕಿತ್ಸೆ ಪಡೆದ ಬಳಿಕ ಹತ್ತಿರದಲ್ಲಿರುವ ಸ್ನೇಹಿತರ ಮನೆಗೆ ಹೋಗಲು ಕಮ್ಮನಹಳ್ಳಿಯಿಂದ ಆ ಮಹಿಳೆ ರಾತ್ರಿ 10 ಕ್ಕೆ ಓಲಾ ಕ್ಯಾಬ್ ಬುಕ್‌ ಮಾಡಿದ್ದರು.

   ಕಾರಿನಲ್ಲಿ ಕಾಮುಕರು

   ಕಾರಿನಲ್ಲಿ ಕಾಮುಕರು

   ಸ್ಥಳಕ್ಕೆ ಆಗಮಿಸಿದ ಓಲಾ ಕ್ಯಾಬ್‌ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದ. ಈ ವೇಳೆ ಸಹ ಪ್ರಯಾಣಿಕರ ಸೋಗಿನಲ್ಲಿ ಇಬ್ಬರು ಯುವಕರು ಓಲಾ ಕ್ಯಾಬ್ ಚಾಲಕನ ಜೊತೆಗೂಡಿದ್ದಾರೆ. ಮಹಿಳೆಗೆ ಗೊತ್ತಾಗದಂತೆ ಮಾರ್ಗ ಬದಲಿಸಿದ ಕ್ಯಾಬ್ ಚಾಲಕ ನಗರದ ಹೊರವಲಯಕ್ಕೆ ಕರೆದೊಯ್ದು ಸುತ್ತಾಡಿಸಿದ್ದಾನೆ. ನಂತರ ಆ ಮಹಿಳೆಯನ್ನು ದುರುಳರು ಪುಸಲಾಯಿಸಲು ನೋಡಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ ಚಾಕುವಿನಿಂದ ಹೆದರಿಸಿ ಆಕೆಯ ಬಳಿಯಿದ್ದ ಮೊಬೈಲ್, ಪರ್ಸ್ ಹಾಗೂ ಹಣ ಕಿತ್ತುಕೊಂಡಿದ್ದಾರೆ.

   ರ್‍ಯಾಪಿಡೋ ಬಳಸುವ ಯುವತಿಯರೇ ಎಚ್ಚರ: ಬೆಂಗಳೂರಲ್ಲಿ ಹೀಗೊಂದು ಘಟನೆ

   ಬೆತ್ತಲು ಮಾಡಿ ನೂಕಿದರು!

   ಬೆತ್ತಲು ಮಾಡಿ ನೂಕಿದರು!

   ರಾತ್ರಿಯಿಡಿ ಉಗಾಂಡಾದ ಮಹಿಳೆಯ ಮೇಲೆ ಅಟ್ಟಹಾಸ ಮೆರೆದ ದುರುಳರು, ಜ 17 ಮುಂಜಾನೆ 4.15ರ ಸುಮಾರಿಗೆ ದೊಡ್ಡಬಳ್ಳಾಪುರ ಸಮೀಪದ ಆಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬೆತ್ತಲೆ ಮಾಡಿ, ಕಾರಿನಿಂದ ಕೆಳಗೆ ನೂಕಿ ಪರಾರಿಯಾಗಿದ್ದಾರೆ. ಬಳಿಕ ಮಹಿಳೆ ಸಮೀಪದಲ್ಲಿರುವ ತೋಟದ ಮನೆಯ ಬಳಿ ಹೋಗಿ ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಈ ವೇಳೆ ತೋಟದ ಮನೆಯ ಸದಸ್ಯರು ಎದ್ದು ಬೆತ್ತಲೆಯಾಗಿದ್ದ ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

   ತನಿಖೆ ಪ್ರಗತಿಯಲ್ಲಿ

   ತನಿಖೆ ಪ್ರಗತಿಯಲ್ಲಿ

   ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದು ಆಕೆಯ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಪಿ ಕ್ಯಾಬ್‌ ಚಾಲಕ ಹಾಗೂ ಇತರ ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯ, ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.

   ಬೌನ್ಸ್ ಸಹಾಯದೊಂದಿಗೆ ಬೈಕ್ ಕಳ್ಳರ ಗ್ಯಾಂಗ್ ಬಂಧನ: ಭಾಸ್ಕರ್ ರಾವ್

   ಸೋನಂ ಕಪೂರ್‌ಗೂ ಕೆಟ್ಟ ಅನುಭವ

   ಸೋನಂ ಕಪೂರ್‌ಗೂ ಕೆಟ್ಟ ಅನುಭವ

   ಇತ್ತೀಚೆಗೆ ಲಂಡನ್‌ಗೆ ಭೇಟಿ ನೀಡಿದ್ದ ಬಾಲಿವುಡ್ ನಟಿ ಸೋನಂ ಕಪೂರ್‌ ಕೂಡ ಊಬರ್ ಟ್ಯಾಕ್ಸಿ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ, ಟ್ವಿಟ್ಟರ್‌ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು. ಒಂಟಿ ಮಹಿಳೆಯರು ಓಲಾ, ಊಬರ್‌ನಂತಹ ಕ್ಯಾಬ್‌ಗಳ ಸಹವಾಸ ಬಿಟ್ಟು ಸ್ಥಳೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಬೇಕು ಎಂದು ಮನವಿ ಮಾಡಿದ್ದರು.

   ಓಲಾ ಎಷ್ಟು ಸುರಕ್ಷಿತ?

   ಓಲಾ ಎಷ್ಟು ಸುರಕ್ಷಿತ?

   ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಉಗಾಂಡ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಿಂದ ಓಲಾ ಕ್ಯಾಬ್‌ಗಳು ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಬಗ್ಗೆ ಓಲಾ ಸಂಸ್ಥೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

   English summary
   Rape attempt On Foreign Lady In Bengaluru By Ola Driver. A complaint lodged about this in Doddaballapura Police Station. Ola driver and 2 others are escaped. Police investigation going On By Bengaluru Rural Police.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more