• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಪಯಣಕ್ಕೆ 10ನೇ ವರ್ಷದ ಸಂಭ್ರಮ , ಕಲಾಕ್ಷೇತ್ರದಲ್ಲಿ ಗುಲಾಬಿ ಗ್ಯಾಂಗ್ 2

|

ಬೆಂಗಳೂರು, ಜುಲೈ 29: ರಂಗಪಯಣಕ್ಕೆ 10ನೇ ವರ್ಷದ ಸಂಭ್ರಮ, 2009 ಜುಲೈ 31ರಂದು ಅಧಿಕೃತವಾಗಿ ತನ್ನ ಸಾಂಸ್ಕೃತಿಕ ಚಟುವಟಿಕೆ ಆರಂಭಿಸಿದ 'ರಂಗಪಯಣ' ತಂಡಕ್ಕೀಗ 10ನೇ ವರ್ಷದ ಸಂಭ್ರಮ. "ಪ್ರತಿ ವರ್ಷ ಒಂದೊಂದು ಹೊಸ ನಾಟಕದೊಂದಿಗೆ ವರ್ಷವನ್ನು ಆರಂಭಿಸುವ ರೂಢಿ ನಮ್ಮ ರಂಗಪಯಣ ತಂಡದ್ದು. ಅದರಂತೆ ಈ ವರ್ಷವು ನಾವು ಹೊಸ ನಾಟಕದೊಂದಿಗೆ 10ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷ ಜುಲೈ 31ರಂದು ರವೀಂದ್ರ ಕಲಾಕ್ಷೇತ್ರ ಗುಲಾಬಿ ಗ್ಯಾಂಗ್ 2 ಪ್ರದರ್ಶನವಿರಲಿದೆ" ಎಂದು ತಂಡದ ಮುಖ್ಯಸ್ಥರಾದ ನಯನಾ ಸೂಡ ಹೇಳಿದರು.

ರವೀಂದ್ರ ಕಲಾಕ್ಷೇತ್ರ ಬಂದ್ ಆಗುತ್ತಾ? ಸಮಸ್ಯೆ ಏನು?

ರಂಗಪಯಣದ ಬಗ್ಗೆ ಮಾತನಾಡುತ್ತಾ, "ಎಂದಿನಂತೆ ಅದೇ ನಿರೀಕ್ಷೆ ಹುಮ್ಮಸ್ಸು ನಮ್ಮದು. ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಕೊಂಡ ರಂಗಪಯಣ ಅಲ್ಲಿನ ಮಕ್ಕಳ ಶಿಬಿರ, ನಾಟಕಗಳ ಮೂಲಕ ಸಕ್ರಿಯವಾಗಿತ್ತು. 8 ಜನರಲ್ಲಿ ಪ್ರಾರಂಭವಾದ ತಂಡ ಇದೀಗ 60ಕ್ಕೂ ಹೆಚ್ಚು ಕಲಾವಿದರು ಒಡಗೂಡಿ ಸಾಮಾಜಿಕವಾಗಿ ನಾಟಕಗಳನ್ನು ಪ್ರಯೋಗಿಸಿಕೊಂಡು ಬಂದಿದೆ. ಮಕ್ಕಳ ವಿದ್ಯಾಭ್ಯಾಸ ಕಲಾವಿದರ ಆರೋಗ್ಯ ಸಮಸ್ಯೆ ಇಂತಹ ಕೈಂಕರ್ಯಕ್ಕೆ ತಂಡವು ಟಿಕೆಟ್ ಶೋಗಳ ಮೂಲಕ ಅವರ ಜೊತೆಗಿರುವುದಕ್ಕೆ ನಮಗೆ ಖುಷಿ ಮತ್ತು ಹೆಮ್ಮೆ ಇದೆ" ಎಂದರು.

ರಂಗಪಯಣದ ಹಲವು ಯಶಸ್ವಿ ಪ್ರಯೋಗಗಳು

ರಂಗಪಯಣದ ಹಲವು ಯಶಸ್ವಿ ಪ್ರಯೋಗಗಳು

ಇದಕ್ಕೂ ಮುಂಚೆ 'ಶ್ರದ್ಧಾ', 'ಚಂದ್ರಗಿರಿ ತೀರದಲ್ಲಿ', 'ಮಾದರಿ ಮಾದಯ್ಯ', 'ಭೂಮಿ', 'ಒಂದಾನೊಂದು ಕಾಲದಲ್ಲಿ', 'ಬದುಕು ಜಟಕಾ ಬಂಡಿ' ಇನ್ನು ಮುಂತಾದ ನಾಟಕಗಳು/ಬೀದಿ ನಾಟಕಗಳನ್ನು ಪ್ರಯೋಗಿಸಿದ್ದ ರಂಗಪಯಣ ಇಲ್ಲಿಯವರೆಗೂ ಹಲವಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ರಂಗಭೂಮಿಯೆಂಬ ಕ್ರಿಯಾಶೀಲವಾದ ವೇದಿಕೆಯನ್ನು, ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವಂತೆ ಬಳಸುವ ಉದ್ದೇಶ ಈ ಹಿಂದೆ ಸಾಕಷ್ಟು ಹಿರಿಯರು ಮಾಡಿದ್ದಾರೆ.

32 ಪ್ರದರ್ಶನ ಕಂಡಿರುವ ಗುಲಾಬಿ ಗ್ಯಾಂಗ್

32 ಪ್ರದರ್ಶನ ಕಂಡಿರುವ ಗುಲಾಬಿ ಗ್ಯಾಂಗ್

ಆ ಪರಂಪರೆಯನ್ನು ಕಾಪಾಡುವ ಹಾಗೂ ಮುಂದುವರೆಸುವ ಸಣ್ಣ ಜವಾಬ್ದಾರಿ ನಮ್ಮದು ಎಂಬ ಭಾವನೆ ಮತ್ತು ನಮ್ಮ ಸ್ಪೂರ್ತಿ. ಈ ಹಿಂದೆ ಅಂದರೆ 2017ರಲ್ಲಿ ಮಹಿಳಾವಾದಿ ಹಾಗೂ ಪ್ರಗತಿಪರ ಹೋರಾಟಗಾರ್ತಿ ಸಂಪತ್ ಪಾಲ್ ದೇವಿ ಅವರ ಸಂಘಟನೆ ಗುಲಾಬಿ ಗ್ಯಾಂಗ್ನಿಂದ ಪ್ರಭಾವಿತರಾದ ನಾವು ಇವರ ಹೋರಾಟವನ್ನು ಕನ್ನಡ ನಾಡಿನ ಜನಕ್ಕೂ ತಲುಪಿಸುವ ಪ್ರಯತ್ನದಲ್ಲಿ

ಹಾಗೂ ನಮ್ಮಲ್ಲಿನ ಶೋಷಿತ ಮಹಿಳೆಯರಲ್ಲಿ ಸ್ಪೂರ್ತಿ ತುಂಬಿದ ಉದ್ದೇಶವನ್ನು ನಮ್ಮ ತಂಡಹೊಂದಿದ್ದು, ಗುಲಾಬಿ ಗ್ಯಾಂಗ್ ಹೆಸರಿನಲ್ಲಿ ನಾಟಕವನ್ನು ಪ್ರಯೋಗಿಸಿ 32ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಯಶಸ್ವಿಯಾದೆವು

ಬಾಂಡ ಜಿಲ್ಲೆಯ ಒಬ್ಬ ಅನಕ್ಷರಸ್ಥ ಮಹಿಳೆ

ಬಾಂಡ ಜಿಲ್ಲೆಯ ಒಬ್ಬ ಅನಕ್ಷರಸ್ಥ ಮಹಿಳೆ

ಈಗ ಗುಲಾಬಿ ಗ್ಯಾಂಗ್ ಭಾಗ -2 ನಾಟಕವನ್ನು ಸಿದ್ಧಪಡಿಸಿ ಪ್ರಯೋಗಿಸಲು ಹೊರಟ್ಟಿದ್ದೇವೆ.

ಸಂಪತ್ ಪಾಲ್ ದೇವಿ ಉತ್ತರ ಪ್ರದೇಶ ರಾಜ್ಯದ, ಬಾಂಡ ಜಿಲ್ಲೆಯ ಒಬ್ಬ ಅನಕ್ಷರಸ್ಥ ಮಹಿಳೆ. ತನ್ನ ಸುತ್ತಮುತ್ತಲಿನ ಸ್ತ್ರೀ ಶೋಷಣೆಯ ವಿರುದ್ಧ ತಿರುಗಿ ಬಿದ್ದ ಈಕೆ, ಮುಂದೆ ತನ್ನ ಸುತ್ತಮುತ್ತಲಿನ ಅನೇಕ ಸ್ತ್ರೀಯರಿಗೆ ಸ್ಪೂರ್ತಿಯಾದರು. ಹಾಗೆ ಇವರ ಈ ಹೆಜ್ಜೆ ಮುಂದೆ ಗುಲಾಬಿ ಗ್ಯಾಂಗ್ ಎಂಬ ಸಶಕ್ತ ಸಂಘಟನೆಯೊಂದರ ಬೆಳವಣಿಗೆಗೂ ಕಾರಣವಾಯಿತು.

ರಾಜ್ಗುರು ಹೊಸಕೋಟೆ ನಿರ್ದೇಶನ

ರಾಜ್ಗುರು ಹೊಸಕೋಟೆ ನಿರ್ದೇಶನ

ಸತತ ಮೂರು ದಶಕಗಳಿಂದ ಮಹಿಳಾಪರವಾದ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಂಪತ್ ಪಾಲ್ ದೇವಿಯವರ ಆಶಯವನ್ನು ಕನ್ನಡ ನಾಡಿಗೂ ತಲುಪಿಸಿ ಮಹಿಳಾ ಸಬಲೀಕರಣಕ್ಕೆ ಕಿರಿದಾದ ಕೊಡುಗೆಯಾಗುವತ್ತ ಸಣ್ಣ ಹೆಜ್ಜೆ ಈ ನಾಟಕದ್ದು. ಈ ನಾಟಕದ ರಂಗರೂಪ ಪ್ರವೀಣ್ ಸೂಡ ಅವರದ್ದು, ರಂಗ ವಿನ್ಯಾಸ-ಸಂಗೀತ-ನಿದೇರ್ಶನ ರಾಜ್ಗುರು ಹೊಸಕೋಟೆ ಅವರದ್ದು, ನಿರ್ಮಾಣ ಹಾಗೂ ಅಭಿನಯ ರಂಗಪಯಣ ತಂಡದ್ದು. ಎಂದಿನಂತೆ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ ರಂಗಪಯಣ.

English summary
Rangapayana team celebrating 10th anniversary, Gulabi Gang 2 play will be staged at Ravindra Kalashetra, Bengaluru on July 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more