ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿಯವರ ನೆನಪಿನಲ್ಲಿ - ರಂಗ ಯುಗಾದಿ

By Mahesh
|
Google Oneindia Kannada News

ಬೆಂಗಳೂರು, ಮಾ.20: ರಂಗ ಶಂಕರದಲ್ಲಿ ಅನಂತಮೂರ್ತಿಯವರ ನೆನಪಿನಲ್ಲಿ - ರಂಗ ಯುಗಾದಿ ಆಚರಿಸಲಾಗುತ್ತಿದೆ. ನಾಟಕ, ಕತೆ, ಕಾವ್ಯ, ವಾಚನ, ಸಂವಾದ, ಗೆಳೆಯರು, ಹರಟೆ, ಹಬ್ಬದ ಊಟ, ಸಾಹಿತ್ಯ, ಇತ್ಯಾದಿಗಳ ಸಂಭ್ರಮವನ್ನು ಕಂಡು ಆನಂದಿಸಬಹುದು.

ಯುಗಾದಿಯನ್ನು ವಿಭಿನ್ನ ರೀತಿಯಲ್ಲಿ, ರಂಗ ಸಂವೇದನೆಯೊಂದಿಗೆ ಆಚರಿಸುವುದು ರಂಗ ಶಂಕರ ಪಾಲಿಸಿಕೊಂಡು ಬಂದಿರುವ ಒಂದು ಸಂಪ್ರದಾಯ. ನಾಟಕಗಳಲ್ಲದೇ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಾರಗಳನ್ನೂ ಒಳಗೊಂಡ ಒಂದು ಸಂಭ್ರಮವೇ ಈ ರಂಗ ಯುಗಾದಿ.

ಬೆಂಗಳೂರಿನ ಜನತೆಯನ್ನು ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿ ಅದರ ಮೂಲಕ ರಂಗ ಸಂವೇದನೆಯನ್ನು ಹಂಚಿಕೊಳ್ಳುವುದು ರಂಗ ಯುಗಾದಿಯ ಹಿಂದಿನ ಉದ್ದೇಶ. [ಯುವ ಸಮಸ್ಯೆಗಳ ಕುರಿತ ಮರ್ಯಾದೆ ಪ್ರಶ್ನೆ ನಾಟಕ]

ಈ ಹಿಂದೆ ಚಂದ್ರಶೇಖರ ಕಂಬಾರರ, ಪಿ ಲಂಕೇಶರ, ಪೂರ್ಣಚಂದ್ರ ತೇಜಸ್ವಿಯರ ಹೆಸರಿನಲ್ಲಿ ರಂಗ ಯುಗಾದಿಯನ್ನು ಆಚರಿಸಿದ್ದಲ್ಲದೇ, ಜಾನಪದ ನಾಟಕ ಪ್ರಕಾರಗಳು, ಕಾಮೆಡಿ ನಾಟಕಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ನೆನಪಿನಲ್ಲಿ ಕೂಡಾ ರಂಗ ಯುಗಾದಿಯನ್ನು ಆಚರಿಸಿದ್ದೇವೆ.

ಈ ಸಂಪ್ರದಾಯದ ಮುಂದಿನ ಹೆಜ್ಜೆಯಾಗಿ ಈ ವರ್ಷ ಕನ್ನಡದ ಹಿರಿಯ ಚಿಂತಕರಾಗಿದ್ದ, ಮಾರ್ಗದರ್ಶಿಗಳಾಗಿದ್ದ ಅನಂತಮೂರ್ತಿಯವರ ನೆನಪಿನಲ್ಲಿ ರಂಗ ಯುಗಾದಿಯನ್ನು ಆಚರಿಸಲಾಗುವುದು ಎಂದು ರಂಗಶಂಕರ ಪ್ರಕಟಿಸಿದೆ.

Ranga Ugadi Rangashankara In memory of UR Ananthamurthy

ಅಂದಿನ ಕಾರ್ಯಕ್ರಮ ವಿವರಗಳು ಹೀಗಿವೆ.

* ಬೆಳಿಗ್ಗೆ 10.00 : ಅನಂತ ಸಂವಾದ ಜಯಂತ್ ಕಾಯ್ಕಿಣಿಯವರು ಅನಂತಮೂರ್ತಿ ಅವರೊಂದಿಗೆ ನಡೆಸಿದ ಸಂವಾದದ ಚಿತ್ರ.

* ಬೆಳಿಗ್ಗೆ 11.00: ನಾಟಕ ಮೌನಿ ಪ್ರಯೋಗ ರಂಗ, ನಿರ್ದೇಶನ: ಕೆ ವಿ ನಾಗರಾಜಮೂರ್ತಿ

* ಮದ್ಯಾಹ್ನ 12.30 : ಅನಂತ ಕಾವ್ಯವಾಚನ: ಟಿ ಎನ್ ಸೀತಾರಾಮ್, ಎಸ್ ದಿವಾಕರ್, ವಿವೇಕ್ ಶಾನಬಾಗ್, ಜೋಗಿ, ಜಿ ಎನ್ ಮೋಹನ್, ಪ್ರತಿಭಾ
ನಂದಕುಮಾರ್, ಮಮತಾ ಸಾಗರ್, ಜಯಲಕ್ಷ್ಮಿ ಪಾಟೀಲ್, ಸಂಧ್ಯಾರಾಣಿ, ರಾಜೇಂದ್ರ ಪ್ರಸಾದ್, ಸ್ಫೂರ್ತಿ ಹರವು.

* ಮಧ್ಯಾಹ್ನ 3.30 : ನಾಟಕ ಸೂರ್ಯನ ಕುದುರೆ ವೇಷ ರಂಗ ತಂಡ, ನಿರ್ದೇಶನ: ಪ್ರಶಾಂತ್ ಸಿದ್ಧಿ

* ಸಂಜೆ 5.00 : ಅನಂತ ಕಥಾವಾಚನ ಕತೆ: ಸಂಯೋಗ ಕಿರಣ್‍ವಟಿ ಗೆಳೆಯರು
* ಸಂಜೆ 6.00 : ಅನಂತ ಜೀವನ ಜಯಂತ್ ಕಾಯ್ಕಿಣಿ - ಸುರಗಿಯಿಂದ ಆಯ್ದ ಭಾಗದ ಓದು.

* ಸಂಜೆ 7.30 ನಾಟಕ ಅವಸ್ಥೆ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾ, ನಿರ್ದೇಶನ: ಪ್ರಕಾಶ್ ಬೆಳವಾಡಿ.

ಕಾರ್ಯಕ್ರಮದ ನಿರೂಪಣೆ :
ಸಂಯುಕ್ತ ಪುಲಿಗಲ್.

ಟಿಕೆಟ್ ಗಳು www.bookmyshow.com ಹಾಗೂ ರಂಗ ಶಂಕರ ದಲ್ಲಿ ದೊರೆಯುತ್ತವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಂಗ ಶಂಕರ: 99722 55400

ಒನ್ ಇಂಡಿಯಾ ಸುದ್ದಿ

English summary
Ranga Ugadi at Rangashankara, JP Nagar, Bengaluru In memory of UR Ananthamurthy. Ranga ugadi is a tradition at Ranga Shankara On March 22,2015 special drama, poem recital, folk art performance will be staged. Well-known theatre directors, actors and troupes participate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X