ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ 12ರಿಂದ ರಂಗ ಶಂಕರ ಯುವ ನಾಟಕೋತ್ಸವ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ರಂಗಭೂಮಿ ಜೀವಂತವಾಗಿರಬೇಕೆಂದಲ್ಲಿ ಅದು ಅಂದಂದಿಗೆ ಪ್ರಸ್ತುತವಾಗಿರಲೇ ಬೇಕಾದದ್ದು ಅನಿವಾರ್ಯ. ಈ ನಿಟ್ಟಿನಲ್ಲಿ ರಂಗಶಂಕರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಡಿಸೆಂಬರ್ 12ರಿಂದ ನಡೆಯಲಿರುವ ಯುವ ನಾಟಕೋತ್ಸವವೂ ಸೇರಿದೆ.

ರಂಗಭೂಮಿ ಪ್ರಸ್ತುತವಾಗಿರಲೇ ಬೇಕಾದಲ್ಲಿ ಅಂದಂದಿನ ಪೀಳಿಗೆಯ ರಂಗಕರ್ಮಿಗಳನ್ನು, ನಾಟಕಕಾರರನ್ನು, ಪ್ರೇಕ್ಷಕರನ್ನು ಒಳಗೂಡಿಸಿಕೊಂಡು ಬೆಳೆಯ ಬೇಕಾಗುತ್ತದೆ. ರಂಗಭೂಮಿಯನ್ನು ಇಂದಿನ ತಲೆಮಾರಿಗೆ ತಲುಪಿಸುವುದು ರಂಗ ಶಂಕರದ ಬಹು ದೊಡ್ಡ ಕನಸು. ಈ ದಿಸೆಯಲ್ಲಿ ರಂಗ ಶಂಕರ ಹಲವು ಹತ್ತು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ.

ಟೈಟಾನ್ ಕಂಪನಿಯ ಸಹಕಾರದೊಂದಿದೆ ರಂಗ ಶಂಕರ ನಡೆಸುತ್ತಿರುವ ಮೇಕಿಂಗ್ ಥಿಯೇಟರ್ ಆ ಕನಸುಗಳಲ್ಲಿ ಒಂದು. ಈ ಯೋಜನೆಗೆ ಹಲವು ಹಂತಗಳಿವೆ.

ವಸತಿ-ಸಹಿತ ನಿರ್ದೇಶನ ತರಬೇತಿ ಶಿಬಿರ: ಜಿಲ್ಲೆಗೊಬ್ಬರಂತೆ 30 ವರ್ಷ ಮೀರದ ಯುವ ನಿರ್ದೇಶಕರನ್ನು ಆರಿಸುವುದು. ನಾಲ್ಕು ವಾರಗಳ ತರಬೇತಿ ಶಿಬಿರವನ್ನು ಬೆಂಗಳೂರಿನಲ್ಲಿ ನಡೆಸುವುದು. ಭಾರತ ರಂಗಭೂಮಿಯ ದಿಗ್ಗಜರು ಈ ಶಿಬಿರವನ್ನು ನಡೆಸಿಕೊಡುವುದು.

ನಾಟಕ ಪ್ರದರ್ಶನಗಳು :
ಒಂದು ನಿಗದಿತ ತಿಂಗಳಿನಲ್ಲಿ ಕರ್ನಾಟಕದಾದ್ಯಂತ ನಾಟಕಗಳು ಪ್ರದರ್ಶನಗೊಳ್ಳುತ್ತವೆ.ರಂಗ ಶಂಕರದ ಒಂದು ತಜ್ಞರ ಸಮಿತಿ ಈ ಎಲ್ಲಾ ನಾಟಕಗಳನ್ನು ವೀಕ್ಷಿಸುತ್ತದೆ. ಸಮಿತಿ ಆರು ನಾಟಕಗಳನ್ನು ಆಯ್ಕೆ ಮಾಡುತ್ತದೆ.
ನಾಟಕಗಳ ಈ ಪ್ರಸ್ತುತಿಗೆ ತಲಾ ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಡಿಸೆಂಬರ್ 12ರಂದು ಮದುವೆ ಹೆಣ್ಣು

ಡಿಸೆಂಬರ್ 12ರಂದು ಮದುವೆ ಹೆಣ್ಣು

ಮದುವೆ ಹೆಣ್ಣು
ಕನ್ನಡ, 120 ನಿಮಿಷಗಳು
ರಚನೆ: ಎಚ್ ಎಸ್ ಶಿವಪ್ರಕಾಶ್
ನಿರ್ದೇಶನ : ರೋಹಿತ್ ಬೈಕಾಡಿ
ಭೂಮಿಕಾ, ಹಾರಾಡಿ

ಆಟದೊಳಗಿನ ಆಟ ಮತ್ತು ಓಟದೊಂದಿಗಿನ ಸಂಘರ್ಷ - ಇದು ಈ ನಾಟಕದ ಸ್ವರೂಪ. ಈಗಾಗಲೇ ನಡೆದು ಹೋಗಿರುವ ಗಂಡಿನ ಬದುಕಿನ ದುರಂತದ ಆಟವನ್ನು ಈ ನಾಟಕ ರೂಪಿಸುತ್ತದೆ.

***

ನಾಟಕಗಳ ಆಯ್ಕೆ : ತರಬೇತಿ ಪಡೆದ ಪ್ರತಿಯೊಬ್ಬ ನಿರ್ದೇಶನೂ ಒಂದೊಂದು ನಾಟಕವನ್ನು ಆಯ್ದು ಕೊಳ್ಳಬೇಕು. ಆಯ್ದ ನಾಟಕದ ಬಗ್ಗೆ ತಮ್ಮ ತಯಾರಿಯನ್ನು ಪ್ರಸ್ತುತಿ ಪಡಿಸಬೇಕು. ಆಯ್ದ ನಾಟಕವನ್ನು ತಮ್ಮ ತಮ್ಮ ಊರುಗಳಲ್ಲಿ ಈ ನಿರ್ದೇಶಕರು ಸೂಕ್ತವಾದ ಅಭ್ಯಾಸದ ನಂತರ ಪ್ರಸ್ತುತ ಪಡಿಸಬೇಕು.

ಡಿಸೆಂಬರ್ 13ರಂದು ಇನ್ನೊಂದು ಸಭಾಪರ್ವ

ಡಿಸೆಂಬರ್ 13ರಂದು ಇನ್ನೊಂದು ಸಭಾಪರ್ವ

ಡಿಸೆಂಬರ್ 13

ಇನ್ನೊಂದು ಸಭಾಪರ್ವ
ಕನ್ನಡ, 80 ನಿಮಿಷಗಳು
ರಚನೆ: ಲಲಿತಾ ಸಿದ್ದಬಸವಯ್ಯ
ನಿರ್ದೇಶನ : ಶ್ರೀನಿವಾಸಮೂರ್ತಿ
ಸ್ವರ ಭಾರತಿ ಕಲಾಕೇಂದ್ರ, ತುಮಕೂರು

ಮಹಾಭಾರತದ ಪಾತ್ರಗಳನ್ನು ಪುನರ್ ವ್ಯಾಖ್ಯಾನಿಸಿದ ಒಂದು ವಿಶಿಷ್ಟ ನಾಟಕ. ದ್ರೌಪದಿ, ಸುಭದ್ರಾ, ಹಿಡಿಂಬೆ ಇತ್ಯಾದಿ ಪಾತ್ರಗಳನ್ನು ಹೊಸ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ.

ಡಿಸೆಂಬರ್ 14 -ವಿಠ್ಠಲ

ಡಿಸೆಂಬರ್ 14 -ವಿಠ್ಠಲ

ಡಿಸೆಂಬರ್ 14

ವಿಠ್ಠಲ
ಕನ್ನಡ, 95 ನಿಮಿಷಗಳು
ರಚನೆ: ವಿಜಯ ತೆಂಡೂಲ್ಕರ್ / ಕಾರ್ತಿಕ್ ವಿ ಗೌತಮ್
ನಿರ್ದೇಶನ : ಕಾರ್ತಿಕ್ ವಿ ಗೌತಮ್
ರಂಗಶಿಕ್ಷಣ ಕೇಂದ್ರ, ನೆಲಮಂಗಲ

ಮನುಷ್ಯನ ಸ್ವಾರ್ಥ, ಸಾರ್ವಭೌಮತೆಯ ಭ್ರಮೆಯನ್ನು ವಿಡಂಬನೆಯಿಂದ ಅನಾವರಣಗೊಳಿಸುತ್ತಾ, ಮಾನವೀಯ ಸಂಬಂಧಗಳ ನಡುವೆ ಒಂದು ಅಮಾನುಷ ಶಕ್ತಿಯನ್ನು ಪರಿಚಯಿಸುವ ಮೂಲಕ ಮನುಷ್ಯನ ಮಿತಿಯನ್ನೇ ಪ್ರಶ್ನಿಸುವ ನಾಟಕ.

ಡಿಸೆಂಬರ್ 15 ಕಕೇಶಿಯನ್ ಚಾಕ್ ಸರ್ಕಲ್

ಡಿಸೆಂಬರ್ 15 ಕಕೇಶಿಯನ್ ಚಾಕ್ ಸರ್ಕಲ್

ಡಿಸೆಂಬರ್ 15
ಕಕೇಶಿಯನ್ ಚಾಕ್ ಸರ್ಕಲ್
ಕನ್ನಡ, 110 ನಿಮಿಷಗಳು
ರಚನೆ: ಬರ್ಟೋಲ್ಟ್ ಬ್ರೆಖ್ಟ್ / ಜಿ ಎನ್ ರಂಗನಾಥರಾವ್
ನಿರ್ದೇಶನ : ಚಂದ್ರ ಕೀರ್ತಿ ಬಿ
ಥಿಯೇಟರ್ ಆರ್ಟಿಸ್ಟ್ರೀ, ಬೆಂಗಳೂರು

ಬ್ರೆಖ್ಟನ ಎಪಿಕ್ ಥಿಯೇಟರ್ ಶೈಲಿಯ ಸ್ಪಷ್ಟ ಉದಾಹರಣೆ ಈ ನಾಟಕ. ನಾಟಕ ಒಂದು ಸಾಮಾನ್ಯ ಹಳ್ಳಿಯ ಹುಡುಗಿ ಒಂದು ಮಗುವನ್ನು ಅದರ ತಾಯಿಯಿಂದ ರಕ್ಷಿಸುವ ಒಂದು ನೀತಿಕತೆಯಂತೆ ತೋರಿದರೂ, ಮತ್ತೊಂದು ಕತೆ ಇದರಲ್ಲಿ ಮಿಳಿತವಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

ಡಿಸೆಂಬರ್ 16 ವಿ ಟೀಚ್ ಲೈಫ್ ಸರ್

ಡಿಸೆಂಬರ್ 16 ವಿ ಟೀಚ್ ಲೈಫ್ ಸರ್

ವಿ ಟೀಚ್ ಲೈಫ್ ಸರ್
(ಯುದ್ಧದ ಒಡೆದ ಚಿತ್ರಗಳು)
ಕನ್ನಡ, 80ನಿಮಿಷಗಳು
ಪ್ರಶಾಂತ್ ಉದ್ಯಾವರ
ಸಂಗಮ ಕಲಾವಿದೆರ್, ಮಣಿಪಾಲ

ಯುದ್ಧದ ಕುರಿತಾದ ಒಂದು ಪ್ರಯೋಗಾತ್ಮಕ ಕೃತಿ. ಪ್ಯಾಲೆಸ್ತೀನ್ ಯುದ್ಧದ ಕತೆ ಮತ್ತು ಕಾವ್ಯವನ್ನು ಆಧರಿಸಿದ ಈ ನಾಟಕ ಕೇವಲ ವಾಚ್ಯವಾಗದೇ ದೃಶ್ಯ ಹಾಗೂ ಆಂಗಿಕವಾಗಿಯೂ ರೂಪುಗೊಳ್ಳುತ್ತದೆ.

English summary
Ranga Shankara young theatre festival 2017 is being celebrated from December 12 to 17, 2017 in which five dramas will be staged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X