ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರಂತೆ ರಮ್ಯಾ

|
Google Oneindia Kannada News

Recommended Video

ರಮ್ಯಾ ವಿಶ್ರಾಂತಿಯಲ್ಲಿದ್ದಾರೆ ಎಂದ ಪುಷ್ಪಾ ಅಮರ್‍ನಾಥ್

ಬೆಂಗಳೂರು, ಜೂನ್ 19: ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ತಮ್ಮ ಟ್ವಿಟ್ಟರ್ ಖಾತೆ ಡಿಆಕ್ಟಿವೇಟ್ ಮಾಡಿ ವಾರಗಳೇ ಕಳೆದಿದೆ. ಸದ್ಯ ಅವರು ಸಾರ್ವಜನಿಕವಾಗಲೀ, ಸಾಮಾಜಿಕ ಜಾಲತಾಣಗಳಲ್ಲಾಗಲೀ ಕಾಣಿಸುತ್ತಿಲ್ಲ. ರಮ್ಯಾ ಅವರು ಕಾಂಗ್ರೆಸ್ ಸೋಲಿನ ಬಳಿಕ ರಾಜಕೀಯ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ ಎನ್ನಲಾಗುತ್ತಿದೆ. ಖಾಸಗಿ ಪತ್ರಿಕೆಯೊಂದು ಅವರು ರಾಹುಲ್ ಗಾಂಧಿ ಅವರಿಗೆ ವಂಚನೆ ಎಸಗಿದ್ದಾರೆ ಎಂಬ ವರದಿ ಪ್ರಕಟಿಸಿತ್ತು. ಆದರೆ, ಇದಾವುದಕ್ಕೂ ಪ್ರತಿಕ್ರಿಯೆ ನೀಡಲು ಅವರು ಲಭ್ಯವಾಗುತ್ತಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಹಗಲೂ ರಾತ್ರಿ ಕೆಲಸ ಮಾಡಿ ಸುಸ್ತಾಗಿದ್ದ ರಮ್ಯಾ ಈಗ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರಂತೆ.

ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಅಂದಿದ್ದಕ್ಕೆ ಅಸಲಿ ಕಾರಣ ಇದೇನಾ? ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಅಂದಿದ್ದಕ್ಕೆ ಅಸಲಿ ಕಾರಣ ಇದೇನಾ?

ರಮ್ಯಾ ಅವರು ಒಂದು ತಿಂಗಳ ಮಟ್ಟಿಗೆ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ರಮ್ಯಾ ಅವರು ರಾಜಕೀಯವಾಗಿ ಹಾಗೂ ಪಕ್ಷ ಸಂಘಟನೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ್ದರು. ಬಿಜೆಪಿ ವೈಫಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳಲ್ಲಿ ಅನೇಕ ಬಾರಿ ಯಶಸ್ವಿಯಾಗಿದ್ದರು. ಅವರು ಅಷ್ಟು ಸಕ್ರಿಯರಾಗಿರಲಿಲ್ಲ ಎನ್ನುವುದು ಸತ್ಯವಲ್ಲ ಎಂದು ಪುಷ್ಪಾ ಅಮರನಾಥ್ ಹೇಳಿದ್ದಾರೆ.

ಆರೋಪಕ್ಕೆ ಸಾಕ್ಷ್ಯ ನೀಡಲಿ

ಆರೋಪಕ್ಕೆ ಸಾಕ್ಷ್ಯ ನೀಡಲಿ

ರಮ್ಯಾ ಅವರು ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರ. ಅವರು ಹಾಗೆ ಮಾಡಿರಲು ಸಾಧ್ಯವಿಲ್ಲ ಎಂಬ ಭರವಸೆಯಿದೆ. ವಿಚಾರ ಗೊತ್ತಿಲ್ಲದೆ ಅದರ ಕುರಿತು ಮಾತನಾಡಲು ಸಾಧ್ಯವಿಲ್ಲ. ಆರೋಪ ನಿಜವಾಗಿದ್ದರೆ ಅದಕ್ಕೆ ಸಾಕ್ಷ್ಯ ನೀಡಬೇಕು. ಗಾಳಿ ಸುದ್ದಿ ಹರಡಿಸುವುದು ಸರಿಯಲ್ಲ. ಅವರು ಪಕ್ಷದ ಕಾರ್ಯಕರ್ತೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದರು.

ರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರುರಮ್ಯಾ ಥ್ಯಾಂಕ್ ಯೂ, 2024ಕ್ಕೆ ಮತ್ತೆ ಸಿಗೋಣ ಎಂದ ಟ್ವಿಟ್ಟಿಗರು

ಜನ ನಮ್ಮನ್ನು ಕೈಬಿಟ್ಟಿಲ್ಲ

ಜನ ನಮ್ಮನ್ನು ಕೈಬಿಟ್ಟಿಲ್ಲ

ಚುನಾವಣೆಯಲ್ಲಿ ಹಿನ್ನಡೆಯಾಗಿರುವುದು ಹೌದು. ಹಾಗೆಂದು ಜನರು ನಮ್ಮನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ ಎಂಬ ವಿಶ್ವಾಸದಿಂದ ಮತ್ತೆ ಪಕ್ಷದ ಕೆಲಸ ಮಾಡುತ್ತೇವೆ. ರಮ್ಯಾ ಅವರ ತಂಡ ಚುನಾವಣೆ ಸಂದರ್ಭದಲ್ಲಿ ದಿನದ 24 ಗಂಟೆ ಕೆಲಸ ಮಾಡಿತ್ತು. ನಿರಂತರವಾಗಿ ವಿದ್ಯಮಾನಗಳನ್ನು ಗಮನಿಸಿ ಅದಕ್ಕೆ ಪ್ರತಿಕ್ರಿಯೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಈ ಕಾರಣದಿಂದ ಅವರು ವಿಶ್ರಾಂತಿ ಮೊರೆ ಹೋಗಿರುತ್ತಾರೆ. ಸಾಮಾಜಿಕ ಜಾಲತಾಣ ಮತ್ತೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ಡಿಆಕ್ಟಿವೇಟ್

ಸಾಮಾಜಿಕ ಜಾಲತಾಣ ಡಿಆಕ್ಟಿವೇಟ್

ಲೋಕಸಭೆ ಚುನಾವಣೆಯ ಸೋಲಿನ ಬಳಿಕ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ಟ್ವೀಟ್ ಮಾಡುತ್ತಿದ್ದ ಅವರು ಅನೇಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ, ಈ ತಿಂಗಳ ಆರಂಭದಿಂದ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನೇ ಡಿಆಕ್ಟಿವೇಟ್ ಮಾಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಕಾಂಗ್ರೆಸ್ ಸಾಮಾಜಿಕ ಜಾಲ ತಾಣ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ಖಾತೆ ನಿಷ್ಕ್ರಿಯ

ನಿರ್ಗಮನದ ಸುತ್ತ ಹಲವು ಊಹಾಪೋಹ

ನಿರ್ಗಮನದ ಸುತ್ತ ಹಲವು ಊಹಾಪೋಹ

ಟ್ವಿಟ್ಟರ್ ಮತ್ತು ಇನ್‌ಸ್ಟಾ ಗ್ರಾಂ ಖಾತೆಯಲ್ಲದೆ ಕಾಂಗ್ರೆಸ್‌ನ ಆಂತರಿಕ ವಾಟ್ಸ್‌ಆಪ್ ಗ್ರೂಪ್‌ನಿಂದಲೂ ಅವರು ಹೊರಹೋಗಿದ್ದಾರೆ ಎನ್ನಲಾಗಿದೆ. ರಾಜಕೀಯ ಚಟುವಟಿಕೆಗಳಿಂದ ಕೆಲವು ಸಮಯ ವಿರಾಮ ಪಡೆದುಕೊಳ್ಳಲು ಅವರು ನಿರ್ಧರಿಸಿದ್ದಾರೆ. ಪಕ್ಷದ ನಾಯಕರು, ಸದಸ್ಯರು ಒಂದು ತಿಂಗಳು ಮಾಧ್ಯಮಗಳ ಚರ್ಚೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಕಾಂಗ್ರೆಸ್ ಸೂಚನೆ ನೀಡಿತ್ತು. ಅದರ ಭಾಗವಾಗಿಯೇ ರಮ್ಯಾ ಟ್ವಿಟ್ಟರ್ ಖಾತೆ ಬಂದ್ ಮಾಡಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

English summary
Women Congress President Pushpa Amarnath said that, Party's social media chief Ramya is on rest as she was worked for the party during Lok sabha elections day and night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X