• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಬಿಜೆಪಿ ಮುಕ್ತ ಭಾರತ', ಮೋದಿಗೆ ಟ್ವೀಟ್ ಮಾಡಿದ ರಮ್ಯಾ

|
   5 states assembly election results 2018:ಬಿಜೆಪಿ ಮುಕ್ತ ಭಾರತ', ಮೋದಿಗೆ ಟ್ವೀಟ್ ಮಾಡಿದ ರಮ್ಯಾ

   ಬೆಂಗಳೂರು, ಡಿಸೆಂಬರ್ 11: ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಮತ್ತೊಮ್ಮೆ ಪ್ರಹಾನಿ ಮೋದಿ ಅವರನ್ನು ಕೆಣಕಿದ್ದಾರೆ. ಐದು ರಾಜ್ಯಗಳ ಚುನಾವಣೆ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಮೋದಿ ಅವರ ಜನಪ್ರಿಯ ಡೈಲಾಗ್ ರಿಪೀಟ್ ಮಾಡಿ, ತಿರುಗೇಟು ನೀಡಿದ್ದಾರೆ.

   ಪ್ರಧಾನಿ ಮೋದಿ ಅವರು ಈ ಹಿಂದೆ ಐದು ರಾಜ್ಯಗಳ ಚುನಾವಣೆ ಬಗ್ಗೆ ಮಾಡಿದ್ದ ಟ್ವೀಟ್ ವೊಂದನ್ನು ಪುನಃ ಟ್ವೀಟ್ ಮಾಡಿರುವ ರಮ್ಯಾ, ಅದರಲ್ಲಿ 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಮೋದಿ ಅವರ ಘೋಷಣೆಯನ್ನು ಬದಲಾಯಿಸಿ ಬಿಜೆಪಿ ಮುಕ್ತ ಭಾರತ ಎಂದು ತಿದ್ದಿದ್ದಾರೆ.

   5 ವರ್ಷಗಳಲ್ಲಿ ಭಾರತದ 'ಬಣ್ಣ' ಎಷ್ಟೆಲ್ಲ ಬದಲಾಯಿತು ನೋಡಿ...

   ಈ ಮೂಲಕ ಇಂದು(ಡಿ.11) ಬಂದಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ. ಐದು ರಾಜ್ಯಗಳಲ್ಲಿ ಬಿಜೆಪಿ ಮುಕ್ತವಾಗಿದೆ ಎಂದು ಕಾಲೆಳೆದಿದ್ದಾರೆ.

   ರಮ್ಯಾ ಅವರ ಟ್ವೀಟ್ ಗೆ ಮೋದಿ ಅಭಿಮಾನಿಗಳು ತಿರುಗೇಟು

   ರಮ್ಯಾ ಅವರ ಟ್ವೀಟ್ ಗೆ ಮೋದಿ ಅಭಿಮಾನಿಗಳು ತಿರುಗೇಟು

   ಆದರೆ, ರಮ್ಯಾ ಅವರ ಟ್ವೀಟ್ ಗೆ ಮೋದಿ ಅಭಿಮಾನಿಗಳು ತಿರುಗೇಟು ನೀಡಿದ್ದು, ಮಾಜಿ ಸಂಸದೆಯಾದ ನೀವು, ಮಂಡ್ಯಕ್ಕೆ ಬಂದು ಮತದಾನ ಮಾಡಲಿಲ್ಲ, ನಿಮ್ಮ ಗಾಡ್ ಫಾದರ್ ರೀತಿ ಇದ್ದ ಅಂಬರೀಷ್ ಅವರ ಅಂತಿಮ ದರ್ಶನಕ್ಕೂ ಬರಲಿಲ್ಲ, ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದಿದ್ದಾರೆ.

   ರಾಹುಲ್ ಮತ್ತು ಮೋದಿ ನಡುವೆ ಅಂತಿಮ ನಗೆ ನಕ್ಕವರು ಯಾರು?

   ಇವಿಎಂ ದೋಷ

   ಇನ್ನು ಕೆಲವರು, ಇವಿಎಂ ದೋಷದ ಬಗ್ಗೆ ಕಾಂಗ್ರೆಸ್ ಟೀಕಿಸುವುದನ್ನು ಉಲ್ಲೇಖಿಸಿ, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದಾಗ ಎಲ್ಲವೂ ಸರಿಯಿತ್ತು. ಟಿಆರ್ ಎಸ್ ಗೆಲ್ಲತೊಡಗಿದಾಗ ಇವಿಎಂ ದೋಷ ಕಾಣಿಸಿಕೊಂಡಿತು ಎನ್ನುವ ಕಾಂಗ್ರೆಸ್ ನಂಬುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

   ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ

   ಐದು ರಾಜ್ಯಗಳ ಚುನಾವಣೆ

   ಐದು ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರ ಬಂದಿದ್ದು, ಮಿಜೋರಾಂ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.

   ರಾಜಸ್ಥಾನ ಹಾಗೂ ಛತ್ತೀಸ್ ಗಡದಲ್ಲಿ ಬಿಜೆಪಿಯೇತರ ಸರ್ಕಾರ

   ರಾಜಸ್ಥಾನ ಹಾಗೂ ಛತ್ತೀಸ್ ಗಡದಲ್ಲಿ ಬಿಜೆಪಿಯೇತರ ಸರ್ಕಾರ ಬರುವ ಸಾಧ್ಯತೆ ಹೆಚ್ಚಿದೆ. ಮಧಪ್ರದೇಶದಲ್ಲಿ ಇನ್ನೂ(ಸಮಯ 10 ಗಂಟೆ) ಫಲಿತಾಂಶ ಬಂದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಹೋರಾಟ ಮುಂದುವರೆದಿದ್ದು, ಎಸ್ಪಿ, ಬಿಎಸ್ಪಿ ಹಾಗೂ ಪಕ್ಷೇತರರ ನೆರವು ಅಗತ್ಯವಾಗಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Congress social media head Ramya alias Divya Spandana again targets PM Modi. Ramya changed a text of a old tweet of Modi which was congratulating 5 state election result.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more