ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜೊತೆ ಸುಧಾಕರ್ ಸಭೆ

|
Google Oneindia Kannada News

ಬೆಂಗಳೂರು, ಆಗಸ್ಟ್ 19: ರಾಜ್ಯದಲ್ಲಿ ಕೊರೊನಾ ಸೋಂಕಿತರನ್ನು ಬೇಗನೆ ಪತ್ತೆ ಮಾಡಲು, ನಿಗದಿಪಡಿಸಿದ ಗುರಿಯಂತೆ ಪರೀಕ್ಷೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

Recommended Video

ಪ್ಲಾಸ್ಮಾ ದಾನ ನೀಡಿ ಮಾದರಿಯಾದ ಶಾಸಕ ಡಾ.ರಂಗನಾಥ್ | Oneindia Kannada

ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಅವರು ವಿಡಿಯೋ ಸಭೆ ನಡೆಸಿದರು. ಕೋವಿಡ್ ಪರೀಕ್ಷೆಯ ಉಸ್ತುವಾರಿ ಎಸಿಎಸ್ ಡಾ.ಶಾಲಿನಿ ರಜನೀಶ್ ಪಾಲ್ಗೊಂಡಿದ್ದರು.

ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಅಳವಡಿಕೆ: ಸುಧಾಕರ್ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕ ಅಳವಡಿಕೆ: ಸುಧಾಕರ್

"ಕೊರೊನಾ ಸೋಂಕಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಬಹುದು. ಆದ್ದರಿಂದ ಪ್ರತಿ ಪ್ರಯೋಗಾಲಯಗಳಲ್ಲಿ ನಿಗದಿ ಮಾಡಿದಷ್ಟು ಸಂಖ್ಯೆಯಲ್ಲಿ ಪರೀಕ್ಷೆ ನಡೆಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲು ಇರುವ ಅಡ್ಡಿಗಳನ್ನು ನಿವಾರಿಸಲು ಸರ್ಕಾರದಿಂದ ಎಲ್ಲ ಬಗೆಯ ನೆರವು ನೀಡಲಾಗುವುದು" ಎಂದು ಸಚಿವ ಡಾ.ಕೆ.ಸುಧಾಕರ್ ಸಭೆಗೆ ತಿಳಿಸಿದರು.

Ramp up testing to achieve target: Minister Sudhakar urges Medical colleges

ಆನ್ ಲೈನ್ ನಲ್ಲೇ ವರದಿ

"ಕೋವಿಡ್ ಪರೀಕ್ಷೆಯ ವರದಿಯನ್ನು ಇನ್ನು ಮುಂದೆ ವೆಬ್ ಸೈಟ್ ನಲ್ಲೇ ಪಡೆಯಬಹುದು. ಕೊರೊನಾ ಪರೀಕ್ಷೆ ಮಾಡಿಸಿಕೊಂಡವರು ತಮ್ಮ ಎಸ್‍ಆರ್ ಎಫ್ ಗುರುತು ಬಳಸಿ www.covidwar.karnataka.gov.in/service1 ನಲ್ಲಿ ಆನ್ ಲೈನ್ ನಲ್ಲೇ ಪರೀಕ್ಷೆಯ ವರದಿಯನ್ನು ಪಡೆಯಬಹುದು" ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Ramp up testing to achieve target: Minister Sudhakar urges Medical colleges

ಇನ್ನೊಂದು ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ : ಸಚಿವ ಸುಧಾಕರ್ ಇನ್ನೊಂದು ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ : ಸಚಿವ ಸುಧಾಕರ್

ಕೆರೆಗಳಿಗೆ ನೀರು

ವೃಷಭಾವತಿ ಕಣಿವೆಯಿಂದ 308 ದಶಲಕ್ಷ ಲೀಟರ್ ಸಂಸ್ಕರಿತ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 224 ಕೆರೆಗಳಿಗೆ ಹರಿಸುವ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು.

English summary
For early detection and treatment we need to conduct more number of Covid tests says medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X