ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎ ರಮೇಶ್ ಆತ್ಮಹತ್ಯೆ, ಇಂದು ಪರಮೇಶ್ವರ ವಿಚಾರಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ತಮ್ಮ ಆಪ್ತ ಸಹಾಯಕರಾಗಿದ್ದ ರಮೇಶ್ ಸಾವಿನ ಕುರಿತು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಗುರುವಾರ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಿ ಪರಮೇಶ್ವರ ಅವರ ಆಪ್ತ ಸಹಾಯಕರಾಗಿದ್ದ ರಮೇಶ್ ಅ.12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಜ್ಞಾನಭಾರತಿ ಕ್ಯಾಂಪಸ್‌ನ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಮೇಶ್ ಮೃತದೇಹ ಪತ್ತೆಯಾಗಿತ್ತು.

ರಮೇಶ್ ಅಸಹಜ ಸಾವು; ಸರ್ಕಾರಕ್ಕೆ ಪರಮೇಶ್ವರ ಮನವಿ ಏನು?ರಮೇಶ್ ಅಸಹಜ ಸಾವು; ಸರ್ಕಾರಕ್ಕೆ ಪರಮೇಶ್ವರ ಮನವಿ ಏನು?

ಇದಾದ ಬಳಿಕ ರಮೇಶ್ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನಭಾರತಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ಸಂಬಂಧ ಪರಮೇಶ್ವರ ಕಾರಿನ ಚಾಲಕ ಸೇರಿದಂತೆ ಅನೇಕರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

PA Ramesh Suicide Case Parameshwara Trial Today

ಇದೀಗ ಪ್ರಕರಣ ಸಂಬಂಧ ಪರಮೇಶ್ವರ ಅವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಗುರುವಾರ ವಿಚಾರಣೆ ನಡೆಸಲಿದ್ದಾರೆ. ಪರಮೇಶ್ವರ ಅವರ ಹೇಳಿಕೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ರಮೇಶ್ ಸಾವಿನ ಕುರಿತು ಹಲವು ಗೊಂದಲಗಳು ಉಂಟಾಗಿವೆ. ಯಾವುದಾದರೂ ತನಿಖಾ ಸಂಸ್ಥೆ ಮೂಲಕ ಈ ಕುರಿತು ಸಮಗ್ರವಾದ ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದರು.

ರಮೇಶ್ ಸಾವಿನ ಬಗ್ಗೆ ಹಲವು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾನೇ ಕೊಲ್ಲಿಸಿದ್ದೇನೆ ಎಂದು ಕೆಲವು ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದರು.
ರಮೇಶ್ ಸಾವಿನ ಕುರಿತು ಹಲವು ಗೊಂದಲಗಳು ಉಂಟಾಗಿವೆ.

ಆದ್ದರಿಂದ, ಸರ್ಕಾರ ಮತ್ತು ಗೃಹ ಸಚಿವರಿಗೆ ಮನವಿ ಮಾಡುವೆ. ಯಾವುದಾದರೂ ಸಂಸ್ಥೆ ಮೂಲಕ ತನಿಖೆ ಮಾಡಿಸಿ ಎಂದು ಪರಮೇಶ್ವರ ಒತ್ತಾಯಿಸಿದರು.

English summary
Ramesh's death case Former Deputy chief minister Dr G Prameshwara is likely to be interrogated by Jnanabharathi police on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X