ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಶಾಸಕ ರಮೇಶ್ ಕುಮಾರ್ ಭೂ ಅತಿಕ್ರಮಣ ನಿಜ'

By Srinath
|
Google Oneindia Kannada News

ಬೆಂಗಳೂರು, ಮೇ 22: ಭೂ ಅತಿಕ್ರಮಣ ಹಗರಣದಲ್ಲಿ ಸಿಲುಕಿಕೊಂಡು ನಾನಾ ಪಡಿಪಾಟಲು ಪಡುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ರಮೇಶ್ ಕುಮಾರ್ ಅವರಿಗೆ ಸದ್ಯಕ್ಕೆ ಕಂಟಕದಿಂದ ಬಚಾವಾಗುವ ಮಾರ್ಗ ಇಲ್ಲವಾಗಿದೆ.

'ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಅವರು ಭೂ ಅತಿಕ್ರಮಣ ಮಾಡಿರುವುದು ನಿಜ. ಈ ಹಿಂದೆಯೂ ನಾನು ಇದನ್ನೇ ಹೇಳಿದ್ದೇನೆ. ಇದಕ್ಕೆ ನೀವು ಏನು ಶಿಕ್ಷೆ ಕೊಟ್ಟರೂ ಪರವಾಗಿಲ್ಲ. ಆದರೆ ಈಗಲೂ ನನ್ನ ಮಾತಿಗೆ ಬದ್ಧನಾಗಿದ್ದೇನೆ' ಎಂದು ಮಾಜಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ ಬಾಲಸುಬ್ರಮಣ್ಯಂ ಹೇಳಿದ್ದಾರೆ. ಇದರಿಂದ ಶಾಸಕ ರಮೇಶ್ ಕುಮಾರ್ ಭೂ ಅತಿಕ್ರಮಣದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಸ್ಆರ್ ಹಿರೇಮಠ್ ಅವರು ನಡೆಸುತ್ತಿರುವ ಹೋರಾಟಕ್ಕೆ ಆನೆಬಲ ಬಂದಂತಾಗಿದೆ.

ನಿನ್ನೆ ಬುಧವಾರ ವಿಧಾನಸೌಧದಲ್ಲಿ ಹಕ್ಕುಬಾಧ್ಯತಾ ಸಮಿತಿಯೆದುರು ಹಾಜರಾದ ಮಾಜಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ ಬಾಲಸುಬ್ರಮಣ್ಯಂ ಅವರು ಮೇಲಿನ ಹೇಳಿಕೆ ನೀಡಿದ್ದು, ನಾನು ರಮೇಶ್ ಕುಮಾರ್ ಅವರ ಬಳಿ ಕ್ಷಮಾಪಣೆ ಕೇಳುವ ಪ್ರಶ್ನೆಯೇ ಇಲ್ಲ. ಅಥವಾ ನನ್ನ ಹಿಂದಿನ ನಿಲುವನ್ನು ಬದಲಿಸಿಕೊಳ್ಳುವ ಪ್ರಮೇಯವೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. (ಹಕ್ಕುಚ್ಯುತಿ: ನನಗ್ಯಾವ ಹೆದರಿಕೆಯೂ ಇಲ್ಲ- ಹಿರೇಮಠ್)

ramesh-kumar-has-encroached-land-v-balasubramanian-sticks-to-his-claim

'ರಮೇಶ್ ಕುಮಾರ್ ಅವರಂತಹ ವ್ಯಕ್ತಿಗಳು ಭಾರಿ ಪ್ರಮಾಣದಲ್ಲಿ ಭೂ ಅತಿಕ್ರಮಣ ನಡೆಸಿದ್ದಾರೆ. ಇಂತಹವರಿಗೆ ಯಾವುದೇ ಶಾಸಕಾಂಗ ಸಮಿತಿಗಳಲ್ಲಿ ಸ್ಥಾನ ನೀಡಬಾರದು' ಎಂದು ಬಾಲಸುಬ್ರಮಣ್ಯಂ ಅವರು ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇದರಿಂದ ಕೆಂಡಾಮಂಡಲಗೊಂಡ ಶಾಸಕ ರಮೇಶ್ ಕುಮಾರ್ ಅವರು, ಬಾಲಸುಬ್ರಮಣ್ಯಂ ಅವರು ನನ್ನ ಹೆಸರಿಗೆ ಕಳಂಕ ತರುತ್ತಿದ್ದಾರೆ. ಶಾಸಕನಾಗಿ ಕೆಲಸ ಮಾಡಲು ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಬಾಲಸುಬ್ರಮಣ್ಯಂ ಅವರಿಂದ ಹಕ್ಕುಚ್ಯುತಿ ಮಾಡಿದಂತಾಗಿದೆ' ಎಂದು ಸ್ಪೀಕರ್ ಗೆ ಅಲವತ್ತುಕೊಂಡಿದ್ದರು.

ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸಿದ್ದರು. 'ಭೂ ಅತಿಕ್ರಮಣಕಾರರಿಂದ ಸರಕಾರಿ ಜಮೀನನ್ನು ವಾಪಸ್ ಪಡೆಯುವ ಸಂಬಂಧ ನೇಮಿಸಲಾಗಿದ್ದ ಕಾರ್ಯಪಡೆಯ ಅಧ್ಯಕ್ಷನಾಗಿ ರಮೇಶ್ ಕುಮಾರ್ ಅವರಿಂದ ನಡದಿರುವ ಅತಿಕ್ರಮಣದ ಉದ್ದ ಅಗಲಗಳು ತನ್ನ ಸ್ಮೃತಿಯಲ್ಲಿ ಅಚ್ಚೊತ್ತಿವೆ. ಹಾಗಾಗಿ ನಾನು ನಿಜವನ್ನೇ ಹೇಳಿದ್ದೇನೆ. ನನ್ನ ವರದಿಯಲ್ಲೂ ಇದನ್ನು ದಾಖಲಿಸಿರುವೆ' ಎಂದು ಬಾಲಸುಬ್ರಮಣ್ಯಂ ಅವರು ಸಮಿತಿಯೆದರು ಸ್ಪಷ್ಟಪಡಿಸಿದ್ದಾರೆ.

ಸಮಿತಿಯ ಅಧ್ಯಕ್ಷ ಕೆಬಿ ಕೋಳಿವಾಡ್ ಮತ್ತು ಇತರ ಸದಸ್ಯರಾದ ಡಿಜಿ ಶಾಂತನಗೌಡ, ಸಿ ಪುಟ್ಟರಂಗ ಶೆಟ್ಟಿ ಮತ್ತು ನಿ ಮಂಜುನಾಥ್ ಅವರು ನಿನ್ನೆ ವಿಚಾರಣೆ ವೇಳೆ ಹಾಜರಿದ್ದರು. ಬಾಲಸುಬ್ರಮಣ್ಯಂ ಪರ ವಕೀಲ ವಿ ಧನಂಜಯ್ ಅವರೂ ಸಹ ಉಪಸ್ಥಿತರಿದ್ದರು. ಸಮಿತಿಯು ವಿಚಾರಣೆಯನ್ನು ಮುಂದೂಡಿದೆ. (ಚಿತ್ರ ಕೃಪೆ: ದಿ ಹಿಂದೂ)

English summary
Land scam: Srinivaspur Congress MLA KR Ramesh Kumar has encroached land -Ex-bureaucrat V Balasubramanian sticks to his claim. He informed the same to the Privilege Committee meeting held in Vidhan Soudha yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X